Monday, December 2, 2024
Homeಇದೀಗ ಬಂದ ಸುದ್ದಿರೇಣುಕಾಸ್ವಾಮಿ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳು ಮತ್ತೆ 5 ದಿನ ಪೊಲೀಸರ ವಶಕ್ಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳು ಮತ್ತೆ 5 ದಿನ ಪೊಲೀಸರ ವಶಕ್ಕೆ

ಬೆಂಗಳೂರು.ಜೂ.15 : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರ ಗೌಡ ಪವನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು 42ನೇ ಎಸಿಎಂ ಎಂ ನ್ಯಾಯಾಲಯ ಮತ್ತೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.


ಆರೋಪಿಗಳ ವಿಚಾರಣೆಗಾಗಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಪೊಲೀಸರು ಇಂದು ನ್ಯಾಯಾಲಯ ಮುಂದೆ ಆರೋಪಿಗಳನ್ನ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡಬೇಕೆಂದು ಮಾಡಿದ ಮನವಿಯನ್ನು ಪುರಸ್ಕರಿಸಿದ 42ನೇ ಎಸಿ ಎಮ್ ಎಮ್ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ್ ಗೌಡ ರವರು ಜೂನ್ 20ರವರೆಗೆ ಎಲ್ಲ ಹದಿಮೂರು ಆರೋಪಿಗಳನ್ನ ಪೊಲೀಸ್ ವಶಕ್ಕೆ ನೀಡಿದರು.

ಆರೋಪಿಗಳ ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಮೈಸೂರಿನಲ್ಲಿ ಸ್ಥಳಮಹಜರು ಮಾಡಬೇಕಾಗಿದೆ ಮೃತ ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದೆ ಈ ಸಂಬಂಧ ಡಿವೈಸ್ ವಶಪಡಿಸಿಕೊಳ್ಳಬೇಕಾಗಿದೆ ಆರೋಪಿಗಳನ್ನು ಕನಿಷ್ಠ 9 ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ನೀಡಬೇಕೆಂದು ಸರ್ಕಾರಿ ಪರ ಪ್ರಬಲವಾದ ಮಂಡಿಸಿದರು.

ಎಲ್ಲದಕ್ಕೂ ದರ್ಶನ್ ಕಾರಣ ಎನ್ನಲಾಗುತ್ತಿದೆ ಆರೋಪಿಗಳ ಹೇಳಿಕೆಗಳು ಸೋರಿಕೆಯಾಗುತ್ತಿವೆ. ಈಗಾಗಲೇ ಆರು ದಿನ ಪೊಲೀಸರ ವಿಚಾರಣೆ ನಡೆಸಲಾಗಿದೆ ವಾದ ಮಂಡಿಸಿದರು
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಐದು ದಿನಗಳ ಕಾಲ 13 ಆರೋಪಿಗಳನ್ನು ಪೊಲೀಸ್ ಕಷ್ಟಡಿಗೆ ನೀಡಿ ಆದೇಶಿಸಿದರು.

RELATED ARTICLES

Latest News