ಪರ್ತ್, ನ.24- ಕಾಂಗರೂ ಪಡೆಯ ಬೌಲರ್‌ಗಳ ನಿದ್ದೆಗೆಡಿಸುವಂತೆ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ 201 ರನ್ ಜೊತೆಯಾಟವಾಡಿ ಇತಿಹಾಸ ಸೃಷ್ಟಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಈ ಹಿಂದೆ ಮಾಜಿ ನಾಯಕ ಸುನೀಲ್ ಗಾವಾಸ್ಕರ್ ಹಾಗೂ ಕೃಷ್ಣಾಮಾಚಾರಿ ಶ್ರೀಕಾಂತ್ ಅವರು 1986ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 191 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ಪರ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ್ದ ಆರಂಭಿಕ ಜೋಡಿ ಎಂಬ ದಾಖಲೆ ನಿರ್ಮಿಸಿದ್ದರು. ಆದರೆ ಈಗ ಜೈಸ್ವಾಲ್ ಹಾಗೂ ರಾಹುಲ್ ಜೋಡಿ ಈ ದಾಖಲೆ ಹಿಂದಿಕ್ಕಿದ್ದಾರೆ.
ಪತ್ ರ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನಿಂಗ್‌್ಸ ನಲ್ಲಿ ಭಾರತ ತಂಡ ಕೇವಲ 150 ರನ್ ಗಳಿಗೆ ಆಲ್ ಔಟ್ ಆಗಿತ್ತು. ಆದರೆ ದ್ವಿತೀಯ ಇನಿಂಗ್‌್ಸ ನಲ್ಲಿ ಉಪಯುಕ್ತ ಜೊತೆಯಾಟದ ಮೂಲಕ 201 ರನ್ ಗಳ ದಾಖಲೆ ಜೊತೆಯಾಟ ನೀಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಬಲ ತುಂಬಿದ್ದರು.
1912ರಲ್ಲಿ ಇಂಗ್ಲೆಂಡ್ ನ ಜಾಕ್ ಹೋಬ್ಸ್ ಹಾಗೂ ವಲ್ಪೆರ್ಡ್ ರೋಡ್‌್ಸ ಅವರು ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ನೀಡಿದ್ದ 323 ರನ್ ಕಾಂಗರೂ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ ಅತ್ಯಧಿಕ ಆರಂಭಿಕ ಜೊತೆಯಾಟವಾಗಿದೆ.
ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 200ಕ್ಕೂ ಹೆಚ್ಚು ಆರಂಭಿಕ ಜೊತೆಯಾಟ:
- 323- ಜಾಕ್ ಹೋಬ್ಸ್ ಹಾಗೂ ವಲ್ಪೆರ್ಡ್ ರೋಡ್ಸ್ – ಇಂಗ್ಲೆಂಡ್- ಮೆಲ್ಬೋರ್ನ್- 1912
- 283- ಜಾಕ್ ಹೋಬ್ಸ್ ಹಾಗೂ ವಲ್ಪೆರ್ಡ್ ರೋಡ್ಸ್ – ಇಂಗ್ಲೆಂಡ್- ಮೆಲ್ಬೋರ್ನ್- 1925
- 234- ಬಾಬ್ ಬರ್ಬರ್ ಹಾಗೂ ಜೆಫ್ರೆ ಬಾಯ್ಕಟ್- ಇಂಗ್ಲೆಂಡ್- ಸಿಡ್ನಿ- 1962
- 223- ಬಿಲ್ ಅಥ್ಲೆ ಹಾಗೂ ಕ್ರಿಸ್ ಬೋರ್ಡ್- ಇಂಗ್ಲೆಂಡ್- ಪರ್ತ್- 1986
- 203- ಮೈಕಲ್ ಅರ್ಥಟನ್ ಹಾಗೂ ಗ್ರೆಹಾಂ ಗೂಚ್- ಇಂಗ್ಲೆಂಡ್- ಅಡಿಲೇಡ್- 1991
- 201- ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್-ಭಾರತ- ಪರ್ತ್- 2024