Friday, May 24, 2024
Homeರಾಷ್ಟ್ರೀಯರಾಷ್ಟ್ರಪತಿಗಳಿಂದ ಗೌರವ ಡಾಕ್ಟರೇಟ್ ಪಡೆದ ಶತಾವಧಾನಿ ಆರ್.ಗಣೇಶ್

ರಾಷ್ಟ್ರಪತಿಗಳಿಂದ ಗೌರವ ಡಾಕ್ಟರೇಟ್ ಪಡೆದ ಶತಾವಧಾನಿ ಆರ್.ಗಣೇಶ್

ನವದೆಹಲಿ, ಮಾ.8- ಶತಾವಧಾನಿ ಆರ್.ಗಣೇಶ್ ಅವರಿಗೆ ದೆಹಲಿಯ ಕೇಂದ್ರೀಯ ಸಂಸ್ಕøತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿರುವುದಕ್ಕೆ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ.

ಗಮಕ, ಅಷ್ಟಾವಧಾನ, ವ್ಯಾಕರಣ ಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಆರ್.ಗಣೇಶ್ ಅವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದಾರೆ.

ಸಾರಸ್ವತ ಲೋಕದ ವಿದ್ವತ್ ಮುಕುಟದಂತಿರುವ ಶತಾವಧಾನಿ ಆರ್.ಗಣೇಶ್ ಅವರಿಗೆ ಕೇಂದ್ರೀಯ ಸಂಸ್ಕøತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಿಸಿದ್ದು, ಇದು ಕರ್ನಾಟಕ ರಾಜ್ಯಕ್ಕೆ ಸಂದ ಗೌರವ ಎಂದು ಅನೇಕ ಸಾಹಿತಿಗಳು, ಕಲಾವಿದರು ಪ್ರಶಂಸಿಸಿದ್ದಾರೆ.

RELATED ARTICLES

Latest News