Sunday, April 28, 2024
Homeರಾಜ್ಯಬಿಜೆಪಿಯ ಬೇಡಿಕೆಯಂತೆ ಬಜೆಟ್ ವೇಳೆ ಶ್ವೇತ ಪತ್ರ ಹೊರಡಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ಬಿಜೆಪಿಯ ಬೇಡಿಕೆಯಂತೆ ಬಜೆಟ್ ವೇಳೆ ಶ್ವೇತ ಪತ್ರ ಹೊರಡಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ನವದೆಹಲಿ,ಫೆ.7- ಬಿಜೆಪಿಯ ಬೇಡಿಕೆಯಂತೆ ಕೇಂದ್ರದಿಂದ ರಾಜ್ಯಕ್ಕಾಗಿರುವ ಆರ್ಥಿಕ ತಾರತಮ್ಯದ ಕುರಿತು ಬಜೆಟ್ ವೇಳೆ ಶ್ವೇತ ಪತ್ರ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರದ ಆಯವ್ಯಯವೇ ಶ್ವೇತಪತ್ರವಿದ್ದಂತೆ. ಆದರೂ ಬಿಜೆಪಿಯವರು ಪ್ರತ್ಯೇಕವಾದ ಮಾಹಿತಿ ಕೇಳುತ್ತಿದ್ದಾರೆ. ಅವರ ಬೇಡಿಕೆಗನುಗುಣವಾಗಿ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಹೇಳಿದರು.’

ರಾಜ್ಯಸರ್ಕಾರದ ಎಲ್ಲಾ ಶಾಸಕರು, ಸಚಿವರು ದೆಹಲಿಯಲ್ಲಿ ಐತಿಹಾಸಿಕವಾದ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಗಮನ ಸೆಳೆಯುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು. 2017-18 ರಲ್ಲಿದ್ದ ಬಜೆಟ್ ಗಾತ್ರ 2024-25 ರ ವೇಳೆಗೆ ದ್ವಿಗುಣಗೊಂಡಿದೆ. ಹೀಗಾಗಿ ತೆರಿಗೆ ಹಾಗೂ ಅನುದಾನದ ಹಂಚಿಕೆಯೂ ಹೆಚ್ಚಾಗಬೇಕಿತ್ತು. 14 ನೇ ಹಣಕಾಸು ಆಯೋಗದಲ್ಲಿದ್ದಷ್ಟೇ ಪ್ರಮಾಣದ ತೆರಿಗೆ ಹಂಚಿಕೆಯಾಗಿದೆ.

ಇದರಿಂದ ರಾಜ್ಯಕ್ಕೆ 1.87 ಲಕ್ಷ ಕೋಟಿ ರೂ. ನಷ್ಟವಾಗಿದೆ. 14 ನೇ ಹಣಕಾಸು ಆಯೋಗದ ಮಾನದಂಡಗಳನ್ನೇ ಅನುಸರಿಸಿದರು. 14 ನೇ ಹಣಕಾಸು ಆಯೋಗದ ವೇಳೆಗೆ 62,098 ಕೋಟಿ ರೂ. ತೆರಿಗೆ ಪಾಲು ಹೆಚ್ಚಾಗಬೇಕಿತ್ತು. ಆದರೆ ಮಲತಾಯಿ ಧೋರಣೆಯಿಂದಾಗಿ ಭಾರಿ ಅನ್ಯಾಯವಾಗಿದೆ ಎಂದು ಟೀಕಿಸಿದರು.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಕ್ಸಲರ ಓಡಾಟ, ಹೈಅಲರ್ಟ್ ಘೋಷಣೆ

ರಾಜ್ಯಸರ್ಕಾರ ಕೇಂದ್ರದ ಎಲ್ಲಾ ಯೋಜನೆಗಳೊಂದಿಗೆ ಶೇ.50 ರಷ್ಟು ಪಾಲು ಹೊಂದಿದೆ. ಆ ಯೋಜನೆಗಳಿಗೂ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. 13 ಸಾವಿರ ಕೋಟಿ ರೂ. ಮಾತ್ರ ದೊರೆಯುತ್ತಿದೆ. ಎಲ್ಲಾ ವಿಷಯದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.ಇಂದು ಸೆಸ್ ಹಾಗೂ ಸರ್‍ಚಾರ್ಜ್‍ನಲ್ಲಿ ರಾಜ್ಯಕ್ಕೆ ಯಾವುದೇ ಪಾಲು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಾಂಕೇತಿಕ ಪ್ರತಿಭಟನೆ ಹೊರತಾಗಿಯೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇದ್ದರೆ ಹೋರಾಟವನ್ನು ಮುಂದುವರೆಸುತ್ತೇವೆ. ಜನತಾ ನ್ಯಾಯಾಲಯದಲ್ಲಿ ಕೇಂದ್ರದ ತಾರತಮ್ಯವನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯಕ್ಕೆ ಏಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬುದಕ್ಕೆ ಕೇಂದ್ರ ಸರ್ಕಾರವೇ ಉತ್ತರ ನೀಡಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಬಡವರಿಗೆ ಅಕ್ಕಿ ನೀಡುತ್ತೇವೆ ಎಂದರೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅಕ್ಕಿ ನೀಡದೇ ಬಡವರ ವಿರೋಯಾಗಿ ನಡೆದುಕೊಂಡಿದೆ ಎಂದು ಟೀಕಿಸಿದರು.

RELATED ARTICLES

Latest News