Friday, November 22, 2024
Homeರಾಷ್ಟ್ರೀಯ | Nationalಶಬರಿಮಲೈಯಲ್ಲಿ ಭಕ್ತರ ನೂಕುನುಗ್ಗಲು

ಶಬರಿಮಲೈಯಲ್ಲಿ ಭಕ್ತರ ನೂಕುನುಗ್ಗಲು

ಶಬರಿಮಲೈ, ಡಿ.27- ಇಲ್ಲಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಗಳಕರ ಮಂಡಲ ಪೂಜೆ ಅಂಗವಾಗಿ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿದ್ದು, ನೂಕು ನುಗ್ಗಲು ಉಂಟಾಗಿದೆ ದರ್ಶನಕ್ಕಾಗಿ ಭಕ್ತರ ಪರದಾಟ ಹೆಚ್ಚಾಗಿದೆ. ಕನಿಷ್ಠ ಸೌಲಭ್ಯಗಳಿಲ್ಲದೆ ಅಸ್ತವ್ಯಸ್ತ ಉಂಟಾಗಿ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವಿತ್ರ ಇರುಮುಡಿಕಟ್ಟು ತಲೆಯ ಮೇಲೆ ಹೊತ್ತು ಸ್ವಾಮಿಯೇ ಶರಣಂ ಅಯ್ಯಪ್ಪ ಮಂತ್ರಗಳನ್ನು ಪಠಿಸುತ್ತಿರುವ ಯಾತ್ರಾರ್ಥಿಗಳ ಉದ್ದನೆಯ ಸರತಿ ಸಾಲುಗಳು ದೇವಾಲಯದ ಸಂಕೀರ್ಣವಾದ ಸನ್ನಿಧಾನದಲ್ಲಿ ಕಂಡು ಬಂದಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ನಡೆಯುವ ವಾರ್ಷಿಕ ತೀರ್ಥಯಾತ್ರೆಯ ಮೊದಲ ಪಾದದ ಮುಕ್ತಾಯವನ್ನು ಸೂಚಿಸುವ ಮಂಡಲ ಪೂಜೆಯ ಭಕ್ತ ಸಾಗರಕ ದರ್ಶನ ಪಡೆದು ಧನ್ಯತೆ ಭಾವ ಮೂಡಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ರಸಗೊಬ್ಬರ ಘಟಕದಿಂದ ಅಮೋನಿಯಾ ಸೋರಿಕೆ

ಅಯ್ಯಪ್ಪ ದೇವರ ಪವಿತ್ರ ತಂಕ ಅಂಕಿ (ಚಿನ್ನದ ವಸ್ತ್ರ) ಹೊತ್ತ ವಿಧ್ಯುಕ್ತ ಮೆರವಣಿಗೆ ನಿನ್ನೆ ಸಂಜೆ ಇಲ್ಲಿನ ಬೆಟ್ಟದ ದೇಗುಲವನ್ನು ತಲುಪಿತು.ದೇವಾಲಯದ ಆಡಳಿತ ಮೂಲಗಳ ಪ್ರಕಾರ, ಪ್ರಧಾನ ದೇವರಾದ ಅಯ್ಯಪ್ಪ ದೇವರ ವಿಗ್ರಹದ ಮೇಲ್ಮೈ ಅಲಂಕರಿಸಿದ ನಂತರ ಪೂಜೆಯನ್ನು ಮಾಡಲಾಗುತ್ತದೆ.

ಬೆಳಗ್ಗೆ 10.30ರಿಂದ 11.30ರವರೆಗೆ ಪೂಜಾ ವಿಧಿವಿಧಾನಗಳು ನೆರವೇರಿದೆ ಮಂಡಲ ಪೂಜೆಯ ನಂತರ, ದೇಗುಲವನ್ನು ರಾತ್ರಿ 11.00 ಗಂಟೆಗೆ ಮುಚ್ಚಲಾಗುವುದು ಮತ್ತು ಡಿಸೆಂಬರ್ 30 ರಂದು ಮಕರವಿಳಕ್ಕು ಧಾರ್ಮಿಕ ಕ್ರಿಯೆಗಳಿಗೆ ಪುನಃ ತೆರೆಯಲಾಗುವುದು. ಶಬರಿಮಲೆ ದೇಗುಲದಲ್ಲಿ ಮಕರವಿಳಕ್ಕು ಆಚರಣೆ ಜನವರಿ 15 ರಂದು ನಡೆಯಲಿದೆ ಎಂದು ಟಿಡಿಬಿ ಮೂಲಗಳು ತಿಳಿಸಿವೆ.

RELATED ARTICLES

Latest News