Friday, November 22, 2024
Homeಕ್ರೀಡಾ ಸುದ್ದಿ | Sportsಬೋಪಣ್ಣ ಜೋಡಿಗೆ ಮಿಯಾಮಿ ಓಪನ್ ಡಬಲ್ಸ್ ಕಿರೀಟ

ಬೋಪಣ್ಣ ಜೋಡಿಗೆ ಮಿಯಾಮಿ ಓಪನ್ ಡಬಲ್ಸ್ ಕಿರೀಟ

ಬೆಂಗಳೂರು,ಮಾ.31- ಭಾರತದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ತಮ್ಮ ಅಮೆರಿಕನ್ ಜೊತೆಗಾರ ಮ್ಯಾಟ್ ಎಬ್ಡೆನ್ ಅವರೊಂದಿಗೆ ಇಲ್ಲಿ ಮಿಯಾಮಿ ಓಪನ್ ಟೆನ್ನಿಸ್ ಡಬಲ್ಸ್ ವಿಭಾಗದ ಕಿರೀಟ ಧರಿಸುವುದರೊಂದಿಗೆ ಅತ್ಯಂತ ಹಿರಿಯ ಎಟಿಪಿ ಮಾಸ್ಟರ್ಸ್ 1000 ಚಾಂಪಿಯನ್ ಎಂಬ ತಮ್ಮ ದಾಖಲೆಯನ್ನು ಉತ್ತಮಪಡಿಸಿದರು.

ಈ ವರ್ಷದ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿರುವ 44 ವರ್ಷ ವಯಸ್ಸಿನ ಬೋಪಣ್ಣ ಮತ್ತು ಎಬ್ಡೆನ್ ಮೊದಲ ಸೆಟ್ನಲ್ಲಿ ಹಿನ್ನಡೆ ಕಂಡರೂ ಮರುಹೋರಾಟ ನೀಡಿ 6-7, 6-3, 10-6ರಿಂದ ಕ್ರೊಯೇಶಿಯಾದ ಇವಾನ್ ಡೋಡಿಗ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ಜೋಡಿಯನ್ನು ಶನಿವಾರ ಹಾರ್ಡ್ರಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೋಲಿಸಿದರು.

ಈ ಗೆಲುವಿನೊಂದಿಗೆ ಬೋಪಣ್ಣ ಕಳೆದ ವರ್ಷ 43ನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದ ದಾಖಲೆಯನ್ನು ಮೀರಿ ನಿಂತರು ಮತ್ತು ಡಬಲ್ಸ್ ರ್ಯಾಂಕಿಂಗ್ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು.

ಇದು ವಿಸ್ಮಯಕಾರಿ ಇಂಥ ದೊಡ್ಡ ಪಂದ್ಯಾವಳಿಗಳಲ್ಲಿ ಉತ್ತಮವಾಗಿ ಆಡುವುದು ಸಾರ್ಥಕ ಎಂಂದು ವಿಜಯದ ಬಳಿಕ ಬೋಪಣ್ಣ ಹೇಳಿದರು.
ಬೋಪಣ್ಣ ಅವರು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಇದು ಅವರ ಪ್ರಥಮ ಡಬಲ್ಸ್ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯಾಗಿತ್ತು.

ಇಂದಿನ ಪ್ರಶಸ್ತಿ ತಂದ ಬೋಪಣ್ಣ ಅವರ 14ನೇ ಎಟಿಪಿ ಮಾಸ್ಟರ್ಸ್ 1000 ಫೈನಲ್ ಪಂದ್ಯವಾಗಿತ್ತು. ಒಟ್ಟಾರೆಯಾಗಿ ಇದು ಹಿರಿಯ ಭಾರತೀಯ ಆಟಗಾರನ 63ನೇ ಎಟಿಪಿ ಟೂರ್ ಮಟ್ಟದ ಫೈನಲ್ ಮತ್ತು 26ನೇ ಡಬಲ್ಸ್ ಪ್ರಶಸ್ತಿಯಾಗಿದೆ. ಬೋಪಣ್ಣ ಅವರು ಲಿಯಾಂಡರ್ ಫೇಸ್ ಬಳಿಕ ಎಲ್ಲ 4 ಎಟಿಪಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ತಲುಪಿದ 2ನೇ ಭಾರತೀಯ ಟೆನ್ನಿಸ್ ಪಟು ಎಂಬ ಹಿರಿಮೆಯನ್ನು ಸಾಸಿದಾರೆ.

RELATED ARTICLES

Latest News