Sunday, September 8, 2024
Homeಅಂತಾರಾಷ್ಟ್ರೀಯ | Internationalಟೇಕಾಫ್ ವೇಳೆ ವಿಮಾನ ಪತನ..

ಟೇಕಾಫ್ ವೇಳೆ ವಿಮಾನ ಪತನ..

ಕಠಂಡು, ಜು 25- ಖಾಸಗಿ ಏರ್ಲೈನ್‌್ಸ ಕಂಪನಿಯೊಂದಕ್ಕೆ ಸೇರಿದ ವಿಮಾನವೊಂದು ಟೇಕಾಫ್ ವೇಳೆ ಪತನಗೊಂಡ ಘಟನೆ ಇಂದು ಬೆಳಗ್ಗೆ ಕಠಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತಕ್ಕೀಡಾದ ವಿಮಾನ ಇಲ್ಲಿಂದ ಪೋಖರಾಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೌರ್ಯ ಏರ್ಲೈನ್‌್ಸಗೆ ಸೇರಿದ ವಿಮಾನದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ ಕನಿಷ್ಠ 19 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.

ಅಪಘಾತದ ನಂತರ ರಕ್ಷಣಾ ಸಿಬ್ಬಂಧಿ ಸ್ಥಳಕ್ಕೆ ದಾವಿಸಿ ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ ಗಾಯಗೊಂಡಿದ್ದ ವಿಮಾನದ ಪೈಲಟ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯು ಹೆಚ್ಚಿನ ವಿವರಗಳನ್ನು ನೀಡಿಲ್ಲ ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಯಾಣಿಕರ ಸ್ಥಿತಿಯ ಬಗ್ಗೆ ವಿವರಗಳು ತಿಳಿದುಬಂದಿಲ್ಲ.ಆದರೆ ಮಾಹಿತಿ ಪ್ರಕಾರ 10 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿ

RELATED ARTICLES

Latest News