Friday, November 22, 2024
Homeರಾಷ್ಟ್ರೀಯ | Nationalಪುಣೆ ಪೋರ್ಶೆ ಕಾರು ಪ್ರಕರಣ : ರಕ್ತದ ಮಾದರಿ ವರದಿ ಬದಲಾಯಿಸಲು ಲಂಚ ಕೊಟ್ಟಿದ್ದ ಆರೋಪಿ...

ಪುಣೆ ಪೋರ್ಶೆ ಕಾರು ಪ್ರಕರಣ : ರಕ್ತದ ಮಾದರಿ ವರದಿ ಬದಲಾಯಿಸಲು ಲಂಚ ಕೊಟ್ಟಿದ್ದ ಆರೋಪಿ ಕುಟುಂಬಸ್ಥರು

ಮುಂಬೈ, ಮೇ 28- ಪುಣೆಯಲ್ಲಿ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಕಾರು ಅಪಘಾತ ಮಾಡಿದ ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ಆತನ ಕುಟುಂಬಸ್ಥರು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಪುಣೆ ಪೋರ್ಶೆ ಅಪಘಾತ ಪ್ರಕರಣದಲ್ಲಿ 17 ವಯಸ್ಸಿನ ಆರೋಪಿಯ ರಕ್ತ ಪರೀಕ್ಷೆಯ ವರದಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಇಬ್ಬರು ವೈದ್ಯರೊಂದಿಗೆ ನಿನ್ನ ಪ್ಯೂನ್‌ ಬಧಿದಿತನಾಗಿದ್ದ. ಈತ ವೈದ್ಯರಿಗೆ 3 ಲಕ್ಷ ರೂ. ಲಂಚ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅತುಲ್‌ ಘಟಕಾಂಬಳೆ ಎಂಬ ಪ್ಯೂನ್‌ ಮಧ್ಯವರ್ತಿಯಾಗಿ, ಅಪ್ರಾಪ್ತನ ಕುಟುಂಬದಿಂದ ಇಬ್ಬರು ವೈದ್ಯರಿಗೆ 3 ಲಕ್ಷ ರೂ. ಲಂಚವನ್ನು ಸಂಗ್ರಹಿಸಿದ್ದ. ಸಸೂನ್‌ ಆಸ್ಪತ್ರೆಯ ಡಾ. ಅಜಯ್‌ ತವಾಡೆ ಮತ್ತು ಡಾ. ಹರಿ ಹಾರ್ನರ್‌ ಅವರನ್ನು ಪುಣೆ ಕ್ರೈಂ ಬ್ರಾಂಚ್‌ ನಿನ್ನೆ ಬಂಧಿಸಿತ್ತು.

ತನಿಖೆಯಿಂದ ಡಾ. ತವಡೆ ಮತ್ತು ಹದಿಹರೆಯದ ಆರೋಪಿಯ ತಂದೆ ಅಪಘಾತದ ದಿನ ೇನ್‌ನಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಾಪರಾಧಿಯ ತಂದೆ ವೈದ್ಯರಿಗೆ ಕರೆ ಮಾಡಿ ರಕ್ತದ ಮಾದರಿ ವರದಿಗಳನ್ನು ಬದಲಿಸಲು ಆಮಿಷ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿರುವ ಮಾದರಿಗಳು ಬಾಲಾಪರಾಧಿ ಗಳದ್ದಲ್ಲ ಎಂದು ಪುಣೆ ಪೊಲೀಸ್‌‍ ಆಯುಕ್ತ ಅಮಿತೇಶ್‌ ಕುಮಾರ್‌ ಹೇಳಿದ್ದರು. ಮೇ 19 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ, ಸ್ಯಾಸೂನ್‌ ಆಸ್ಪತ್ರೆಯಲ್ಲಿ ತೆಗೆದ ಅಪ್ರಾಪ್ತನ ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆಯಲಾಯಿತು. ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಅಪ್ರಾಪ್ತರ ರಕ್ತದ ಮಾದರಿಗಳನ್ನು ಬದಲಾಯಿಸಲಾಗಿದ್ದು, ಭಾನುವಾರ ಬಂದ ವರದಿಯಲ್ಲಿ ಮದ್ಯದ ಯಾವುದೇ ಕುರುಹು ಕಂಡುಬಂದಿಲ್ಲ. ಆದರೆ ಆ ರಾತ್ರಿ ಆತ ಭೇಟಿ ನೀಡಿದ ಬಾರ್‌ ಒಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ.

RELATED ARTICLES

Latest News