Monday, May 20, 2024
Homeಬೆಂಗಳೂರುಮಳೆಗೆ ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕುಸಿದ ರಸ್ತೆ

ಮಳೆಗೆ ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕುಸಿದ ರಸ್ತೆ

ಬೆಂಗಳೂರು,ಮೇ.9- ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದ ಪಕ್ಕದ ರಸ್ತೆ ಕುಸಿದಿದೆ. ನಗರದ ಪಾಟರಿ ಟೌನ್‌ ಸಮೀಪ ನಡೆಯುತ್ತಿದ್ದ ಮೆಟ್ರೋ ಕಾಮಗಾರಿಗಾಗಿ ಸುರಂಗ ಮಾರ್ಗ ಕೊರೆಯುತ್ತಿದ್ದ ಸ್ಥಳದ ಸಮೀಪದ ರಸ್ತೆ ಮಳೆಯಿಂದಾಗಿ ಆರು ಅಡಿ ಕುಸಿದುಬಿದ್ದಿದೆ.

ವಿಷಯ ತಿಳಿಯುತ್ತಿದ್ದಂತೆ ಮೆಟ್ರೋ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಆದರೂ ಸ್ಥಳೀಯ ಪಾಟರಿ ಟೌನ್‌ ಬಳಿಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಕಾಮಗಾರಿ ನಡೆಯುವ ಸುತ್ತಮುತ್ತಲು ಏರಿಯಾದಲ್ಲಿ ಇನ್ನಿತರ ಕಡೆಗಳಲ್ಲಿ ಭೂಕುಸಿತದ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉರುಳಿಬಿದ್ದ ನೂರಾರು ಮರಗಳು; ನಿನ್ನೆಯ ಮಳೆಗೆ ನಗರದ ಹಲವಾರು ಪ್ರದೇಶಗಳಲ್ಲಿ 150ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿ ಬಿದ್ದಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಅದರಲ್ಲೂ ರಾಜಾಜಿನಗರ ಮತ್ತು ಕೆಂಗೇರಿಯಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿ ಬಿದ್ದ ಪರಿಣಾಮ ಆ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು. ಬೆಸ್ಕಾಂ ಸಹಾಯವಾಣಿಗೆ 8 ಸಾವಿರಕ್ಕೂ ಹೆಚ್ಚು ಕರೆಗಳು ಬಂದಿರುವುದು ವಿಶೇಷವಾಗಿತ್ತು.

ಧರೆಗುರುಳಿದ ಮರ;
ಆರ್‌ಆರ್‌ನಗರದಲ್ಲಿ 70
ಪಶ್ಚಿಮ ವಲಯ 30
ಪೂರ್ವ ವಲಯ 24,
ದಕ್ಷಿಣ ವಲಯ 16
ಯಲಹಂಕ 7
ದಾಸರಹಳ್ಳಿ 3
ಬೊಮನಹಳ್ಳಿ 2
ಜಲಾವತ ಪ್ರದೇಶಗಳು;
ಹೆಬ್ಬಾಳ ವತ್ತ
ಜಯಮಹಲ್‌ ರಸ್ತೆ
ಉದಯ ಟಿವಿ ಜಂಕ್ಷನ್‌
ಮೇಜರ್‌ ಸಂದೀಪ್‌ ಉನ್ನಿಕಷ್ಣನ್‌ ರಸ್ತೆ (ಯಲಹಂಕ)
ಕೆಆರ್‌ ಮಾರುಕಟ್ಟೆ
ಟಿನ್‌ ಫ್ಯಾಕ್ಟರಿ
ನಾಯಂಡಹಳ್ಳಿ
ಬೆನ್ನಿಗನಹಳ್ಳಿ ರೈಲ್ವೆ ಕೆಳಸೇತುವೆ
ಟೌನ್‌ ಹಾಲ್‌ ಹತ್ತಿರ
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
ಮೈಸೂರು ರಸ್ತೆ
ರಾಮಮೂರ್ತಿ ನಗರ
ಹೊರಮಾವು ಕೆಳಸೇತುವೆ
ಹೊರ ವರ್ತುಲ ರಸ್ತೆ
ಕಂಟೋನೆಂಟ್‌ ರೈಲ್ವೆ ಕೆಳಸೇತುವೆ
ಜಯಮಹಲ್‌ ರಸ್ತೆ
ವಡ್ಡರಪಾಳ್ಯ ಜಂಕ್ಷನ್‌
ಹೆಬ್ಬಾಳ ಮೇಲ್ಸೇತುವೆ ಡೌನ್‌ರ್ಯಾಂಪ್‌

RELATED ARTICLES

Latest News