Monday, January 13, 2025
Homeಇದೀಗ ಬಂದ ಸುದ್ದಿರಾಮೇಶ್ವರಂ ಕೆಫೆ ಬಾಂಬರ್‌ನ ಮತ್ತಷ್ಟು ಫೋಟೋ ಬಿಡುಗಡೆ ಮಾಡಿದ ಎನ್‍ಐಎ

ರಾಮೇಶ್ವರಂ ಕೆಫೆ ಬಾಂಬರ್‌ನ ಮತ್ತಷ್ಟು ಫೋಟೋ ಬಿಡುಗಡೆ ಮಾಡಿದ ಎನ್‍ಐಎ

ಬೆಂಗಳೂರು, ಮಾ.9- ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾರಿಯಾಗಿರುವ ಆರೋಪಿ ಬಂಧನಕ್ಕಾಗಿ ಹರಸಾಹಸ ಪಡುತ್ತಿರುವ ಎನ್‍ಐಎ ಅಧಿಕಾರಿಗಳು ದುಷ್ಕರ್ಮಿಯ ಇನ್ನಷ್ಟು ಫೋಟೋಗಳನ್ನು ಎಕ್ಸ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ಆರೋಪಿಯ ವಿವಿಧ ಭಂಗಿಯಲ್ಲಿರುವ ನಾಲ್ಕು ಫೋಟೋಗಳನ್ನು ಎನ್‍ಐಎ ಎಕ್ಸ್‍ನಲ್ಲಿ ಬಿಡಗುಡೆ ಮಾಡಿ ಆರೋಪಿಯ ಸುಳಿವು ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಎನ್‍ಐಎ ದುಷ್ಕರ್ಮಿ ಬಗ್ಗೆ ಖಚಿತ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ. ಸುಳಿವು ನೀಡಿದವರ ಹೆಸರು, ವಿಳಾಸವನ್ನು ಗೌಪ್ಯವಾಗಿಡುವುದಾಗಿ ಸಹ ತಿಳಿಸಿದೆ. ಈ ಆರೋಪಿ ಬಗ್ಗೆ ಮಾಹಿತಿ ದೊರೆತಲ್ಲಿ ಶೀಘ್ರವೇ ತಿಳಿಸುವಂತೆ ಎನ್‍ಐಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

RELATED ARTICLES

Latest News