Monday, February 24, 2025
Homeರಾಜ್ಯಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ತೆರೆ, 10 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ತೆರೆ, 10 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ

Rs 10 lakh crore investment expected in Global Investors' Conference

ಬೆಂಗಳೂರು, ಫೆ.14-ಬೆಂಗಳೂರಿನ ಅರಮನೆ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಇನ್ವೆಸ್ಟ್‌ ಕರ್ನಾಟಕ-25)ಕ್ಕೆ ಇಂದು ಮಧ್ಯಾಹ್ನ ತೆರೆ ಬಿದ್ದಿತ್ತು.

ಹತ್ತು ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆಯೊಂದಿಗೆ ನಡೆದ ಈ ಸಮಾವೇಶದಲ್ಲಿ ಬಹುಕೋಟಿ ರೂ.ಗಳ ಹೂಡಿಕೆಯ ಒಪ್ಪಂದವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಸಚಿವರು, ವಿವಿಧ ಉದ್ಯಮಗಳ ದಿಗ್ಗಜರು ಭಾಗವಹಿಸಿದ್ದರು.

ಫೆ.11 ರಂದು ಸಂಜೆ ವಿದ್ಯುಕ್ತವಾಗಿ ಜಾಗತಿಕ ಬಂಡಾವಳ ಹೂಡಿಕೆದಾರರ ಸಮಾವೇಶ ಆರಂಭಗೊಂಡಿತ್ತು. ಮೊದಲ ದಿನವೇ ವಿವಿಧ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಸಮಾವೇಶದ ಸಂದರ್ಭದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತೆ ಹೊಸ ಕೈಗಾರಿಕಾ ನೀತಿ ಬಿಡುಗಡೆ ಮಾಡಲಾಗಿದೆ. 15 ಸಾಧಕ ಉದ್ಯಮಿಗಳಿಗೆ ಪುರಸ್ಕಾರ ನೀಡಲಾಗಿದೆ. ವಿಪ್ರೋ ಹೆಲ್ತ್ ಕೇರ್‌ನಿಂದ 8 ಸಾವಿರ ಕೋಟಿ ರೂ, ವೋಲ್ಲೋ ಕಂಪನಿಯಿಂದ 1400 ಕೋಟಿ ರೂ. ಸೇರಿಂದ ಹಲವು ಕಂಪನಿ ಹಾಗೂ ಉದ್ಯಮಿಗಳ ನಡುವೆ ಬೃಹತ್ ಬಂಡವಾಳ ಹೂಡಿಕೆಯ ಒಪ್ಪಂದವಾಗಿದೆ.

ಕ್ವಿನ್‌ಸಿಟಿ ಯೋಜನೆಯ ಬಗ್ಗೆ ವಿಸ್ತ್ರತ ಚರ್ಚೆಯಾಗಿದ್ದು, 9 ವಿಶ್ವವಿದ್ಯಾಲಯಗಳೊಂದಿಗೆ ಸಭೆ ನಡೆಸಲಾಗಿದೆ. 9 ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ, 15 ವೈದ್ಯಕೀಯ ವಿಶ್ವವಿದ್ಯಾಲಯಗಳೊಂದಿಗೆ ಸಭೆ ನಡೆಸಲಾಗಿದೆ. ಕೃತಕ ಬುದ್ದಿಮತ್ತೆ, ಸೆಮಿಕಂಡಕ್ಟರ್, ಎಂಎಸ್ ಎಂಣಗಳ ಬಗ್ಗೆ ವಿವಿಧ ವಿಚಾರಗೋಷ್ಠಿಗಳು ನಡೆದಿವೆ.

ಸೆಮಿಕಂಡಕ್ಟರ್ ವಲಯದಲ್ಲಿ ವಿಪುಲವಾಗಿ ದೊರೆಯುವ ಉದ್ಯೋಗಾವಕಾಶಗಳ ಬಗ್ಗೆ ಪರಿಣಿತರೊಂದಿಗೆ ಚರ್ಚೆಗಳಾಗಿವೆ. ರಕ್ಷಣಾ ಕ್ಷೇತ್ರ, ಸಣ್ಣ ನಗರಗಳಲ್ಲಿ ಸ್ಟಾರ್ಟರ್ ವಿಸ್ತರಣೆ, ವಾಹನೋದ್ಯಮ ಸೇರಿದಂತೆ ವಿವಿಧ ಕೈಗಾರಿಕೆ ಕ್ಷೇತ್ರಗಳ ಬಗ್ಗೆ ಚರ್ಚೆ, ಪರಸ್ಪರ ಒಪ್ಪಂದಗಳಾಗಿವೆ.

ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದವು. 16 ದೇಶಗಳ ರಾಯಭಾರಿಗಳು ಭಾಗಿಯಾಗಿದ್ದರು. ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಗೊಳಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದರು.

RELATED ARTICLES

Latest News