Tuesday, September 17, 2024
Homeಅಂತಾರಾಷ್ಟ್ರೀಯ | Internationalಬ್ರಿಟನ್‌ ಸಂಸತ್ ಚುನಾವಣೆ : ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು, ಲೇಬರ್‌ ಪಕ್ಷಕ್ಕೆ ಅಧಿಕಾರ

ಬ್ರಿಟನ್‌ ಸಂಸತ್ ಚುನಾವಣೆ : ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು, ಲೇಬರ್‌ ಪಕ್ಷಕ್ಕೆ ಅಧಿಕಾರ

ಲಂಡನ್‌,ಜು.5- ವಿಶ್ವದ ಗಮನ ಸೆಳೆದಿದ್ದ ಪ್ರಸಕ್ತ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ, 14 ವರ್ಷಗಳ ಕಾಲ ಬ್ರಿಟನ್‌ನಲ್ಲಿ ಆಡಳಿತ ನಡೆಸಿದ ಕನ್ಸರ್ವೇಟಿವ್‌ ಪಕ್ಷ ಭಾರೀ ಸೋಲು ಕಂಡಿದೆ. ಪ್ರಚಂಡ ಜಯಭೇರಿ ಬಾರಿಸಿರುವ ಲೇಬರ್‌ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಒಲಿದು ಬಂದಿದ್ದು ಇಂದು ಅಧಿಕಾರ ಲೇಬರ್‌ ಪಕ್ಷಕ್ಕೆ ಹಸ್ತಾಂತರವಾಗುತ್ತಿದೆ.

ಇದರ ಬೆನ್ನಲ್ಲೇ ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ ಅವರು ಸಾರ್ವತ್ರಿಕ ಚುನಾವಣೆಯ ಸೋಲನ್ನು ಒಪ್ಪಿಕೊಂಡು ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕನ್ಸರ್ವೇಟಿವ್‌ ಪಕ್ಷವು 14 ವರ್ಷಗಳ ನಂತರ ಹೀನಾಯ ಸೋಲು ಕಂಡಿದೆ.
ಕೀರ್‌ ಸ್ಟಾರ್ಮರ್‌ ನೇತೃತ್ವದ ಲೇಬರ್‌ ಪಕ್ಷವು ಐತಿಹಾಸಿಕ ಯುಕೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದೆ. ಕನ್ಸರ್ವೇಟಿವ್‌ ನಾಯಕ ಮತ್ತು ಭಾರತೀಯ ಮೂಲದ ರಿಷಿ ಸುನಕ್‌ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಸಾರ್ವತ್ರಿಕ ಚುನಾವಣೆಯೂ ಇದಾಗಿತ್ತು.

ಭಾರತೀಯ ಕಾಲಮಾನ ಇಂದು ಬೆಳಗ್ಗೆ 5 ಗಂಟೆ ವೇಳೆಗೆ ಮತ ಎಣಿಕೆ ಆರಂಭವಾಗಿ, 650 ಸ್ಥಾನಗಳ ಪೈಕಿ 326 ಸ್ಥಾನಗಳನ್ನು ಲೇಬರ್‌ ಪಕ್ಷ ಗೆದ್ದುಕೊಂಡಿದೆ. ಸಂಸತ್ತಿನಲ್ಲಿ ಬಹುಮತವನ್ನು ಹೊಂದಲು ಲೇಬರ್‌ ಪಕ್ಷವು ಸಾಕಷ್ಟು ಸ್ಥಾನಗಳನ್ನು ಗೆದ್ದಿದ್ದು ಸರ್ಕಾರವನ್ನು ರಚಿಸಲು ಮುಂದಿನ ಹಾದಿ ಸುಲಭವಾಗಿದೆ. ಸಂಸತ್ತಿನ ಕೆಳಮನೆ ಹೌಸ್‌‍ ಆಫ್‌ ಕಾಮನ್‌್ಸನಲ್ಲಿ ಲೇಬರ್‌ ಪಕ್ಷವು ಸುಮಾರು 160 ಸ್ಥಾನಗಳ ಬಹುಮತವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

