ಬೆಂಗಳೂರು,ಡಿ.29- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಣಿಜ್ಯ ಪ್ರಚಾರ ಶಾಖೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಿ.ಎನ್. ದೇಸಾಯಿ (67) ಅವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿನಲ್ಲಿ ಜ್ಞಾನಭಾರತಿ ಲೇಔಟ್, ಕೆಂಚನಪುರ ಕ್ರಾಸ್‍ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ದಶಕಗಳ ಕಾಲ ದೇಸಾಯಿ ಅವರು ವಾಣಿಜ್ಯ ಪ್ರಚಾರ ಶಾಖೆಯ ಹಲವು ಕಾರ್ಯಚಟುವಟಿಕೆಗಳ ಭಾಗವಾಗಿದ್ದರು. ಕೆಲ ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ದೇಸಾಯಿ ಅವರು ಪತ್ನಿ ಹಾಗೂ ಏಕೈಕ ಪುತ್ರಿಯನ್ನು ಅಗಲಿದ್ದಾರೆ.
ದೇಸಾಯಿ ಅವರ ಪುತ್ರಿ ವಿದೇಶದಲ್ಲಿದ್ದು, ಅವರು ನಾಳೆ ನಗರಕ್ಕೆ ಬರುವ ಹಿನ್ನೆಲೆಯಲ್ಲಿ ದೇಸಾಯಿಯವರ ಮೃತದೇಹವನ್ನು ಬಿಜಿಎಸ್ ಆಸ್ಪತ್ರೆಯಲ್ಲಿರಿಸಲಾಗಿದೆ. ನಾಳೆ ಮಧ್ಯಾಹ್ನ 12.30ರಿಂದ 3 ಗಂಟೆವರೆಗೆ ದೇಸಾಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಐಫೋನ್ ಹ್ಯಾಕ್ ಆರೋಪ ನಿರಾಕರಿಸಿದ ರಾಜೀವ್ ಚಂದ್ರಶೇಖರ್
ಭಾನುವಾರ ಅವರ ಸ್ವಗ್ರಾಮ ವಾದ ಗುಲ್ಬರ್ಗ ಜಿಲ್ಲೆ, ಯಡ್ರಾಮಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ದೇಸಾಯಿಯವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸ್ನೇಹಿತರು, ಮಾಧ್ಯಮ ರಂಗದ ಹಿತೈಷಿಗಳು ಹಾಗೂ ಬಂಧು-ಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.