ಬೆಂಗಳೂರು,ಜ.4- ರಾಜ್ಯದ ಎಲ್ಲಾ ಧಾರ್ಮಿಕ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ ಆಯ್ದ ವಾಣಿಜ್ಯ ಸೇವೆಗಳಿಗೆ ಏಕರೂಪ ವಿದ್ಯುತ್ ಶುಲ್ಕ ದರವನ್ನು ನಿಗದಿಪಡಿಸಲಾಗಿದೆ. ಯಾವುದೇ ತಾರತಮ್ಯ ಇಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಸಂದೇಶಗಳು ಹರಿದಾಡುತ್ತಿದ್ದು, ಸಾಮಾನ್ಯ ನಾಗರಿಕರಿಗೆ 7.85 ಪೈಸೆ, ಮಸೀದಿ ಮತ್ತು ಚರ್ಚ್‍ಗೆ 1.85 ಪೈಸೆ ಶುಲ್ಕ ವಿಧಿಸಲಾಗುತ್ತಿದೆ. ಇದು ಜಾತ್ಯತೀತ ಭಾರತ ಎಂಬ ಸಂದೇಶ ಹರಿದಾಡುತ್ತಿದೆ.
ಇದಕ್ಕೆ ಸ್ಪಷ್ಟನೆ ನೀಡಲಾಗಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಸಮಿತಿ 2023 ರ ಏಪ್ರಿಲ್ 21 ರಂದು ನಿಗದಿಪಡಿಸಿರುವ ವಿದ್ಯುತ್ ದರದ ಪ್ರಕಾರ ಯಾವುದೇ ವ್ಯತ್ಯಾಸಗಳಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಡೆಸಲಾಗುವ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ವಿಕಲಚೇತನರು, ವಯೋವೃದ್ಧರು, ಅಂಗಾಂಗ ಊನರಿಗಾಗಿ ನಡೆಸಲಾಗುವ ಪುನರ್‍ವಸತಿ ಕೇಂದ್ರಗಳು, ಆಶ್ರಮಗಳು, ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಏಡ್ಸ್ ಸೋಂಕಿತ ಚಿಕಿತ್ಸಾ ಕೇಂದ್ರಗಳು, ರೈಲ್ವೆ ಸಿಬ್ಬಂದಿಗಳ ಕ್ವಾರ್ಟಸ್‍ಗಳಿಗೆ ಏಕರೂಪದ ಶುಲ್ಕ ವಿಧಿಸಲಾಗಿದೆ.
ಜಾಕ್ವೆಲಿನ್ -ಸುಕೇಶ್ ಜತೆಗಿನ ವಾಟ್ಸಾಫ್ ಸಂಭಾಷಣೆ ಬಹಿರಂಗ
ಅದೇ ರೀತಿ ದೇವಸ್ಥಾನ, ಚರ್ಚ್, ಗುರುದ್ವಾರ, ಆಶ್ರಮ, ಮಠ, ಧಾರ್ಮಿಕ ಕೇಂದ್ರಗಳು, ದತ್ತಿ ಸಂಸ್ಥೆಗಳು, ಟ್ರಸ್ಟ್ ವತಿಯಿಂದ ನಡೆಯುವ ಆಸ್ಪತ್ರೆಗಳು, ಎಕ್ಸ್‍ರೇ ಘಟಕಗಳು, ಬಂೀಖಾನೆಗಳು, ಸರ್ಕಾರಿ ಸ್ವಾಮ್ಯದ ಶಾಲಾ-ಕಾಲೇಜುಗಳು, ಧಾರ್ಮಿಕ ದತ್ತಿ ಸಂಸ್ಥೆಯ ಸಾಂಸ್ಕøತಿಕ, ವೈಜ್ಞಾನಿಕ ಕೇಂದ್ರಗಳು, ಗ್ರಂಥಾಲಯಗಳು, ಪ್ರವಾಸಿ ಮಂದಿರಗಳು, ವಸ್ತು ಸಂಗ್ರಹಲಾಯಗಳು, ಐತಿಹಾಸಿಕ ಸ್ಮಾರಕಗಳು, ಸುಲಭ್ ಶೌಚಾಲಯಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಏಕರೂಪ ವಿದ್ಯುತ್ ಶುಲ್ಕ ದರ ಇದೆ. ಯಾವುದರಲ್ಲೂ ವ್ಯತ್ಯಾಸವಿಲ್ಲ ಎಂದು ತಿಳಿಸಲಾಗಿದೆ.
ಪ್ರತಿ ತಿಂಗಳು ನಿಗದಿತ ವಿದ್ಯುತ್ ಶುಲ್ಕ, 50 ಕಿಲೋವ್ಯಾಟ್‍ವರೆಗೂ 1.10 ರೂ.ಗಳಿವೆ. 50 ಕಿಲೊವ್ಯಾಟ್ ಮೇಲ್ಪಟ್ಟ ಪ್ರತಿ ಯುನಿಟ್‍ಗೆ 2.10 ರೂ. ಮಾಸಿಕ ನಿಗದಿತ ಶುಲ್ಕವಿದೆ. 0 ಯಿಂದ 100 ಯುನಿಟ್‍ವರೆಗಿನ ವಿದ್ಯುತ್ ಶುಲ್ಕ ಪ್ರತಿ ಕಿಲೋ ವ್ಯಾಟ್‍ಗೆ 4.75 ಪೈಸೆ, 100 ಯುನಿಟ್‍ಗಿಂತ ಮೇಲ್ಪಟ್ಟ ವಿದ್ಯುತ್ ಬಳಕೆದಾರರಾಗಿದ್ದರೆ ಅವರು ಶೂನ್ಯದಿಂದಲೂ ಪ್ರತಿ ಯುನಿಟ್‍ಗೆ 7 ರೂ.ನಂತೆ ಶುಲ್ಕ ಪಾವತಿಸಬೇಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಸ್ತುತ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು, 200 ಯುನಿಟ್‍ವರೆಗೆ ವಿದ್ಯುತ್ ಬಳಕೆಗೆ ಅವಕಾಶ ಇರುವುದರಿಂದ 7 ರೂ. ನ ವಿದ್ಯುತ್‍ನ ಬರೆ ಜನಸಾಮಾನ್ಯರಿಗೆ ತಗುಲಿಲ್ಲ.