Friday, November 22, 2024
Homeರಾಜ್ಯರಾಮೇಶ್ವರ ಕೆಫೆ ಸ್ಫೋಟ : ಮತ್ತಿಬ್ಬರನ್ನು ವಶಕ್ಕೆ ಪಡೆದು ಎನ್‍ಐಎ ವಿಚಾರಣೆ

ರಾಮೇಶ್ವರ ಕೆಫೆ ಸ್ಫೋಟ : ಮತ್ತಿಬ್ಬರನ್ನು ವಶಕ್ಕೆ ಪಡೆದು ಎನ್‍ಐಎ ವಿಚಾರಣೆ

ಬೆಂಗಳೂರು,ಮಾ.28-ರಾಮೇಶ್ವರ ಕೆಫೆ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಮತ್ತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.ನಿನ್ನೆ ಎನ್‍ಐಎ ಅಧಿಕಾರಿಗಳ ತಂಡ ಬೆಂಗಳೂರು ನಗರ, ತೀರ್ಥಹಳ್ಳಿ, ಭಟ್ಕಳ ಮುಂತಾದ ಕಡೆ ಏಕಕಾಲದಲ್ಲಿ ದಾಳಿ ಮಾಡಿ ಕೆಲವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದೆ.

ಶಂಕಿತರ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿರುವ ಇಬ್ಬರು ನಿಷೇತ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ನಡೆದ ಕೆಲವು ಸ್ಪೋಟ ಪ್ರಕರಣಗಳು ಹಾಗೂ ಇತ್ತೀಚೆಗೆ ನಡೆದ ರಾಮೇಶ್ವರಂ ಕೆಫೆ ಸೋಟವು ಸಾಮ್ಯತೆ ಇರುವುದರಿಂದ ಈ ಹಿಂದಿನ ಪ್ರಕರಣಗಳಲ್ಲಿ ಶಾಮೀಲಾದ ಹಲವರ ಮೇಲೆ ಎನ್‍ಐಎ ನಿಗಾ ಇರಿಸಿದೆ.

ಹಿಂದಿನ ಪ್ರಕರಣದಲ್ಲಿ ಜೈಲಿನಲ್ಲಿರುವ ಹಲವರನ್ನು ಎನ್‍ಐಎ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದು, ತಲೆಮರೆಸಿಕೊಂಡಿರುವವರ ಮೇಲೂ ತನಿಖಾಕಾಧಿರಿಗಳು ಕಣ್ಣಿಟ್ಟಿದ್ದಾರೆ. ಶಂಕಿತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವು ನೀಡಿದವರ ಮೇಲೆಯೂ ಎನ್‍ಐಎ ಹದ್ದಿನ ಕಣ್ಣಿಟ್ಟಿದ್ದು, ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವವರನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ.

ಶಂಕಿತ ವ್ಯಕ್ತಿಗಳ ವಿಚಾರಣೆಯಿಂದ ಸ್ಪೋಟ ಪ್ರಕರಣದ ಆರೋಪಿಯ ಸುಳಿವು ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಲಾಗಿದೆ. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಸಂಬಂಧ ನಿನ್ನೆ ಬೆಂಗಳೂರಿನ 5 ಕಡೆ, ಶಿವಮೊಗ್ಗ ಜಿಲ್ಲೆಯ 15 ಸ್ಥಳಗಳಲ್ಲಿ ಹಾಗೂ ತಮಿಳುನಾಡಿನ ಚೆನ್ನೈನ ಆರು ಸ್ಥಳಗಳಲ್ಲಿ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

RELATED ARTICLES

Latest News