Sunday, November 24, 2024
Homeಮನರಂಜನೆರಾಮನ ಅವತಾರವನ್ನು ಮೆಚ್ಚಿದ ಜನ

ರಾಮನ ಅವತಾರವನ್ನು ಮೆಚ್ಚಿದ ಜನ

ಇತ್ತೀಚೆಗೆ ಥಿಯೇಟರ್ ಗಳತ್ತ ಪ್ರೇಕ್ಷಕರು ಬರುತ್ತಿಲ್ಲ ಎಂಬ ವಾದದ ನಡುವೆ ಈ ವಾರ ತರೆ ಕಂಡ ರಾಮನ ಅವತಾರ ಚಿತ್ರ ಉತ್ತಮ ಪ್ರದರ್ಶನ ಕೊಡುವ ಮೂಲಕ ಅದನ್ನು ಸುಳ್ಳು ಮಾಡಿದೆ. ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನವನ್ನು ಕಂಡು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಒಂದು ಹೊಸ ಕಂಟೆಂಟ್ ನೊಂದಿಗೆ ಪ್ರಯೋಗಾತ್ಮಕ ಅಂಶಗಳನ್ನು ಚಿತ್ರಕಥೆಯಲ್ಲಿ ತರಲಾಗಿದೆ.

ರಾಮಾಯಣದ ಕಲ್ಪನೆಯನ್ನು ಪ್ರಸ್ತುತ ಸಮಾಜಕ್ಕೆ ತಿಳಿಸುವ ಪ್ರಯತ್ನದಲ್ಲಿ ನಿರ್ದೇಶಕ ವಿಕಾಸ್ ಪಂಪಾಪತಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ರಾಮ, ಸೀತೆ, ರಾಮರಾಜ್ಯ, ಪಟ್ಟಾಭಿಷೇಕ ಎಲ್ಲಾ ಅಂಶಗಳು ಇದ್ದರೂ ಇದು ಪೌರಾಣಿಕ ಸಿನಿಮಾ ಶೈಲಿಯಲ್ಲಿ ಮೂಡಿಬಂದಿರುವ ಸಿನಿಮಾ ಅಲ್ಲ. ಆದರೂ ಆ ಎಲ್ಲಾ ವಿಚಾರಗಳು ಆಧುನಿಕ ಸೀತಾ ರಾಮನ ಕಥೆಯಲ್ಲಿ ಬಂದು ಹೋಗುತ್ತವೆ.ಆಧುನಿಕ ರಾಮನಾಗಿ ರಿಶಿ ಮತ್ತು ಸೀತೆಯಾಗಿ ನಾಯಕಿ ಪ್ರಣೀತಾ ಸುಭಾಷ್ ಸಂಪೂರ್ಣ ಕಥೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುವ ರೀತಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ.

ಕಥಾನಾಯಕ ರಾಮನಿಗೆ ತನ್ನ ಊರನ್ನು ಉದ್ಧಾರ ಮಾಡಬೇಕೆಂಬ ಹೆಬ್ಬಯಕೆ . ಅದರಲ್ಲೂ ಯುವಕರಿಗೆ ಉದ್ಯೋಗ ಕೊಡಿಸಬೇಕೆಂಬ ಹಂಬಲ. ಇದಕ್ಕಾಗಿ ಒಂದು ತಂಡವನ್ನು ಕಟ್ಟಿಕೊಂಡು ಅದರ ಮೂಲಕ ತನ್ನ ಕನಸುಗಳನ್ನು ಈಡೇರಿಸಲು ಹೋರಾಡುತ್ತನೆ. ಇವೆಲ್ಲವನ್ನೂ ಸಾಧಿಸಲು ಚುನಾವಣೆಗೂ ಸ್ಪರ್ಧೆ ಮಾಡುತ್ತಾನೆ. ಕಥೆ ವೇಗ ಮತ್ತು ಬೇರೆ ಆಯಾಮ ಪಡೆದುಕೊಳ್ಳುವುದು ಊರಿನಲ್ಲಿ ನಡೆಯುವ ಪೌರಾಣಿಕ ನಾಟಕದಿಂದ. ನಾಯಕ ರಾಮನ ಪಾತ್ರಧಾರಿ ಆಗಿರುತ್ತಾನೆ ಅಲ್ಲಿಂದ ಏನೆಲ್ಲಾ ಆಗುತ್ತದೆ ಎನ್ನುವುದು ಕಥೆಯ ಸಾರಾಂಶ. ರಾಮಾಯಣದಲ್ಲಿ ಬರುವ ಸೀತಾಪಹರಣ, ವನವಾಸ, ಶಬರಿ, ರಾವಣ, ರಾಮನ ಪಟ್ಟಾಭಿಷೇಕ ಇವೆಲ್ಲವೂ ಬಂದು ಹೋಗುತ್ತವೆ. ಪ್ರಸ್ತುತ ಸಮಾಜಕ್ಕೆ ರಾಮಾಯಣದ ಮಹತ್ವವನ್ನು ಸಾರುತ್ತ ಚಿತ್ರ ಆದರ್ಶವಾಗಿ ನೀಡುತ್ತದೆ. ಸಮಾಜಕ್ಕೆ ಮಾರಕವಾಗಿರುವ ಹುಡುಗಿಯರ ಕಿಡ್ನಾಪ್ ದಂಧೆ, ಮತ್ತು ಮಾದಕ ವಸ್ತುಗಳ ಬಗ್ಗೆ ಬೆಳಕು ಚೆಲ್ಲುತ್ತಾ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಟ್ಟಿದೆ.

ಸಂಪೂರ್ಣವಾಗಿ ಭಾವನಾತ್ಮಕ ಅಂಶಗಳ ಮೇಲೆ ಸಾಗುವ ರಾಮನ ಅವತಾರ ಚಿತ್ರದಲ್ಲಿ ಸಂಜಿತ್ ಹೆಗ್ಡೆಯವರ ಸಂಗೀತ ಸಂಯೋಜನೆ ಕತೆಗೆ ತುಂಬಾ ಹೊಂದಿಕೊಂಡಿದೆ. ಮಂಗಳೂರು ಸುತ್ತಮುತ್ತ ಚಿತ್ರಕಲೆಸಿರುವ ದೃಶ್ಯಗಳು ಚಿತ್ರವನ್ನು ವರ್ಣರಂಜಿತವಾಗಿಸಿದೆ. ನಿರ್ಮಾಪಕ ಅಮೇಜ್ ಸೂರ್ಯವಂಶಿ ಒಂದು ಸಂದೇಶಾತ್ಮಕ ಕಮರ್ಷಿಯಲ್ ಚಿತ್ರವನ್ನು ತರಲು ಸಂಪೂರ್ಣವಾಗಿ ಪ್ರಯತ್ನಿಸಿದ್ದಾರೆ ಎಂದು ಚಿತ್ರ ನೋಡಿದ ಪ್ರೇಕ್ಷಕರಿಗೆ ಅರಿವಾಗುತ್ತದೆ

RELATED ARTICLES

Latest News