Sunday, October 6, 2024
Homeರಾಜ್ಯಸಾಲುಮರದ ತಿಮಕ್ಕ ಪ್ರಶಸ್ತಿಗೆ ಭಾಜನರಾದ ಸುರೇಶ್

ಸಾಲುಮರದ ತಿಮಕ್ಕ ಪ್ರಶಸ್ತಿಗೆ ಭಾಜನರಾದ ಸುರೇಶ್

Salumara Timakka Award to Suresh

ಬೆಂಗಳೂರು, ಸೆ.24-ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಂಡು ಬಡವರ ಪರ ಹೋರಾಟಗಳನ್ನು ಮಾಡುತ್ತಾ ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವ ಕುರುಡುಸೋಣ್ಣೇನಹಳ್ಳಿ ಗ್ರಾಮದ ಸುರೇಶ್‌(ಸೂರಿ) ಅವರು ಸಾಲುಮರದ ತಿಮಕ್ಕ ನ್ಯಾಷನಲ್‌ ಗ್ರೆನರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸುರೇಶ್‌ ರವರು ಮೂಲತಃ ಮಹದೇವಪುರ ವಿಧಾನಸಭಾ ಕ್ಷೇತ್ರದ ಕುರುಡು ಸೊಣ್ಣೇನಹಳ್ಳಿ ಗ್ರಾಮದದವರಾಗಿದ್ದು, ಬಡಕುಟುಂಬದಿಂದ ಬೆಳೆದು ಬಂದವರು, ಬಡವರ ಕಷ್ಟಗಳ ಮಧ್ಯೆ ಬೆಳೆದಿರುವ ಇವರು ನಾವು ಪಟ್ಟಿರುವ ಕಷ್ಟಗಳು ಸುತ್ತಮುತ್ತಲಿನ ಬಡ ಜನರು ಪಡಬಾರದೆಂದು ತಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ.

ಸುಮಾರು 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಸುರೇಶ್‌ರವರು ಸರ್ಕಾರಿ ಶಾಲೆಗಳಿಗೆ 20 ಸಾವಿರ ತಟ್ಟೆ, 20 ಸಾವಿರ ಗ್ಲಾಸ್‌‍ಗಳು, ನೋಟ್‌ಪುಸ್ತಕಗಳು ನೀಡಿದ್ದಾರೆ. ಅಲ್ಲದೆ ಬಡ ಮಕ್ಕಳ ಶಾಲಾ ಶುಲ್ಕವನ್ನೂ ಸಹ ಇವರೆ ಕಟ್ಟಿದ್ದಾರೆ. ವಿಕಲಚೇತನರಿಗೆ ಸ್ಟಿಕ್‌, ಬಡವರಿಗೆ ಬೆಡ್‌ಶೀಟ್‌ಗಳು ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

ಐಎಎಸ್‌‍, ಐಪಿಎಸ್‌‍ ಓದುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ, ಸಾವಿರಾರು ಸಸಿಗಳನ್ನು ನೆಟ್ಟು, ಪೋಷಿಸಲು ಯುವಕರಿಗೆ ಕರೆ ನೀಡಿದ್ದಾರೆ, ದೇವಾಲಯಗಳ ಅಭಿವೃದ್ಧಿಗೆ ಸಹಾಯದನ ಮಾಡಿದ್ದಾರೆ, ಬಡವರಿಗೆ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ಹಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್‌, ಮಾಡಿರುವ ಸೇವೆ ಹೇಳಿಕೊಳ್ಳಬಾರದು ಅದನ್ನು ಗುರುತಿಸಿ ನಮಗೆ ಈ ಪ್ರಶಸ್ತಿ ನೀಡುತ್ತಿದ್ದಾರೆ ಇನ್ನಷ್ಟು ಹೆಚ್ಚು ಸಮಾಜ ಸೇವೆ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದು ಹೇಳಿದರು.

ತಮನ್ನು ಆಯ್ಕೆ ಮಾಡಿದ ಸಾಲುಮರದ ತಿಮಕ್ಕ ಇಂಟರ್‌ನ್ಯಾಷನಲ್‌ ೌಂಡೇಶನ್‌, ಸಾಲುಮರದ ತಿಮಕ್ಕ ಅಭಿನಂದನಾ ಸಮಿತಿಗೆ ಧನ್ಯವಾದ ತಿಳಿಸಿದ್ದಾರೆ.ಇದೇ ಸೆ.26 ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

RELATED ARTICLES

Latest News