ದೇಶದ ಮೊದಲ ಬ್ರಿಟಿಷ್‌ ಭಾರತೀಯ ಮೂಲದ ಪ್ರಧಾನ ಮಂತ್ರಿ ರಿಷಿ ಸುನಕ್‌ ಉತ್ತರ ಇಂಗ್ಲೆಂಡ್‌ನಲ್ಲಿ 23,059 ಮತಗಳನ್ನು ಗಳಿಸಿ ತಮದೇ ಆದ ರಿಚ್‌‍ಮಂಡ್‌ ಮತ್ತು ನಾರ್ತಲರ್ಟನ್‌ ಸ್ಥಾನ ಗೆದ್ದುಕೊಂಡಿದ್ದಾರೆ. ಆದರೆ 14 ವರ್ಷಗಳ ಸರ್ಕಾರದ ನಂತರ ರಾಷ್ಟ್ರೀಯ ಮಟ್ಟದಲ್ಲಿ ತಮ ಪಕ್ಷವನ್ನು ಅಧಿಕಾರಕ್ಕೆ ಮರಳಿಸುವಲ್ಲಿ ರಿಷಿ ಸುನಕ್‌ ವಿಫಲರಾಗಿದ್ದಾರೆ.

ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರು ರಿಚಂಡ್‌ ಮತ್ತು ನಾರ್ತಲರ್ಟನ್‌ ಕ್ಷೇತ್ರಗಳಲ್ಲಿ ತಮ ಸ್ಥಾನ ಉಳಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಲೇಬರ್‌ ಪಾರ್ಟಿ ಜಯಗಳಿಸಿದ್ದು, ಕೀರ್‌ ಸ್ಟಾರ್ಮರ್‌ಗೆ ಅಭಿನಂದನೆ ಹೇಳಿರುವ ರುಷಿ ಸುನಕ್‌, ಫಲಿತಾಂಶದ ಬಗ್ಗೆ ವಿಚಾರ ಮಂಥನ ಮಾಡುತ್ತೇನೆ. ಪ್ರಧಾನಿ ಹುದ್ದೆಯಲ್ಲಿದ್ದಾಗ ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಸಾಮರ್ಥ್ಯವನ್ನೆಲ್ಲ ಧಾರೆಯೆರೆದು ಸರ್ಕಾರವನ್ನು ಮುನ್ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಮತದಾರರಿಗೆ ಧನ್ಯವಾದ: ವಕೀಲ ವೃತ್ತಿಯಲ್ಲಿ ಸ್ಟಾರ್ಮರ್‌ಕೀರ್‌ ಸ್ಟಾರ್ಮರ್‌ ಅವರು ಲೇಬರ್‌ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ. ಪಕ್ಷಕ್ಕೆ ಸಿಕ್ಕಿರುವ ಭಾರೀ ಬೆಂಬಲವನ್ನು ಗಮನಿಸಿದ ಸ್ಟಾರ್ಮರ್‌ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

ನಮಗೆ ಮತ ಹಾಕದವರ ಪರವಾಗಿಯೂ ಕೆಲಸ ಮಾಡುತ್ತೇವೆ ಎಂದಿದ್ದಾರೆ. ನಾನು ನಿಮಗಾಗಿ ಮಾತನಾಡುತ್ತೇನೆ, ಪ್ರತಿದಿನ ನಿಮಗಾಗಿ ಹೋರಾಡುತ್ತೇನೆ, ಬದಲಾವಣೆಗೆ ಸಿದ್ಧ. ನಿಮ ಮತದಿಂದ ಈಗ ಬದಲಾವಣೆ ಪ್ರಾರಂಭವಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

