Thursday, March 28, 2024
Homeರಾಜಕೀಯಗ್ಯಾರಂಟಿಗಳನ್ನು ಟೀಕಿಸಿ ಬಿಜೆಪಿ ನಾಯಕರು ಫಲಾನುಭವಿಗಳಿಗೆ ಅಪಮಾನ ಮಾಡಿದ್ದಾರೆ : ಸಚಿವ ರಾಮಲಿಂಗಾರೆಡ್ಡಿ

ಗ್ಯಾರಂಟಿಗಳನ್ನು ಟೀಕಿಸಿ ಬಿಜೆಪಿ ನಾಯಕರು ಫಲಾನುಭವಿಗಳಿಗೆ ಅಪಮಾನ ಮಾಡಿದ್ದಾರೆ : ಸಚಿವ ರಾಮಲಿಂಗಾರೆಡ್ಡಿ

ನವದೆಹಲಿ,ಫೆ.7- ಪ್ರಧಾನಿ, ಕೇಂದ್ರದ ಹಣಕಾಸು ಸಚಿವೆ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸುವ ಮೂಲಕ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಅಪಮಾನ ಮಾಡುತ್ತಿದ್ದಾರೆಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಕಣ್ಣೂ, ಕಿವಿ, ಹೃದಯ ಯಾವುದೂ ಇಲ್ಲ. ಅನುದಾನ ನೀಡುವಂತೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಯಾದಿಯಾಗಿ ಸಂಪುಟದ ಎಲ್ಲಾ ಸಚಿವರು, ಪ್ರಧಾನಿಯವರಿಗೆ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಪಾಲು ನಮಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರದಿಂದಾಗುತ್ತಿರುವ ಅನ್ಯಾಯದ ವಿರುದ್ಧ ಇಂದು ನಾವು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದ 223 ತಾಲೂಕುಗಳನ್ನು ಬರಬಾತ ಎಂದು ಘೋಷಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೂ ಕೇಂದ್ರ ಸರ್ಕಾರ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು ಇದರ ವಿರುದ್ಧ ಧ್ವನಿ ಎತ್ತಿಲ್ಲ. ಅವರಿಗೆ ಅಕಾರ ಬೇಕು. ಕೇಂದ್ರದ ಬಿಜೆಪಿ ನಾಯಕರನ್ನು ಮೆಚ್ಚಿಸುವುದಷ್ಟೇ ಉದ್ದೇಶವಾಗಿದೆ. ರಾಜ್ಯದ ಜನರ ಹಿತರಕ್ಷಣೆ ಲೆಕ್ಕಕ್ಕಿಲ್ಲ ಎಂದು ಆರೋಪಿಸಿದರು.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಕ್ಸಲರ ಓಡಾಟ, ಹೈಅಲರ್ಟ್ ಘೋಷಣೆ

ರಾಜ್ಯದ ಬರ ಪರಿಸ್ಥಿತಿಗೆ ಹಣ ಬಿಡುಗಡೆ ಮಾಡಿಲ್ಲ ಎಂಬುದು ಕಣ್ಣೆದುರಿಗೆ ಇರುವ ಸತ್ಯ. ಇದರ ವಿರುದ್ಧ ಬಿಜೆಪಿಯ ಸಂಸದರು ಏಕೆ ಮೌನವಾಗುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕೇಂದ್ರ ಹಣಕಾಸು ಆಯೋಗವೇ ತೆರಿಗೆ ಪಾಲನ್ನು ಹಂಚುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಡಾಫೆಯ ಉತ್ತರ ನೀಡಿದ್ದಾರೆ. ಇವರು ರಾಜ್ಯದಿಂದ ಆಯ್ಕೆಯಾಗಿದ್ದವರು ಎಂದು ಹೇಳುವುದು ದುರಂತವಾಗಿದೆ ಎಂದರು.

ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಜನಸಾಮಾನ್ಯರಿಗೂ ಅರ್ಥವಾಗಿದೆ. ಅವರ ಅಭಿಪ್ರಾಯಕ್ಕನುಗುಣವಾಗಿ ನಾವಿಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

RELATED ARTICLES

Latest News