Saturday, September 14, 2024
Homeಮನರಂಜನೆಕನ್ನಡದ ಹೆಸರಾಂತ ನಿರ್ಮಾಪಕ ಪ್ರಭಾಕರ್ ಇನ್ನಿಲ್ಲ

ಕನ್ನಡದ ಹೆಸರಾಂತ ನಿರ್ಮಾಪಕ ಪ್ರಭಾಕರ್ ಇನ್ನಿಲ್ಲ

Renowned Kannada producer Prabhakar is no more


ಬೆಂಗಳೂರು,ಆ.28- ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ನಿರ್ದೇಶಕ ಪ್ರಭಾಕರ್ (64) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ನ್ನಡದಲ್ಲಿ ಅವಳೇ ನನ್ನ ಹೆಂಡ್ತಿ, ಅಣ್ಣ ತಂಗಿ ಸೇರಿದಂತೆ ಕೆಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದ ಇವರು ಸದಭಿರುಚಿ ನಿರ್ಮಾಪಕ ಎನಿಸಿಕೊಂಡಿದ್ದರು.

ಅನೇಕ ಚಿತ್ರಗಳಿಗೆ ನಿರ್ಮಾಣ ಮಾಡಿದ ಅವರು, ಅವಳೇ ನನ್ನ ಹೆಂಡ್ತಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವು ದೊಡ್ಡ ಯಶಸ್ಸು ಕಂಡಿತು. ಈ ಗೆಲುವಿನ ನಂತರ ಅವನೇ ನನ್ನ ಗಂಡ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರವು ಅವರನ್ನು ಕೈ ಹಿಡಿಯಿತು. ಮುಂದೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಲು ಶಕ್ತಿ ತುಂಬಿತು.

ವಿಷ್ಣುವರ್ಧನ್ ಅಭಿನಯದ ತುಂಬಿದ ಮನೆ ಮತ್ತು ಎಲ್ಲರಂಥಲ್ಲ ನನ್ನ ಗಂಡ, ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ, ಶಶಿಕುಮಾರ್ ಅಭಿನಯದ ಮುದ್ದಿನ ಮಾವ, ಶಿವರಾಜ್ ಕುಮಾರ್ ಮತ್ತು ರಾಧಿಕಾ ಅಭಿನಯದ ಅಣ್ಣ ತಂಗಿ, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿನಯದ ಲವ ಕುಶ ಚಿತ್ರಗಳನ್ನು ನಿರ್ಮಿಸಿದರು.

ಲವ ಕುಶ ನಂತರ ನಿರ್ಮಾಣದಿಂದ ದೂರ ಉಳಿದರು. ಎರಡು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಪ್ರಭಾಕರ್ ಇಹಲೋಕ ತ್ಯಜಿಸಿದ್ದಾರೆ.

RELATED ARTICLES

Latest News