Thursday, September 19, 2024
Homeಮನರಂಜನೆರೇಣುಕಾಸ್ವಾಮಿ ಕೊಲೆ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದ ಸಾ.ರಾ.ಗೋವಿಂದು

ರೇಣುಕಾಸ್ವಾಮಿ ಕೊಲೆ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದ ಸಾ.ರಾ.ಗೋವಿಂದು

ಬೆಂಗಳೂರು,ಜೂ.12- ನಟ ದರ್ಶನ್‌ ಮತ್ತು ಆತನ ಗ್ಯಾಂಗ್‌ನಿಂದ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಕೊಲೆಯಾಗಿರುವ ಘಟನೆಯನ್ನು ಖಂಡಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದರು.

ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ ಅವರಂತಹ ಮಹನೀಯರನ್ನು ನೋಡಿ ಇವರೆಲ್ಲಾ ಬುದ್ದಿ ಕಲಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕರೆದು ಬುದ್ದಿ ಹೇಳಬೇಕಿತ್ತು. ಸ್ವಾಮಿ ಅವರ ತಂದೆ, ತಾಯಿ, ಪತ್ನಿಗೆ ನಾನು ಧೈರ್ಯ ಹೇಳುತ್ತೇನೆ, ಮಗನನ್ನು ಕಳೆದುಕೊಂಡ ಹಿರಿಯ ಜೀವಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಹಾರೈಸಿದ್ದಾರೆ.

RELATED ARTICLES

Latest News