Friday, October 11, 2024
Homeಇದೀಗ ಬಂದ ಸುದ್ದಿಶವವಾಗಿ ನೇತಾಡುತ್ತಿದ್ದ ವಿದ್ಯಾರ್ಥಿ ಶವ ಕೆಳಗಿಳಿಸಲು ಎಂಟು ಗಂಟೆ..!

ಶವವಾಗಿ ನೇತಾಡುತ್ತಿದ್ದ ವಿದ್ಯಾರ್ಥಿ ಶವ ಕೆಳಗಿಳಿಸಲು ಎಂಟು ಗಂಟೆ..!

ಗುವಾಹಟಿ,ಸೆ.10- ಇಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ)ಯಲ್ಲಿ 21 ವರ್ಷದ ವಿದ್ಯಾರ್ಥಿಯ ಸಾವು ಇತರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.ವಿದ್ಯಾರ್ಥಿಗಳು ಮತ್ತು ಪೋಷಕರ ಬಗ್ಗೆ ಆಡಳಿತವು ಬೇಜವಬ್ದಾರಿ ಧೋರಣೆ ತಳೆದಿದೆ ಎಂದು ಅವರ ಮೃತನ ಸ್ನೇಹಿತರು ಆರೋಪಿಸಿದ್ದಾರೆ.

ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜೀವನಕ್ಕಿಂತ ಗ್ರೇಡ್‌ಗಳು ಮುಖ್ಯವಾಗಿವೆ ಎಂದು ಆರೋಪಿಸಿ ನಿನ್ನೆ ಸಂಜೆ ಕ್ಯಾಂಪಸ್‌‍ನಲ್ಲಿ ಬಹತ್‌ ಪ್ರತಿಭಟನೆ ನಡೆಸಲಾಯಿತು. ಉತ್ತರ ಪ್ರದೇಶದ ವಿದ್ಯಾರ್ಥಿ ತನ್ನ ಹಾಸ್ಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ವರ್ಷ ಪ್ರತಿಷ್ಠಿತ ಸಂಸ್ಥೆಯಲ್ಲಿ ನಡೆದ ನಾಲ್ಕನೇ ಸಾವು ಇದಾಗಿದೆ. ಮತದೇಹ ಗಮನಕ್ಕೆ ಬಂದಾಗ ಆಡಳಿತ ಮಂಡಳಿಯವರು ಹಾಸ್ಟೆಲ್‌ ಕೊಠಡಿಯ ಬಾಗಿಲು ಒಡೆಯದಂತೆ ವಿದ್ಯಾರ್ಥಿಗಳನ್ನು ತಡೆದಿದ್ದಾರೆ ಎಂಬ ಆರೋಪ ಈಗ ಕೇಳಿ ಬರುತ್ತಿದೆ.

ಮತ ವಿದ್ಯಾರ್ಥಿಯ ಕುಟುಂಬಕ್ಕೆ ವಿಷಯ ತಿಳಿಸುವುದನ್ನು ತಡೆಯಲಾಗಿದೆ ಮತ್ತು ಆಡಳಿತವು ಅವರ ಫೋನ್‌ಗಳಿಂದ ವೀಡಿಯೊಗಳನ್ನು ಅಳಿಸಲು ಪ್ರಯತ್ನಿಸಿದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ನನ್ನ ಸ್ನೇಹಿತ ಫ್ಯಾನ್‌ಗೆ ನೇತಾಡುತ್ತಿರುವುದನ್ನು ನಾನು ವೆಂಟಿಲೇಟರ್‌ ಮೂಲಕ ನೋಡಿದೆ. ಕಾವಲುಗಾರರು ನಮನ್ನು ಬಾಗಿಲು ಮುರಿಯದಂತೆ ತಡೆದರು. ಅದನ್ನು ತೆರೆಯಲು ಸುಮಾರು 30 ನಿಮಿಷಗಳನ್ನು ತೆಗೆದುಕೊಂಡಿತು. ಅವನು ಬದುಕಿದ್ದಾನೋ ಇಲ್ಲವೋ ಎಂಬುದು ಅವರ ಕಾಳಜಿಯಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಆರೋಪಿಸಿದ್ದಾನೆ. ಬಾಗಿಲು ತೆರೆದ ನಂತರ, ಭದ್ರತಾ ಸಿಬ್ಬಂದಿ ನರ್ಸ್‌ಗೆ ಅವರ ನಾಡಿಮಿಡಿತವನ್ನು ಪರೀಕ್ಷಿಸಲು ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದರು.

ನಾವು ಅವನನ್ನು ಕಳೆದುಕೊಂಡೆವು, ಆದರೆ ಇಡೀ ರಾತ್ರಿ ಶವವನ್ನು ಕೆಳಗೆ ತರಲಿಲ್ಲ. ಬಾಗಿಲು ತೆರೆದ ಎಂಟು ಗಂಟೆಗಳ ನಂತರ ಅದನ್ನು ತೆಗೆಯಲಾಯಿತು ಎಂದು ಎನ್ನುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES

Latest News