Friday, November 22, 2024
Homeರಾಷ್ಟ್ರೀಯ | Nationalಕಚ್ಛಾತೀವು ದ್ವೀಪವನ್ನು ಇಂದಿರಾಗಾಂಧಿ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ವಿಚಾರವಾಗಿ ಮೋದಿ ವಾಗ್ದಾಳಿ

ಕಚ್ಛಾತೀವು ದ್ವೀಪವನ್ನು ಇಂದಿರಾಗಾಂಧಿ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ವಿಚಾರವಾಗಿ ಮೋದಿ ವಾಗ್ದಾಳಿ

ನವದೆಹಲಿ,ಮಾ.31- ಶ್ರೀಲಂಕಾಕ್ಕೆ ಭಾರತ ಕಚ್ಛಾತೀವು ದ್ವೀಪವನ್ನು ಬಿಟ್ಟುಕೊಟ್ಟಿದೆ ಎಂದು ಮಾಧ್ಯಮದ ವರದಿಯನ್ನು ಆಧರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆ ಚರ್ಚೆಯ ವಿಷಯವಾಗಿದ್ದು, ಚೀನಾ, ಭಾರತದ ನೆಲದ ಮೇಲೆ ಆಕ್ರಮಣ ಮಾಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಆರೋಪವನ್ನು ವಿರೋಧಪಕ್ಷಗಳು ಮಾಡುತ್ತಿವೆ.

ಇದಕ್ಕೆ ತಿರುಗೇಟು ಎಂಬಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 1974 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಪಾಕ್ ಜಲಸಂಯಲ್ಲಿನ ಪ್ರದೇಶವನ್ನು ನೆರೆಯ ದೇಶಕ್ಕೆ ಹಸ್ತಾಂತರಿಸಿರುವ ನಿರ್ಧಾರ ತೆಗೆದುಕೊಂಡಿರುವುದನ್ನು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಆರ್‍ಟಿಐ ಮೂಲಕ ದಾಖಲೆಯನ್ನು ಪಡೆದುಕೊಂಡಿದ್ದರು.

ಈ ಕುರಿತು ವರದಿಯಾಗಿರುವುದನ್ನು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿಯವರು ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು 75 ವರ್ಷಗಳಿಂದ ಕಾಂಗ್ರೆಸ್ ಮಾಡುತ್ತಿರುವ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ಕಚ್ಛಾತೀವು ದ್ವೀಪದ ಹಸ್ತಾಂತರ ವಿವಾದ ಬಿಜೆಪಿಗೆ ರಾಜಕೀಯ ಲಾಭ ಉಂಟುಮಾಡಬಹುದು ಎಂಬ ನಿರೀಕ್ಷೆಗಳಿವೆ.
ಭಾರತ ಮತ್ತು ಶ್ರೀಲಂಕಾದಲ್ಲಿನ ವಿವಾದದ ಮೂಲವಾದ ಈ ವಿಷಯದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಅಭಿಪ್ರಾಯಗಳನ್ನು ಖಾಸಗಿ ಸುದ್ದಿಸಂಸ್ಥೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Latest News