ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ 8 ಶಂಕಿತರ ಬಂಧನ

ಲಕ್ನೋ/ಹರಿದ್ವಾರ, ಅ. 12-, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ಅಧಿಕಾರಿಗಳು ಭಾರತದಲ್ಲಿ ಅಲï-ಖೈದಾ ಮತ್ತು ಅದರ ಅಂಗಸಂಸ್ಥೆ ಜಮಾತ್-ಉಲ್-ಮುಜಾಹಿದ್ದೀನ್ನೊಂದಿಗೆ ಸಂಪರ್ಕ ಹೊಂದಿದ್ದ ಎಂಟು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಎಂಟು ಮಂದಿಯನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಯುಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಬಂಧಿತ ಶಂಕಿತರನ್ನು ಲುಕ್ಮಾನ್, ಮನೋಹರಪುರದ ಗಗಲ್ಹೆಡಿ ಕಾರಿ ಮುಖ್ತಾರ್ನ ಮೊಹಮ್ಮದ್ ಅಲಿಮ, ದಿಯೋಬಂದ್ನ ಕಾಮಿಲ, ಎಲ್ಲರೂ ಸಹರಾನ್ಪುರ ಜಿಲ್ಲಾಯವರು; […]