ನವದೆಹಲಿ, ಜೂ. 27– ವಿರಾಟ್ ಕೊಹ್ಲಿಗೆ ಹೋಲಿಸಿದರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ತಮ ಕ್ಯಾಪ್ಟನ್ಸಿಯಲ್ಲಿ ಗಂಭೀರತೆ ಹೊಂದಿದ್ದಾರೆ ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್‌ದೇವ್ ಅವರು ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ.
ವೆಸ್ಟ್‌ಇಂಡೀಸ್ ಹಾಗೂ ಅಮೇರಿಕದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2024ರ ಚುಟುಕು ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸತತ 2ನೇ ಬಾರಿ ಜಾಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದ್ದು, ಹಿಂದಿನ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್‌ಶರ್ಮಾ ಪಡೆ ಸಜ್ಜಾಗಿದೆ. ಈ ನಡುವೆ ಮಾಜಿ ನಾಯಕ ಕಪಿಲ್ ದೇವ್ ಅವರು ಕಿಂಗ್ ಕೊಹ್ಲಿ ಹಾಗೂ ಹಿಟ್ ಮ್ಯಾನ್ ರೋಹಿತ್ ನಡುವೆ ನಾಯಕತ್ವದ ಹೊಂದಾಣಿಕೆ ಮಾಡಿದ್ದಾರೆ.
ರೋಹಿತ್ ತಮ್ಮ ಮಿತಿಯನ್ನು ಅರಿತಿದ್ದಾರೆ:
`ರೋಹಿತ್ ಶರ್ಮಾ ಅವರು ಮೈದಾನದಲ್ಲಿ ಎಂತಹ ಸನ್ನಿವೇಶದಲ್ಲೂ ವಿರಾಟ್ ಕೊಹ್ಲಿ ರೀತಿ ಹುಚ್ಚೆದ್ದು ಕುಣಿಯುವುದಿಲ್ಲ. ಅವರು (ರೋಹಿತ್ ಶರ್ಮಾ) ತನ್ನ ಸೀಮಿತವನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದು, ಅದಕ್ಕೆ ತಕ್ಕಂತೆಯೇ ಮೈದಾನದಲ್ಲಿ ವರ್ತಿಸುತ್ತಾರೆ. ಆತನಿಕ್ಕಿಂತ ಉತ್ತಮ ಆಟಗಾರ ತಂಡದಲ್ಲಿ ಮತ್ತೊಬ್ಬರಿಲ್ಲ’ ಎಂದು ಖ್ಯಾತ ಕ್ರಿಕೆಟ್ ವಿವರಣೆಕಾರ ಪ್ರಶಂಸಿಸಿದ್ದಾರೆ.
` ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಸ್ಟಾರ್ ಆಟಗಾರರು ತಮ ಕ್ರಿಕೆಟ್ ಜೀವನದ ಕಡೆ ಮಾತ್ರ ಹೆಚ್ಚಾಗಿ ಯೋಚಿಸುತ್ತಾರೆ. ನಾಯಕನಾದವನು ಕೂಡ ತಮ ದೃಷ್ಟಿಕೋನದಲ್ಲೇ ಆಲೋಚಿಸುತ್ತಾನೆ. ಆದರೆ ರೋಹಿತ್ ಶರ್ಮಾ ಈ ಸಾಲಿನಲ್ಲಿ ವಿಶಿಷ್ಟ ರೀತಿಯಲ್ಲಿ ಕಾಣಿಸಿಕೊಂಡಿದ್ದು ಇಡೀ ತಂಡವನ್ನು ಸಂತೋಷಕರ ವಾಗಿರಿಸಲು ಬಯಸುವುದರ ಜೊತೆಗೆ ತಂಡದ ಇತರ ಆಟಗಾರರಿಂದಲೂ ಉತ್ತಮ ಪ್ರದರ್ಶನ ಹೊರತರಲು ಸದಾ ಪ್ರಯತ್ನಿಸುತ್ತಾರೆ’ ಎಂದು ಕಪಿಲ್ ದೇವ್ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರು ತಮ ನಾಯಕತ್ವ ಹಾಗೂ ಸಂದರ್ಭಕ್ಕೆ ತಕ್ಕಂತೆ ಬೌಲರ್‌ಗಳ ಬಳಕೆ ಹಾಗೂ ಕ್ಷೇತ್ರ ರಕ್ಷಕರ ಸಂಯೋಜನೆಯಿಂದ ಸಾಕಷ್ಟು ಮಾಜಿ ಕ್ರಿಕೆಟಿಗರು ಹಿಟ್‌ಮ್ಯಾನ್ ರೋಹಿತ್‌ಶರ್ಮಾರನ್ನು ಶ್ಲಾಘಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ ಅದ್ಭುತ ನಾಯಕತ್ವದಿಂದ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು. ಆದರೆ ಆಸ್ಟ್ರೇಲಿಯಾ ಎದುರು 5 ವಿಕೆಟ್‌ಗಳ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದರು. ಆದರೆ ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಮತ್ತೊಮೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡುವ ಭರವಸೆ ಮೂಡಿಸಿದ್ದಾರೆ.
ನಾಯಕನಾಗಿ ಅಲ್ಲದೆ ಒಬ್ಬ ಆಟಗಾರನಾಗಿಯೂ ಪ್ರಬುದ್ಧ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 92 ರನ್ ಗಳಿಸಿ ತಂಡವನ್ನು ಸೆಮೀಸ್ ಸೇರಿಸಲು ಮಹತ್ತರ ಕೊಡುಗೆ ನೀಡಿದ್ದರು.
ಪ್ರಸಕ್ತ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಆಡಿರುವ 6 ಪಂದ್ಯಗಳಿಂದ 159.17 ಸ್ಟ್ರೈಕ್‌ರೇಟ್‌ನಲ್ಲಿ 191 ರನ್ ಗಳಿಸಿರುವ ರೋಹಿತ್‌ಶರ್ಮಾ ಸೆಮಿಫೈನಲ್‌ನಲ್ಲೂ ದೊಡ್ಡ ಮೊತ್ತ ಗಳಿಸುವ ಸೂಚನೆ ನೀಡಿದ್ದಾರೆ.