Saturday, September 14, 2024
Homeರಾಷ್ಟ್ರೀಯ | Nationalಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಎಟಿಎಸ್‌‍ ದಾಳಿ : 230 ಕೋಟಿ ಮೌಲ್ಯದ ನಿಷೇಧಿತ ಮೆಫೆಡ್ರೋನ್‌ ದ್ರಾವಣ...

ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಎಟಿಎಸ್‌‍ ದಾಳಿ : 230 ಕೋಟಿ ಮೌಲ್ಯದ ನಿಷೇಧಿತ ಮೆಫೆಡ್ರೋನ್‌ ದ್ರಾವಣ ವಶ, 13 ಜನರ ಬಂಧನ

ಅಹಮದಾಬಾದ್‌, ಏ.28-ಗುಜರಾತ್‌ ಮತ್ತು ರಾಜಸ್ಥಾನದ ನಾಲ್ಕು ಔಷಧ ತಯಾರಿಕಾ ಘಟಕಗಳ ಮೇಲೆ ಎಟಿಎಸ್‌‍ ಅಧಿಕಾರಿಗಳು ದಾಳಿ ನಡೆಸಿ 230 ಕೋಟಿ ಮೌಲ್ಯದ ನಿಷೇಧಿತ ಮೆಫೆಡ್ರೋನ್‌ ದ್ರಾವಣವನ್ನು ವಶಪಡಿಸಿಕೊಂಡು 13 ಜನರನ್ನು ಬಂಧಿಸಿದ್ದಾರೆ.

ಅಹಮದಾಬಾದ್‌ ನಿವಾಸಿ ಮನೋಹರಲಾಲ್‌ ಎನಾನಿ ಮತ್ತು ರಾಜಸ್ಥಾನದ ಕುಲದೀಪ್‌ ಸಿಂಗ್‌ ರಾಜಪುರೋಹಿತ್‌ ಅವರು ಮೆಫೆಡ್ರೋನ್‌ ತಯಾರಿಕಾ ಘಟಕಗಳನ್ನು ಸ್ಥಾಪಿಸಿದ್ದಾರೆ ಎಂದು ಎಟಿಎಸ್‌‍ಗೆ ಸುಳಿವು ದೊರೆತ ನಂತರ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಜಂಟಿಯಾಗಿ ದಾಳಿ ನಡೆಸಿವೆ ಎಂದು ಅಧಿಕಾರಿಯೊಬ್ಬ ತಿಳಿಸಿದ್ದಾರೆ.

ಚಲನವಲನಗಳ ಮೇಲೆ ನಿಗಾವಹಿಸಿ ರಾಜಸ್ಥಾನದ ಸಿರೋಹಿ ಮತ್ತು ಜೋಧ್‌ಪುರದ ಘಟಕಗಳು ಮತ್ತು ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗಾಂಧಿನಗರದ ಪಿಪ್ಲಾಜ್‌ ಮತ್ತು ಭಕ್ತಿನಗರ ಕೈಗಾರಿಕಾ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. 22.028 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್‌ (ಘನ ರೂಪದಲ್ಲಿ) ಮತ್ತು 124 ಕಿಲೋಗ್ರಾಂಗಳಷ್ಟು ದ್ರವ ಮೆಫೆಡ್ರೋನ್‌ ಅನ್ನು ವಶಪಡಿಸಿಕೊಂಡಿದೆ, ಒಟ್ಟಾರೆಯಾಗಿ 230 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಹೇಳಿದರು.

ರಾಜಪುರೋಹಿತ್‌ ಅವರನ್ನು ಗಾಂಧಿನಗರದಲ್ಲಿ ಮತ್ತು ಎನಾನಿಯನ್ನು ಸಿರೋಹಿಯಿಂದ ಬಂಧಿಸಲಾಗಿದೆ ತನಿಖೆಯ ಸಂದರ್ಭದಲ್ಲಿ ರಾಜಸ್ಥಾನದ ಕೈಗಾರಿಕಾ ಘಟಕದಲ್ಲಿ ಈ ಹಿಂದೆ ಮೆಫೆಡ್ರೋನ್‌ ಉತ್ಪಾದನೆಯಲ್ಲಿ ತೊಡಗಿದ್ದಕ್ಕಾಗಿ 2015 ರಲ್ಲಿ ಡೈರೆಕ್ಟರೇಟ್‌ ಆಫ್‌ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ನಿಂದ ಎನಾನಿ ಅವರನ್ನು ಬಂಧಿಸಿದ ನಂತರ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದರು.

ಎಲ್ಲಾ ಆರೋಪಿಗಳು ಪರಸ್ಪರ ಸಂಪರ್ಕ ಹೊಂದಿದ್ದು, ವಲ್ಸಾದ್‌ ಜಿಲ್ಲೆಯ ವಾಪಿ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯಿಂದ ಕಚ್ಚಾ ವಸ್ತುಗಳನ್ನು ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವರು ಔಷಧವನ್ನು ಯಾವಾಗ ಉತ್ಪಾದಿಸುತ್ತಿದ್ದಾರೆ, ಅವರು ಅದನ್ನು ಹಿಂದೆ ಮಾರಾಟ ಮಾಡಿದ್ದಾರೆಯೇ ಮತ್ತು ಇಡೀ ಕಾರ್ಟೆಲ್‌ನ ಭಾಗವಾಗಿರುವವರು ಯಾರು ಎಂಬುದನ್ನು ಕಂಡುಹಿಡಿಯಲು ತನಿಖೆಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News