2019ರಲ್ಲಿ ನಡೆದ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಶೋಚನೀಯ ಸೋಲುಕಂಡಿತ್ತು. ಕಳೆದ 85 ವರ್ಷಗಳಲ್ಲಿಯೇ ಇಂತಹ ಸೋಲನ್ನು ಅದು ಕಂಡಿರಲಿಲ್ಲ. ಅದರ ಮರು ವರ್ಷ ಲೇಬರ್‌ ಪಾರ್ಟಿಯ ನಾಯಕತ್ವವನ್ನು ವಹಿಸಿಕೊಂಡವರು ಕೀರ್‌ ಸ್ಟಾರ್ಮರ್‌. ಆಗಲೇ ಅವರು ಲೇಬರ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪಣ ತೊಟ್ಟಿದ್ದರು.

ಯಾರು ಈ ಕೀರ್‌ ಸ್ಟಾರ್ಮರ್‌:
1962ರ ಸೆ.2ರಂದು ಸರ್ರೆಯ ಆಕ್ಸ್ಟೆಡ್‌ನಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು ಕೀರ್‌ ಸ್ಟಾರ್ಮರ್‌. ಅವರ ತಾಯಿ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (ಎನ್‌‍ಎಚ್‌‍ಎಸ್‌‍) ನರ್ಸ್‌ ಆಗಿದ್ದವರು. ಬಹಳ ಅಪರೂಪದ ಹಾಗೂ ತೀವ್ರ ಸ್ವರೂಪದ ಸಂಧಿವಾತದ ಕಾಯಿಲೆಗೆ ಅವರು ತುತ್ತಾಗಿದ್ದರು. ಸ್ಟಾರ್ಮರ್‌ ಅವರ ತಂದೆ ಸಲಕರಣೆಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು.

ಬಡತನದ ಬೇಗೆಯಲ್ಲಿದ್ದ ಕುಟುಂಬದಲ್ಲಿ ಬೆಳೆದ ಸ್ಟಾರ್ಮರ್‌ ರೀಗೇಟ್‌ ಗ್ರಾಮರ್‌ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ತಮ ಕುಟುಂಬದಲ್ಲಿಯೇ ವಿಶ್ವವಿದ್ಯಾಲಯದ ಮೆಟ್ಟಿಲು ಏರಿದ ಮೊದಲಿಗರೆಂದರೆ ಸ್ಟಾರ್ಮರ್‌ ಒಬ್ಬರೇ.

ಲೀಡ್‌್ಸ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದರು. ರಾಜಕಾರಣಕ್ಕೆ ಕಾಲಿಡುವುದಕ್ಕೂ ಮುನ್ನ ಸ್ಟಾರ್ಮರ್‌ಮಾನವ ಹಕ್ಕುಗಳ ಪರ ವಕಾಲತ್ತು ವಹಿಸುವ ಮೂಲಕ ವಕೀಲರಾಗಿ ಹೆಸರು ಗಳಿಸಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟ ಅವರನ್ನು ಲೆಫ್ಟಿ ವಕೀಲ ಅಥವಾ ಎಡಪಂಥೀಯ ಎಂದು ಟೀಕಿಸಲಾಗಿತ್ತು. ಸ್ಟಾರ್ಮರ್‌ ಅವರಿಗೆ ರಾಜಕೀಯ ವರ್ಚಸ್ಸು ಇಲ್ಲ ಎಂಬ ಟೀಕೆಗಳಿದ್ದವು. ಆದರೂ ಅವರು ಲೇಬರ್‌ ಪಕ್ಷವನ್ನು ಬ್ರಿಟನ್‌ ರಾಜಕಾರಣದ ಕೇಂದ್ರಕ್ಕೆ ಮರಳಿ ತರುವಲ್ಲಿ ಸಫಲರಾಗಿದ್ದಾರೆ. ಕನ್ಸರ್ವೇಟಿವ್‌ ಪಕ್ಷದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

RELATED ARTICLES

Latest News