Sunday, September 15, 2024
Homeರಾಜ್ಯಗಜಪಡೆಗೆ ಜಂಬೂ ಸವಾರಿ ತಾಲೀಮು ಆರಂಭ

ಗಜಪಡೆಗೆ ಜಂಬೂ ಸವಾರಿ ತಾಲೀಮು ಆರಂಭ

ಮೈಸೂರು,ಆ.25- ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಇಂದಿನಿಂದ ಗಜಪಡೆಗಳಿಗೆ ತಾಲೀಮು ಪ್ರಾರಂಭವಾಗಿದೆ. ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳು ರಾಜಬೀದಿಯಲ್ಲಿ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭಿಸಲಾಗಿದೆ.

ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಆನೆಗಳಿಗೆ ವಾಕಿಂಗ್‌ ಮಾಡಿಸಲಾಗುತ್ತದೆ. ಮೊದಲ ಹಂತದಲ್ಲಿ ಅರಮನೆಗೆ ಆಗಮಿಸಿರುವ 9 ಆನೆಗಳಿಗೆ ತಾಲೀಮು ಆರಂಭವಾಗಿದೆ.ಅರಮನೆಯಿಂದ ಸಯ್ಯಾಜಿರಾವ್‌ ರಸ್ತೆ, ಆಯುರ್ವೇದಿಕ್‌ ವೃತ್ತದ ಮೂಲಕ ಜಂಬೂ ಬಜಾರ್‌ ತಲುಪಿ ಹೈವೇ ಸರ್ಕಲ್‌ ಮೂಲಕ ಬನ್ನಿಮಂಟಪ ತಲುಪಲಿವೆ.

ಅರಮನೆಯಿಂದ ಬನ್ನಿಮಂಟಪಕ್ಕೆ ಸುಮಾರು 5 ಕಿ.ಮೀ. ತಾಲೀಮು ನಡೆಯಲಿದ್ದು, ಜಂಬೂ ಸವಾರಿ ಯಾವುದೇ ರೀತಿಯ ತೊಂದರೆಯಾಗದೇ ಇರಲಿ ಎಂದು ತಾಲೀಮು ನಡೆಸಲಾಗುತ್ತಿದೆ.

ನಿನ್ನೆ ಆನೆಗಳಿಗೆ ತೂಕ ಪರಿಶೀಲಿಸಲಾಗಿದ್ದು, ಅದರಲ್ಲಿ ಅಭಿಮನ್ಯು ತೂಕದಲ್ಲೂ ಬಲಶಾಲಿಯಾಗಿದ್ದಾನೆ. ಆಯಾಯ ಆನೆಗಳ ತೂಕಕ್ಕೆ ತಕ್ಕಂತೆ ಪೌಷ್ಠಿಕ ಆಹಾರ ನೀಡಿ ದಸರಾಗೆ ಸಿದ್ಧಗೊಳಿಸಲಾಗುತ್ತಿದೆ.

RELATED ARTICLES

Latest News