Friday, April 4, 2025
Homeಬೆಂಗಳೂರುಮೆಟ್ರೋದಲ್ಲಿ ಬಲಿಯಾದ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಕಾರಣ ನಿಗೂಢ

ಮೆಟ್ರೋದಲ್ಲಿ ಬಲಿಯಾದ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಕಾರಣ ನಿಗೂಢ

ಬೆಂಗಳೂರು, ಮಾ.22- ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ನಡೆದು 24 ಗಂಟೆಯಾದರೂ ಮುಂಬೈ ಮೂಲದ ವಿದ್ಯಾರ್ಥಿ ಧ್ರುವ್ ಜತ್ತಿನ್ ಥಕ್ಕರ್(19) ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ.

ಧ್ರುವನ ತಾಯಿ ಗೃಹಿಣಿ. ಮುಂಬೈ ಮೂಲದ ಉದ್ಯಮಿಯ ಪುತ್ರನಾದ ಈತ ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದನು. ಆತ್ಮಹತ್ಯೆಯ ವಿಷಯ ತಿಳಿದು ಈತನ ತಾಯಿ ನಗರಕ್ಕೆ ಬಂದಿದ್ದಾರೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ನಡೆಸಿ ಪೊಷಕರಿಗೆ ಹಸ್ತಾಂತರಿಸಲಾಗಿದೆ.

ನಿನ್ನೆ ಬೆಳಗ್ಗೆ 11.30ರ ಸುಮಾರಿನಲ್ಲಿ ಕಾಲೇಜು ಮುಗಿಸಿಕೊಂಡು ಬಿಎಂಟಿಸಿ ಬಸ್ನಲ್ಲಿ ಬಂದು 1.30ರಲ್ಲಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದನು. ಸ್ನೇಹಿತರು ದೂರವಾಣಿ ಕರೆ ಮಾಡಿದರೂ ಧ್ರುವ ಸ್ವೀಕರಿಸಿರಲಿಲ್ಲ.

2.10ಕ್ಕೆ ಮೆಟ್ರೋ ರೈಲು ಬರುತ್ತಿದ್ದಂತೆ ಹಳಿ ಮೇಲೆ ಜಿಗಿದ ಪರಿಣಾಮ ಕೆಲವೇ ಸೆಕೆಂಡುಗಳಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ರುಂಡ-ಮುಂಡ ಬೇರ್ಪಟ್ಟು ದಾರುಣವಾಗಿ ಮೃತಪಟ್ಟಿದ್ದಾನೆ. ಪೊಲೀಸರು ಕಾಲೇಜಿಗೆ ತೆರಳಿ ಆತನ ಸಹಪಾಠಿಗಳು, ಉಪನ್ಯಾಸಕರು ಹಾಗೂ ಕುಟುಂಬದವರಿಂದ ಮಾಹಿತಿ ಪಡೆದುಕೊಂಡಿದ್ದ ರಾದರೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

RELATED ARTICLES

Latest News