Saturday, July 27, 2024
Homeರಾಜ್ಯಸ್ಕಿಲ್ ಕೌನ್ಸಿಲ್-ಫಾರ್ ಗ್ರೀನ್ ಜಾಬ್ಸ್ ಆಡಳಿತ ಮಂಡಳಿಯ ಸದಸ್ಯರಾಗಿ ರಮೇಶ್ ಶಿವಣ್ಣ ನೇಮಕ

ಸ್ಕಿಲ್ ಕೌನ್ಸಿಲ್-ಫಾರ್ ಗ್ರೀನ್ ಜಾಬ್ಸ್ ಆಡಳಿತ ಮಂಡಳಿಯ ಸದಸ್ಯರಾಗಿ ರಮೇಶ್ ಶಿವಣ್ಣ ನೇಮಕ

ಬೆಂಗಳೂರು,ಫೆ.12- ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳ ತಯಾರಕರ ಸಂಘ ಸಂಸ್ಥಾಪಕ ಅಧ್ಯಕ್ಷರಾದ ರಮೇಶ್ ಶಿವಣ್ಣ ಅವರು ಭಾರತ ಸರ್ಕಾರದ ಸ್ಕಿಲ್ ಕೌನ್ಸಿಲ್-ಫಾರ್ ಗ್ರೀನ್ ಜಾಬ್ಸ್ ನ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ರಮೇಶ್ ಅವರ ಪರಿಣತಿ ಮತ್ತು ಸಮರ್ಪಣೆಯನ್ನು ಮನಗಂಡು ಗ್ರೀನ್ ಸ್ಕಿಲ್ಸ್‍ಗಾಗಿ ಜರ್ಮನಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ವಿಧಾನಗಳನ್ನು ಅನ್ವೇಷಿಸಲು ಜಿಐಜೆಡ್ ಆಯೋಜಿಸಿರುವ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸುವ ಪ್ರತಿನಿ„ಗಳಲ್ಲಿ ಒಬ್ಬರಾಗಿ ಇವರನ್ನು ಆಯ್ಕೆ ಮಾಡಲಾಗಿದೆ.

ಸ್ಕಿಲ್ ಕೌನ್ಸಿಲ್ -ಫಾರ್ ಗ್ರೀನ್ ಜಾಬ್ಸ್ (ಎಸ್‍ಸಿಜಿಜೆ)ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿದ್ದು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್‍ನೊಂದಿಗೆ ಸಂಯೋಜಿಸಲ್ಪಟ್ಟಿದೆ. ನವೀಕರಿಸಬಹುದಾದ ಶಕ್ತಿ, ಹಸಿರು ಜಲಜನಕ, ಹಸಿರು ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ನೀರಿನ ತ್ಯಾಜ್ಯ ನಿರ್ವಹಣೆ ಮತ್ತು ಇ-ತ್ಯಾಜ್ಯ ನಿರ್ವಹಣೆ ಸೇರಿದಂತೆ ಸ್ಥಿತಿ ಸ್ಥಾಪಕ ತಂತ್ರಜ್ಞಾನಗಳಿಗೆ ಕೌಶಲ್ಯ ಶಕ್ತಿಯ ಅಗತ್ಯತೆಗಳನ್ನು ಪರಿಹರಿಸುವ ಗುರಿಯನ್ನು ಇದು ಹೊಂದಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಪ್ರಚಾರ ಮಾಡಲಾಗಿದೆ. ಹಸಿರು ಕೌಶಲ್ಯ ವಲಯದಲ್ಲಿ ಸುಸ್ಥಿರತೆಯ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ಎಸ್‍ಸಿಜಿಜೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಗವನಿರ್ಂಗ್ ಕೌನ್ಸಿಲ್ ಸದಸ್ಯರಾಗಿ ರಮೇಶ್ ಅವರ ನೇಮಕಾತಿಯು ಕೌನ್ಸಿಲ್‍ನ ಉಪಕ್ರಮಗಳಿಗೆ ಕೊಡುಗೆ ನೀಡಲು ಮತ್ತು ಹಸಿರು ಕೌಶಲ್ಯ ವಲಯದಲ್ಲಿ ಸುಸ್ಥಿರತೆಯ ಪ್ರಯತ್ನಗಳನ್ನು ಮುನ್ನಡೆಸಲು ಅಸಾಧಾರಣ ಅವಕಾಶವನ್ನು ಒದಗಿಸುತ್ತದೆ. ತಮ್ಮ ಅನುಭವದ ಸಂಪತ್ತು ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳ ಆಳವಾದ ತಿಳುವಳಿಕೆಯೊಂದಿಗೆ, . ಶಿವಣ್ಣ ಅವರು ಮಿಷನ್‍ಗೆ ಗಮನಾರ್ಹ ಕೊಡುಗೆಗಳನ್ನು ನೀಡಲು ಉತ್ತಮ ಸ್ಥಾನದಲ್ಲಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ

ಇದರ ಬಗ್ಗೆ ಮಾತನಾಡಿದ ರಮೇಶ್ ಶಿವಣ್ಣ, ಹಸಿರು ಕೌಶಲ್ಯ ವಲಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಹೆಚ್ಚಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ನೇಮಕ ಮಾಡಿದ್ದಕ್ಕೆ ಕೃತಜ್ಞತೆ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ಸಹಯೋಗ ಮತ್ತು ನಾವೀನ್ಯತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

RELATED ARTICLES

Latest News