ಬೆಂಗಳೂರು, ಅ. 24– ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ರೀತಿಯಂತೆಒಂದೇ ತಂಡದ ಪರ ಆಡುತ್ತಾ ಬಂದಿರುವ ಯುವ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 2025ರ ಮೆಗಾ ಹರಾಜಿಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ.
ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ರೀತಿ ಒಮೆಯೂ ಚಾಂಪಿಯನ್ ಪಟ್ಟ ಅಲಂಕರಿಸದ ಡೆಲ್ಲಿ ಕ್ಯಾಪಿಟಲ್‌್ಸ ಕಳೆದ ಕೆಲವು ಸೀಸನ್‌ಗಳಿಂದ ಪ್ಲೇಆಫ್ ಗೇರುವಲ್ಲಿ ಎಡವಿರುವುದರಿಂದ ಹೆಡ್ ಕೋಚ್ ರಿಕ್ಕಿಪಾಂಟಿಂಗ್, ಮೆಂಟರ್ ಸೌರವ್ ಗಂಗೂಲಿ ಸೇರಿದಂತೆ ಕೆಲವು ಸಿಬ್ಬಂದಿಗಳಿಗೂ ಈಗಾಗಲೇ ತಂಡದಿಂದ ಕೊಕ್ ನೀಡಲಾಗಿದ್ದು, ಈಗ ನಾಯಕ ರಿಷಭ್‌ಪಂತ್‌ಗೂ ಗೇಟ್‌ಪಾಸ್ ನೀಡುವ ಸೂಚನೆ ನೀಡಿದೆ.
ಪಂತ್‌ಗೆ ಆರ್‌ಸಿಬಿ ಗಾಳ?
ಯುವ ಸ್ಫೋಟಕ ಆಟಗಾರ ರಿಷಭ್ ಪಂತ್ ಮೆಗಾ ಹರಾಜಿಗೆ ಬಂದರೆ ಆತನ ಖರೀದಿಗೆ ಲಖನೌ ಸೂಪರ್ ಜಯಂಟ್‌್ಸ , ಪಂಜಾಬ್ ಕಿಂಗ್‌್ಸ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗಾಳ ಹಾಕಲು ಸಿದ್ಧವಾಗಿವೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.
ದಿನೇಶ್ ಕಾರ್ತಿಕ್ ಸ್ಥಾನ ತುಂಬುತ್ತಾರಾ ಪಂತ್?
ಕಳೆದ ಕೆಲವು ಐಪಿಎಲ್ ಆವೃತ್ತಿಗಳಿಂದ ಆರ್‌ಸಿಬಿ ಪರ ವಿಕೆಟ್ ಕೀಪರ್ ಹಾಗೂ ಫಿನಿಷರ್ ಪಾತ್ರ ವಹಿಸಿದ್ದ ದಿನೇಶ್ ಕಾರ್ತಿಕ್ ಅವರು ವಿದಾಯ ಘೋಷಿಸಿದ್ದು, ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ, ಅಲ್ಲದೆ ಫಾಫ್ ಡುಪ್ಲೆಸಿಸ್‌ರನ್ನು ತಂಡದಿಂದ ಹೊರಗಿಡುವ ಯೋಚನೆಯೂ ಆರ್‌ಸಿಬಿ ಫ್ರಾಂಚೈಸಿಗಿರುವುದರಿಂದ ರಿಷಭ್ ಪಂತ್ ಆಗಮನದಿಂದ ನಾಯಕ, ವಿಕೆಟ್ ಕೀಪರ್ ಹಾಗೂ ಫಿನಿಷರ್ ಸಿಗುವುದರಿಂದ ಆರ್‌ಸಿಬಿ ಮಾಲೀಕರು ಪಂತ್ ಒಂದು ವೇಳೆ ಮೆಗಾ ಹರಾಜಿಗೆ ಲಭ್ಯವಾದರೆ, ಆತನ ಖರೀದಿಗೆ ಭರ್ಜರಿ ಪೈಪೋಟಿ ನೀಡುವುದು ಖಚಿತವಾಗಿದೆ.
ಅಡ್ಡಗೋಡೆ ಮೇಲೆ ದೀಪವಿಟ್ಟ ಡಿಸಿ:
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್‌್ಸನ ಸಹ ಮಾಲೀಕ ಪರ್ತ್ ಜಿಂದಾಲ್ ಅವರು ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ನಮ ತಂಡದಲ್ಲಿ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್‌್ಸ , ಜಾಕ್ ಫ್ರೆಸರ್ ಮೆಕ್‌ಗ್ರುಕ್, ಕುಲ್ದೀಪ್ ಯಾದವ್, ಅಭಿಷೇಕ್ ಪೊರೆಲ್, ಮುಕೇಶ್ ಕುಮಾರ್, ಖಲೀಲ್ ಅಹದ್‌ರಂತಹ ಶ್ರೇಷ್ಠ ಆಟಗಾರರಿದ್ದಾರೆ, ಆದರೆ ರಿಷಭ್ ಪಂತ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರುವುದನ್ನು ನೋಡಿದರೆ ಪಂತ್ ಅವರನ್ನು ತಂಡದಿಂದ ಕೈಬಿಡುವುದು ಬಹುತೇಕ ನಿಶ್ಚಿತವಾಗಿದೆ.