ನವದೆಹಲಿ,ಜ.29- ಜ್ಞಾನವ್ಯಾಪಿ ಕುರಿತ ವರದಿಯನ್ನು ತಿರಸ್ಕರಿಸುವ ಜನರು ತುಕಡೆ ತುಕಡೆ ಗ್ಯಾಂಗ್‍ನ ಭಾಗವಾಗಿದ್ದಾರೆ ಎಂದು ಮುಸ್ಲಿಂ ವಿದ್ವಾಂಸರಾದ ಕಾರಿ ಅಬ್ರಾರ್ ಜಮಾಲ್ ಕಿಡಿಕಾರಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಲಾಗಿದೆ. ಇದನ್ನು ವಿರೋಸುವ ಜನರಿಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲವೇ? ಅವರಿಗೆ ಪ್ರತ್ಯೇಕ ನ್ಯಾಯಾಲಯ ಮತ್ತು ಪ್ರತ್ಯೇಕ ದೇಶ ಬೇಕೇ ಎಂದು ಪ್ರಶ್ನಿಸಿದ್ದಾರೆ.
ಹಿಂದೂಗಳು ಪ್ರತೀ ಮಸೀದಿಯಲ್ಲಿ ಶಿವಲಿಂಗವನ್ನು ಕಾಣಬಾರದು ಎಂದು ಆರ್‍ಎಸ್‍ಎಸ್ ಮುಖ್ಯಸ್ಥರು ಈಗಾಗಲೇ ಹೇಳಿದ್ದಾರೆ. ಈಗ ಎಎಸ್‍ಐ ವರದಿ ನಂತರ ಮುಸ್ಲಿಮರಾದ ನಾವೂ ಕೂಡ ದೊಡ್ಡ ಹೃದಯ ವೈಶಾಲ್ಯತೆಯನ್ನು ಪ್ರದರ್ಶಿಸಬೇಕು ಮತ್ತು ಸಾಮರಸ್ಯಕ್ಕಾಗಿ ಹಿಂದೂ ಪರವಾಗಿರಬೇಕು ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿದ ರಾಮಜನ್ಮಭೂಮಿ ಟ್ರಸ್ಟ್‍ನ ಎಲ್ಲಾ ಮುಖಂಡರಿಗೂ ನಾವು ಕೃತಜ್ಞರಾಗಿದ್ದೇವೆ.
ಇಂಡಿ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಕೊನೇ ಮೊಳೆ ಹೊಡೆದಿದ್ದಾರೆ
ಅಲ್ಲಿಗೆ ಹೋಗಿ ಬಂದ ನಂತರ ನಾವು ಬೇರೆ ಕಡೆಗೆ ಹೋಗಿ ಬಂದಿದ್ದೇವೆ ಎಂದು ನಮಗೆ ಅನ್ನಿಸಲೇ ಇಲ್ಲ. ಇದು ನಮಗೆ ಒಂದು ಐತಿಹಾಸಿಕ ಕ್ಷಣವಾಗಿದೆ. ಸಾಧು-ಸಂತರು, ಋಷಿಮುನಿಗಳು ಸೇರಿ ನಡೆಸಿದ ಮಹತ್ತರ ಧಾರ್ಮಿಕ ಕಾರ್ಯಕ್ರಮ ಇದಾಗಿತ್ತು. ಇದನ್ನು ಕಣ್ತುಂಬಿಕೊಂಡು ನಾವು ಧನ್ಯರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಲ್ಲಿ ನಮ್ಮನ್ನು ತುಂಬಾ ಆದರವಾಗಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಎಲ್ಲಾ ಸಂತರು ಮತ್ತು ಋಷಿಗಳ ನಡುವೆ ನಾವು ಜೈ ಶ್ರೀರಾಮ್ ಜಪಿಸಿದೆವು ಎಂದು ಹೇಳಿದರು.