ಗಯಾನ, ಜೂ. 27- ಪ್ರಸಕ್ತ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಸೆಮಿಫೈನಲ್‌ನಲ್ಲಿ ಘರ್ಜಿಸಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರವಸೆ ವ್ಯಕ್ತಪಡಿಸಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆರಂಭಿಕನಾಗಿದ್ದ ವಿರಾಟ್ ಕೊಹ್ಲಿ 741 ರನ್ ಗಳಿಸುವ ಮೂಲಕ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಈ ಪ್ರದರ್ಶನದ ಆಧಾರದ ಮೇಲೆಯೇ ವೆಸ್ಟ್‌ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್‌ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಿದರೂ ಭಾರೀ ಮೊತ್ತ ಗಳಿಸುವಲ್ಲಿ ಎಡವಿದ್ದು, ಕಳೆದ 6 ಪಂದ್ಯಗಳಿಂದ ಕೇವಲ 66 ರನ್ ಗಳಿಸುವ ಮೂಲಕ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದರೆ, ಆಯ್ಕೆ ಮಂಡಳಿಯ ತಲೆ ಬಿಸಿ ಮಾಡಿದ್ದಾರೆ.
ಇಂಗ್ಲೆಂಡ್ ಹಾಗೂ ಭಾರತ ನಡುವಿನ ಸೆಮಿಫೈನಲ್ ಪಂದ್ಯದ ನಿಮಿತ್ತ ಹಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, `ವಿರಾಟ್ ಕೊಹ್ಲಿ ಅವರು ಖಂಡಿತವಾಗಿಯೂ ತಮ ಎಂದಿನ ಫಾರ್ಮ್ ಕಂಡುಕೊಳ್ಳುತ್ತಾರೆ. ಅಲ್ಲದೆ ಅವರು ತಮ ಎಂದಿನ ಲಯಕ್ಕೆ ಮರಳಲು ಇಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದು ಹಿಟ್‌ಮ್ಯಾನ್ ತಿಳಿಸಿದ್ದಾರೆ.
`ತಂಡದ ಸಂಯೋಜನೆಯನ್ನು ಪಿಚ್‌ನ ಕಂಡೀಷನ್‌್ಸಗೆ ಹೊಂದಾಣಿಕೆ ಆಗುವಂತೆ ಮಾಡಬೇಕಾಗುತ್ತದೆ. ನ್ಯೂಯಾರ್ಕ್‌ನ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಸಾಕಷ್ಟು ಕಠಿಣವಾಗಿತ್ತು. ಇಂತಹ ಕ್ರೀಡಾಂಗಣದಲ್ಲಿ ಬ್ಯಾಟರ್ಸ್‌ಗಳಿಗೆ ಬಿಡುಬೀಸಾಗಿ ರನ್ ಗಳಿಸಿರಿ ಎಂದು ಹೇಳಲಾಗುವುದಿಲ್ಲ’ ಎಂದು ರೋಹಿತ್‌ಶರ್ಮಾ ಹೇಳಿದ್ದಾರೆ.
`ಯಾವುದೇ ಪಂದ್ಯವಾಗಲಿ ಆಟಗಾರರು ಮೊದಲು ಪಿಚ್‌ನ ಗುಣವನ್ನು ಮೊದಲು ಚೆನ್ನಾಗಿ ಅರಿತುಕೊಳ್ಳಬೇಕು. ನಮ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದು, ನಾನು ಅವರ ಬಗ್ಗೆ ಈ ಹಿಂದೆಯೂ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಅಲ್ಲದೆ ಪ್ರತಿಯೊಬ್ಬರು ಅವರದೇ ಆದ ಸ್ವತಃ ಅನುಭವ ಹೊಂದಿದ್ದಾರೆ. ನಮ ಬ್ಯಾಟರ್ಸ್‌ಗಳು ಬೇಕಿದ್ದರೆ, ರಿವರ್ಸ್ ಸ್ವೀಪ್ ಹೊಡೆಯಲಿ, ಅದೇ ರೀತಿ ಬೌಲರ್‌ಗಳು ಯಾರ್ಕರ್ ಅಥವಾ ಬೌನ್‌್ಸ ಮಾಡಲಿ. ಆ ನಿರ್ಧಾರವನ್ನು ಅವರಿಗೆ ಬಿಟ್ಟಿದ್ದೇನೆ’ ಎಂದು ಹಿಟ್‌ಮ್ಯಾನ್ ರೋಹಿತ್‌ಶರ್ಮಾ ಹೇಳಿದ್ದಾರೆ.