Wednesday, September 18, 2024
Homeಬೆಂಗಳೂರುರಾಕ್‍ಲೈನ್ ವೆಂಕಟೇಶ್ ಸೋದರನ ಮನೆ ಕಳವು ಪ್ರಕರಣದಲ್ಲಿ ನೇಪಾಳಿ ಗ್ಯಾಂಗ್‍ನ 7 ಮಂದಿ ಅರೆಸ್ಟ್

ರಾಕ್‍ಲೈನ್ ವೆಂಕಟೇಶ್ ಸೋದರನ ಮನೆ ಕಳವು ಪ್ರಕರಣದಲ್ಲಿ ನೇಪಾಳಿ ಗ್ಯಾಂಗ್‍ನ 7 ಮಂದಿ ಅರೆಸ್ಟ್

ಬೆಂಗಳೂರು, ನ.28- ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರ ಸಹೋದರ ಉದ್ಯಮಿ ಭ್ರಮೇಶ್ ಅವರ ಮನೆಯಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಮೂವರು ಮಹಿಳೆಯರು ಸೇರಿದಂತೆ 7 ಮಂದಿ ನೇಪಾಳಿ ಗ್ಯಾಂಗ್‍ನ್ನು ಬಂಧಿಸಿ 1,53,25,000 ಮೌಲ್ಯದ 3.01 ಕೆಜಿ ಚಿನ್ನಾಭರಣ 562 ಗ್ರಾಂ ಬೆಳ್ಳಿ ವಸ್ತು ಗಳು, 16 ವಿವಿಧ ಕಂಪನಿಗಳ ವಾಚ್‍ಗಳು, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ನೇಪಾಳ ಮೂಲದ ಉಪೇಂದ್ರ ಶಾಹಿ, ನಾಚೇಂದ್ರ ಶಾಹಿ, ಕೋಲಾನು ಶಾಹಿ, ಸ್ವಸ್ತಿಕ್ ಶಾಹಿ, ಪೂಜಾ ಶಾಹಿ, ಪಾರ್ವತಿ ಶಾಹಿ ಹಾಗೂ ಸಾದಲ ಶಾಹಿ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಸೆ.21ರಂದು ಭ್ರಮ್ಮೇಶ್ ಅವರು ಕುಟುಂಬ ಸಮೇತ ಮನೆಯ ಡೋರ್ ಲಾಕ್ ಮಾಡಿಕೊಂಡು ವಿದೇಶ ಪ್ರವಾಸಕ್ಕೆ ಹೋಗಿದ್ದರು. ನಂತರ ಸೆ.29ರಂದು ಪ್ರವಾಸ ಮುಗಿಸಿ ಬೆಳಗ್ಗಿನ ಜಾವ ವಾಪಸ್ ಬಂದಾಗ ಮನೆಯ ಕಿಟಕಿ ಸರಳುಗಳನ್ನು ಮುರಿದು ಕಳ್ಳರು ಒಳಪ್ರವೇಶಿಸಿ, ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತು, ನಗದು ಹಣ, ವಿವಿಧ ಕಂಪನಿಯ ವಾಚ್‍ಗಳನ್ನು ಕಳವು ಮಾಡಿರುವ ಬಗ್ಗೆ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಅಕ್ಕಪಕ್ಕದ ರಸ್ತೆಯಲ್ಲಿ ಸಿ.ಸಿ. ಕ್ಯಾಮರಾಗಳನ್ನು ಪರಿಶೀಲಿಸಿದ್ದಾಗ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಹಾಗೂ ಇತರರ ಚಹರೆ ಪತ್ತೆಯಾಗಿತ್ತು.
ಕೃತ್ಯದ ವೇಳೆ ಸ್ಥಳದಲ್ಲಿ ದೊರೆತ ಬೆರಳಚ್ಚು ಮುದ್ರೆಯನ್ನು ಸಂಗ್ರಹಿಸಿ ಸುಮಾರು ಮೂರು ತಂಡಗಳು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾಗ ಈತನ ಮೇಲೆ ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆ, ಮಾಗಡಿ ರಸ್ತೆ ಪೊಲೀಸ್ ಠಾಣೆ, ಆಂಧ್ರಪ್ರದೇಶ ರಾಜ್ಯದ ಕುಕ್ಕಟಪಲ್ಲಿ ಪೊಲೀಸ್ ವೆಸ್ಟ್ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 15 ಕ್ಕೂ ಹೆಚ್ಚಿನ ಪ್ರಕರಣದಲ್ಲಿ ಈತ ಭಾಗಿಯಾಗಿರುವುದು ತಿಳಿದು ಬಂದಿದೆ.

ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ

ಇನ್ನು ಹಲವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದಲು ಅಡಾವತ್ ಅವರ ಮಾರ್ಗದರ್ಶನದಲ್ಲಿ, ಮಲ್ಲೇಶ್ವರಂ ಉಪ ವಿಭಾಗದ ಹೆಚ್ ಕೃಷ್ಣಮೂರ್ತಿ, ಮತ್ತು ಮಂಜು ಹೆಚ್. ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆ ನೇತೃತ್ವದ ತಂಡ ಈ ಕಾರ್ಯಾಚರಣೆ ಮಾಡಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ತಿಂಗಳ ಸ್ಕೆಚ್
ಭ್ರಮ್ಮೇಶ್ ಅವರ ಮನೆಯ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡವಿದ್ದು, ಅಲ್ಲಿ ಸೆಕ್ಯೂರಿಟಿ ಗಾರ್ಡ್‍ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಹಾಗೂ ಆತನ ಜೊತೆಗಿದ್ದ ಇತರರು ಮೂರು ತಿಂಗಳಿನಿಂದ ಮನೆಗೆ ಬಂದು ಹೋಗುವವರ ಬಗ್ಗೆ ನಿಗಾ ವಹಿಸಿದ್ದರು.

ತಂತ್ರ ರೂಪಿಸಿ ಭ್ರಮ್ಮೇಶ್ ಅವರ ಮನೆಗೂ ಸೆಕ್ಯೂರಿಟಿ ಗಾರ್ಡನ್ನು ಇವರೇ ನೇಮಿಸಿದ್ದರು. ಒಟ್ಟಾರೆ ಇವರು ಭಾರಿ ಸಿರಿವಂತರೆಂದು ಖಾತ್ರಿಪಡಿಸಿಕೊಂಡ ನಂತರ ಎಲ್ಲರೂ ಒಟ್ಟಾಗಿ ರಾತ್ರಿ ವೇಳೆ ಮನೆಗೆ ನುಗ್ಗಿ ಎಲ್ಲಾ ಕಡೆ ಜಾಲಾಡಿ ಬೀರು ಹಾಗೂ ಲಾಕರ್‍ಗಳನ್ನು ಒಡೆದು ಚಿನ್ನಾಭರಣ ವಜ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನೆಲ್ಲ ಗಂಟುಮೂಟೆ ಕಟ್ಟಿ ಅಲ್ಲಿಂದ ಪರಾರಿಯಾಗಿದ್ದರು.

ಅಮೆರಿಕ ನೆಲೆಗಳ ಛಾಯಾಚಿತ್ರ ತೆಗೆದಿದೆಯಂತೆ ಉತ್ತರ ಕೊರಿಯಾ ಉಪಗ್ರಹ

ನೆರೆಹೊರೆಯ ರಾಜ್ಯಗಳಲ್ಲಿ ಸುತ್ತಾಡಿದ್ದ ಆರೋಪಿಗಳು:
ಭಾರಿ ಕಳವು ಮಾಡಿದ ನಂತರ ಆರೋಪಿಗಳು ನೇಪಾಳಕ್ಕೆ ಪರಾರಿಯಾದರೆ ಸಿಕ್ಕಿ ಬೀಳುತ್ತೇವೆಂಬ ಮಾಹಿತಿ ಅರಿತು ಬೆಂಗಳೂರಿನಲ್ಲಿ ಕೆಲ ದಿನ ಇದ್ದು ಮಾಹಿತಿಗಳನ್ನು ಪಡೆದು ನಂತರ ದೇಶದ ನಾನಾ ಭಾಗಗಳಿಗೆ ತೆರಳಿದ್ದರು. ಒಂದು ಕಡೆ ಇರದೆ ಪ್ರತಿ ಎರಡು ದಿನಕ್ಕೊಮ್ಮೆ ಸ್ಥಳ ಬದಲಾವಣೆ ಮಾಡುತ್ತಿದ್ದರು.

RELATED ARTICLES

Latest News