Friday, January 17, 2025
Homeಮನರಂಜನೆಗೋವಾ ಬೀಚ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌

ಗೋವಾ ಬೀಚ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌

ಬೆಂಗಳೂರು, ಜ.8– ವಿಶ್ವಮಟ್ಟದ ನಟರಾಗಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರು ತಮ 39ನೇ ಹುಟ್ಟುಹಬ್ಬದ ಸಂಭ್ರಮವನ್ನು ಗೋವಾದ ಬೀಚ್‌ ನಲ್ಲಿ ಆಚರಿಸಿಕೊಂಡಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದೆರಡು ವರ್ಷಗಳಂತೆ ಈ ವರ್ಷವೂ ಕೂಡ ನನ್ನ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿಕೊಳ್ಳುತ್ತಿಲ್ಲ , ತಮ ಮನೆ ಬಳಿಗೆ ಅಭಿಮಾನಿಗಳು ಬರಬೇಡಿ, ಅಲ್ಲದೆ ಯಾವುದೇ ಅಡಂಬರ ಮಾಡಬೇಡಿ ಎಂದು ಮನವಿ ಮಾಡಿದ್ದ ಯಶ್‌ ಅವರು, ತಮ ತಾರಾ ಪತ್ನಿ ರಾಧಿಕಾ , ಕುಟುಂಬ ಸದಸ್ಯರು ಹಾಗೂ ಕೆಲ ಸ್ನೇಹಿತರೊಂದಿಗೆ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಟಾಕ್ಸಿಸ್‌‍ ಉಡುಗೊರೆ:
ನಾನು ನಿಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ ಭರ್ಜರಿ ಗಿಫ್‌್ಟ ನೀಡುತ್ತೇನೆ ಎಂದು ಮಾತು ನೀಡಿದ್ದ ರಾಕಿ ಭಾಯ್‌ , ಇಂದು ತಮ ನಟನೆಯ ಟಾಕ್ಸಿಸ್‌‍ ಸಿನಿಮಾದ ಟೀಸರ್‌ ಅನ್ನು ಹರಿಬಿಟ್ಟಿದ್ದಾರೆ.

`ಟಾಕ್ಸಿಸ್‌‍’ ಗಿಂಪ್ಸ್ ಜೋರು ಸದ್ದು ಮಾಡುತ್ತಿದ್ದು, ಕೆಜಿಎಫ್‌ 2 ರಂತೆಯೇ ಯಶ್‌ ರ ಗೆಟಪ್‌ ಇರುತ್ತದೆ ಎಂದು ಅಂದಾಜಿಸಲಾಗಿತ್ತಾದರೂ, ಈ ಸಿನಿಮಾದಲ್ಲಿ ರಾಕಿ ಭಾಯ್‌ ನ ಮ್ಯಾನರಿಸಂ, ಲುಕ್‌ ಎಲ್ಲವೂ ಡಿಫರೆಂಟ್‌ ಆಗಿದ್ದು ಅಭಿಮಾನಿಗಳ ಮೆಚ್ಚುಗೆ ಗಿಟ್ಟಿಸಿದೆ.

ಟಾಕ್ಸಿಸ್‌‍ ಗಿಂಪ್ಸ್ ನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರು ರೆಟ್ರೋ ಕಾರಿನಲ್ಲಿ ಕ್ಯಾಸಿನೋಗೆ ಪ್ರವೇಶಿಸುವ ದೃಶ್ಯದಿಂದ ವಿಡಿಯೋ ಝಲಕ್‌ ಆರಂಭಗೊಳ್ಳುತ್ತದೆ. ಅಲ್ಲಿಂದ ಕ್ಯಾಸಿನೋ ಒಳಗೆ ಎಂಟ್ರಿ ಕೊಡುವ ರಾಕಿ ಭಾಯ್‌ ಮ್ಯಾನರಿಸಂ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿಸಿದೆ. ವೈಟ್‌ ಅಂಡ್‌ ವೈಟ್‌ ಸೂಟ್‌ ನಲ್ಲಿ ಹ್ಯಾಟ್‌ ಧರಿಸಿ, ಸಿಗಾರ್‌ ಸೇದುತ್ತಿರುವ ದೃಶ್ಯವು ಚಿತ್ರದ ಖದರ್‌ ಹೆಚ್ಚಿಸಿದೆ.

ಕೆವಿನ್‌ ಪ್ರೊಡಕ್ಷನ್ಸ್ ನಟಿ ವೆಂಕಟ್‌ ನಾರಾಯಣ್‌ ಹಾಗೂ ಯಶ್‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಗೀತು ಮೋಹನ್‌ ದಾಸ್‌‍ ನಿರ್ದೇಶಿಸುತ್ತಿದ್ದು, ನಯನತಾರಾ, ಕಿಯಾರಾ ಅದ್ವಾನಿ ಸೇರಿದಂತೆ ಬಹುತಾರಾಗಣವೇ ಚಿತ್ರದಲ್ಲಿದೆ.

RELATED ARTICLES

Latest News