Sunday, April 28, 2024
Homeರಾಷ್ಟ್ರೀಯಹುಣಸೆ ಹಣ್ಣಿನೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 5.77ಕೋಟಿ ಮೌಲ್ಯದ ಸಿಗರೇಟ್ ಪ್ಯಾಕೆಟ್‍ಗಳ ವಶ

ಹುಣಸೆ ಹಣ್ಣಿನೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 5.77ಕೋಟಿ ಮೌಲ್ಯದ ಸಿಗರೇಟ್ ಪ್ಯಾಕೆಟ್‍ಗಳ ವಶ

ಮುಂಬೈ,ಡಿ.29 – ಸರಕು ಸಾಗಣೆ ಕಂಟೈನರ್‍ನಲ್ಲಿದ್ದ ಹುಣಸೆ ಹಣ್ಣಿನ ಜೊತೆ ಅಕ್ರಮವಾಗಿ ಸಾಗಿಸುತ್ತಿದ್ದ 5.77 ಕೋಟಿ ಮೌಲ್ಯದ ಸಿಗರೇಟ್ ಪ್ಯಾಕೆಟ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಮುಂಬೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‍ಐ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬಂದ ಗುಪ್ತಚರ ಮಾಹಿತಿ ಆಧಾರದ ಮೇಲೆ ಜವಾಹರಲಾಲ್ ನೆಹರು ಬಂದರಿಗೆ ಆಗಮಿಸಿದ 40ಅಡಿ ಉದ್ದದ ಶೈತ್ಯೀಕರಿಸಿದ ಕಂಟೈನರ್ ಪರಿಶೀಲಿಸಿದಾಗ ಅಕ್ರಮವಾಗಿ ಬಚ್ಚಿಟ್ಟಿದ್ದ 33.92.000 ಸಿಗರೇಟ್‍ಗಳು ಪತ್ತೆಯಾಗಿದೆ.
ನ್ಹಾವಾ ಶೆವಾದಲ್ಲಿನ ಕಂಟೈನರ್ ಸರಕು ಸಾಗಣೆ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಯಿತು. ಆಗ ಹುಣಸೆಹಣ್ಣು ಹೊಂದಿರುವ ರಟ್ಟಿನ ಪೆಟ್ಟಿಗೆಗಳಲ್ಲಿ ಸಿಗರೇಟ್ ಪೆಟ್ಟಿಗೆಗಳನ್ನು ಜಾಣ್ಮೆಯಿಂದ ಮರೆಮಾಚಲಾಗಿರುವುದು ಬೆಳಕಿಗೆ ಬಂದಿದೆ.

ಭಾರತದೊಂದಿಗಿನ ಮಿಲಿಟರಿ ತೊಡಗಿಸಿಕೊಳ್ಳುವಿಕೆ ವ್ಯಾಪ್ತಿಯನ್ನು ಆಧುನಿಕರಿಸಿದ ಅಮೆರಿಕ

ಸಿಗರೇಟ್ ಪೆಟ್ಟಿಗೆಗಳನ್ನು ಹುಣಸೆ ಪೆಟ್ಟಿಗೆಯೊಳಗೆ ಇರಿಸಲಾಗಿತ್ತು ಮತ್ತು ಎಲ್ಲಾ ಕಡೆ ಹುಣಸೆಹಣ್ಣಿನಿಂದ ಜಾಣ್ಮೆಯಿಂದ ಮುಚ್ಚಲಾಗಿತ್ತು. ಕಳ್ಳಸಾಗಣೆ ಮಾಡಿರುವ 33,92,000 ಸಿಗರೇಟ್‍ಗಳ ಮಾರುಕಟ್ಟೆ ಮೌಲ್ಯ ಅಂದಾಜು 5.77 ಕೋಟಿ ರೂ.ಗಳಾಗಿವೆ ಎಂದು ಡಿಆರ್‍ಐ ಅಲ್ಲಾಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News