Sunday, October 13, 2024
Homeರಾಜ್ಯಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನಾರರಂಭ

ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನಾರರಂಭ

ಬೆಂಗಳೂರು, ಆ.9- ಭೂ ಕುಸಿತದ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಬಂದ್‌ ಆಗಿದ್ದ ಬೆಂಗಳೂರು -ಮಂಗಳೂರು-ಕಣ್ಣೂರು ರೈಲುಗಳ ಸಂಚಾರ ಇಂದಿನಿಂದ ಆರಂಭಗೊಂಡಿದೆ.

ಭಾರಿ ಭೂ ಕುಸಿತದಿಂದ ಕಡಗರವಳ್ಳಿ-ಎಡಕುಮೇರಿ ಬಳಿ ರೈಲು ಹಳಿ ಹಾನಿಗೀಡಾಗಿತ್ತು, ದುರಸ್ತಿ ಕಾರ್ಯ ಪೂರ್ಣಗೊಂಡ ನಾಲ್ಕು ದಿನಗಳ ಬಳಿಕ ರೈಲು ಸಂಚಾರ ಪುನಾರರಂಭಗೊಳಿಸಲಾಗಿದೆ.

ಯಶವಂತಪುರ-ಮಂಗಳೂರು ಜಂಕ್ಷನ್‌ನಿಂದ ಸಂಚರಿಸುವ ಗೊಮಟೇಶ್ವರ ಎಕ್‌್ಸಪ್ರೆಸ್‌‍ ರೈಲು ದುರಸ್ತಿಗೊಂಡ ಹಳಿಯ ಮೇಲೆ ಇಂದು ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ರೈಲಿನ ಓಡಾಟವನ್ನು ಗಮನಿಸಿದರು.

ಕಳೆದ ಜು.26ರಿಂದ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಂಡಿತ್ತು ಅದರಂತೆ ಬೆಂಗಳೂರು-ಕಣ್ಣೂರು, ಬೆಂಗಳೂರು-ಕಾರಾವಾರ , ಕಣ್ಣೂರು-ಬೆಂಗಳೂರು, ಕಾರಾವಾರ -ಬೆಂಗಳೂರು, ಬೆಂಗಳೂರು- ಮುರುಡೇಶ್ವರ, ವಿಜಯಪುರ, ಮಂಗಳೂರು ಸೆಂಟ್ರಲ್‌ ಸೇರಿದಂತೆ 12 ರೈಲುಗಳನ್ನು ರದ್ದುಪಡಿಸಲಾಗಿತ್ತು. ಇಂದಿನಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭ ಆಗಿದೆ.

RELATED ARTICLES

Latest News