ನವದೆಹಲಿ,ಜೂ.27- ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾ ಚೆಂಡು ವಿರೂಪ ಮಾಡಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಸುನಗುತ್ತಾ ಉತ್ತರಿಸಿದ ಅವರು, ಕೆರಿಬಿಯನ್ ದ್ವೀಪಗಳ ಕ್ರಿಕೆಟ್ ಪಿಚ್‌ನಲ್ಲಿ ಬೌಲರ್‌ಗಳು ರಿವರ್ಸ್ ಸ್ವಿಂಗ್ ಪಡೆಯುವುದು ಸಾಧ್ಯ ಎಂದು ಹೇಳಿದ್ದಾರೆ.
ಬಿಸಿಲಿನಲ್ಲಿ ಆಡುತ್ತಿದ್ದರೆ ಮತ್ತು ಪಿಚ್ ಒಣಗಿದ್ದರೆ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿದೆ. ಚೆಂಡು ಎಲ್ಲಾ ತಂಡಗಳಿಗೂ ಅದೇ ರೀತಿ ವರ್ತಿಸುತ್ತದೆ. ನಮಗೆ ಮಾತ್ರ ಅನುಕೂಲವಾಗಿಲ್ಲ.
ಕೆಲವೊಮೆ, ನಿಮ ತಲೆಯನ್ನು ತೆರೆದು ಮೆದುಳನ್ನು ಬಳಸಿ ಮಾತನಾಡಬೇಕಾಗುತ್ತದೆ. ನಾವು ಎಲ್ಲಿ ಆಡುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾವು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಆಡುತ್ತಿಲ್ಲ ಎಂದು ಪಾಕ್ ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪ್ರಭಾವಶಾಲಿ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ನಾಯಕ ವಿಲಕ್ಷಣ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ರೋಹಿತ್ ಶರ್ಮಾ ನಿಮ ಮೆದುಳು ಬಳಸಿ ಎಂದು ಆರೋಪಿಸಿದ್ದಾರೆ.
ಪಂದ್ಯಾವಳಿಯಲ್ಲಿ ಭಾರತೀಯ ವೇಗಿಗಳು ನಿರಂತರವಾಗಿ ಚೆಂಡನ್ನು ವಿರೂಪ ಮಾಡುತ್ತಿದ್ದರು ಎಂದು ಇಂಜಮಾಮ್ ಆರೋಪಿಸಿದ್ದರು. ರಿವರ್ಸ್ ಸ್ವಿಂಗ್ ಪಡೆಯಲು ಭಾರತೀಯ ಬೌಲರ್‌ಗಳು ಪಂದ್ಯದ ಚೆಂಡುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಇಂಜಾಮಾಜ್ ಉಲ್ ಹಕ್ ಹೇಳಿದ್ದರು.
ಪ್ರಸ್ತುತ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾರತದ ವೇಗಿಗಳು ಪ್ರಭಾವಶಾಲಿಯಾಗಿದ್ದರು. ಇದು ಚೆಂಡು ವಿರೂಪದಿಂದ ಮಾತ್ರ ಸಾಧ್ಯ ಎಂದು ಇಂಜಮಾಮ್ ಉಲ್ ಹಕ್ ಆರೋಪಿಸಿದ್ದರು.ಇಂಜಮಾಮ್ ಜತೆಗೆ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಸಲೀಮ್ ಮಲಿಕ್ ಆಸ್ಟ್ರೇಲಿಯಾ ವಿರುದ್ಧ ಅರ್ಶ್‌ದೀಪ್ ಸಿಂಗ್ 15ನೇ ಓವರ್‌ನಲ್ಲಿ ರಿವರ್ಸ್ ಸ್ವಿಂಗ್ ಮಾಡಿದ್ದಾರೆ.
ಇದು ಚೆಂಡು ವಿರೂಪದಿಂದ ಕಾರಣ ಹೇಳಿದ್ದಾರೆ. ಇಲ್ಲದಿದ್ದರೆ ಪಂದ್ಯದ 14 ಅಥವಾ 15ನೇ ಓವರ್‌ನಲ್ಲಿ ರಿವರ್ಸ್ ಸ್ವಿಂಗ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇನ್ನಿಂಗ್‌್ಸನ ಆರಂಭದಲ್ಲಿ ರಿವರ್ಸ್ ಸ್ವಿಂಗ್ ಮಾಡುವುದು ಅಸಾಧ್ಯ ಎಂದು ಹೇಳುವ ಮೊದಲು ಅಂಪೈರ್‌ಗಳು ಈ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದಿದ್ದರು.