Thursday, September 19, 2024
Homeರಾಷ್ಟ್ರೀಯ | Nationalಕಂಗನಾ ಸಂಸತ್‌ನಲ್ಲಿರಲು ಲಾಯಕ್ಕಿಲ್ಲ : ಸೋನಿಯಾ ಗಾಂಧಿ ಅಳಿಯ ವಾದ್ರಾ

ಕಂಗನಾ ಸಂಸತ್‌ನಲ್ಲಿರಲು ಲಾಯಕ್ಕಿಲ್ಲ : ಸೋನಿಯಾ ಗಾಂಧಿ ಅಳಿಯ ವಾದ್ರಾ

Robert Vadra flays Kangana Ranaut on remarks over farmers’ protest

ಹೈದರಾಬಾದ್‌, ಆ.31 (ಪಿಟಿಐ) – ರೈತರ ಪ್ರತಿಭಟನೆಗಳ ಕುರಿತು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್‌ ವಾದ್ರಾ ಅವರು ಕಂಗನಾ ಸಂಸತ್ತಿನಲ್ಲಿರಲು ಅರ್ಹರಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಕೆ (ರಣಾವತ್‌) ಒಬ್ಬ ಮಹಿಳೆ, ನಾನು ಅವಳನ್ನು ಗೌರವಿಸುತ್ತೇನೆ. ಆದರೆ ಆಕೆ ಸಂಸತ್ತಿನಲ್ಲಿರಲು ಅರ್ಹಳಲ್ಲ ಎಂದು ನಾನು ಭಾವಿಸುತ್ತೇನೆ.

ಅವಳು ವಿದ್ಯಾವಂತಳಲ್ಲ, ಅವಳು ಜನರ ಬಗ್ಗೆ ಯೋಚಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.ಮಹಿಳೆಯರ ಸುರಕ್ಷತೆಯು ಪ್ರಮುಖ ವಿಷಯವಾಗಿದೆ ಎಂದು ತಿಳಿಸಿದ ಅವರು, ಇದನ್ನು ಪರಿಹರಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಹೇಳಿದರು.

ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸತ್ತಿನ ಸದಸ್ಯರಾಗಿರುವ ಕಂಗನಾ ಅವರು ಹಿಂದಿ ದೈನಿಕ ದೈನಿಕ್‌ ಭಾಸ್ಕರ್‌ ಗೆ ನೀಡಿದ ಸಂದರ್ಶನದ ಕ್ಲಿಪ್‌ ಅನ್ನು ಎಕ್‌್ಸನಲ್ಲಿ ಪೋಸ್ಟ್‌ ಮಾಡಿ ರೈತರಿಂದಾಗಿ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ಉದ್ಭವಿಸಬಹುದೆಂದು ಹೇಳಿದ್ದರು.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಮತ್ತು ವಿಕಲಚೇತನ ಮಕ್ಕಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡಲು ವಾದ್ರಾ ಶುಕ್ರವಾರ ಇಲ್ಲಿಗೆ ಆಗಮಿಸಿದರು.

RELATED ARTICLES

Latest News