Sunday, May 5, 2024
Homeರಾಷ್ಟ್ರೀಯBIG NEWS : 370ನೇ ವಿಧಿ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಸುಪ್ರೀಂ

BIG NEWS : 370ನೇ ವಿಧಿ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಸುಪ್ರೀಂ

ನವದೆಹಲಿ,ಡಿ.11- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮಾತ್ರವಲ್ಲ, ಮುಂಬರುವ ಸೆ. 2024 ರೊಳಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸುವಂತೆ ಇಂದು ಚುನಾವಣಾ ಆಯೋಗಕ್ಕೂ ನಿರ್ದೇಶನ ನೀಡಿದೆ.

ಕೇಂದ್ರದ ಒಪ್ಪಿಗೆಯೊಂದಿಗೆ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ರಾಷ್ಟ್ರಪತಿಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸಬಹುದಿತ್ತು ಮತ್ತು ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅರ್ಟಿಕಲ್ 370 ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿದಾರರ ಪ್ರಕರಣವನ್ನು ತಿರಸ್ಕರಿಸಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಾತ್ಕಾಲಿಕ ನಿಬಂಧನೆಯಾಗಿ 370 ನೇ ವಿಧಿಯನ್ನು ಎತ್ತಿಹಿಡಿದಿದೆ.

ಪ್ರಧಾನ ಪಾತ್ರದ ಅಡಿಯಲ್ಲಿ ಕೇಂದ್ರವು ರಾಜ್ಯ ಸರ್ಕಾರದ ಅಕಾರವನ್ನು ಚಲಾಯಿಸಬಹುದು ಎಂದು ಸಿಜೆಐ ಹೇಳಿದರು. ಸಂಸತ್ತು ಮತ್ತು ರಾಷ್ಟ್ರಪತಿಗಳ ಘೋಷಣೆಯ ಅಡಿಯಲ್ಲಿ ರಾಜ್ಯದ ಶಾಸಕಾಂಗ ಅಕಾರವನ್ನು ಚಲಾಯಿಸಬಹುದು ಎಂದು ಪೀಠ ಹೇಳಿದೆ.ಆರ್ಟಿಕಲ್ 356 ರ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ಚಲಾಯಿಸುವ ಅಕಾರಗಳ ಮೇಲೆ ನಿರ್ಬಂಧಗಳಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಆರ್ಟಿಕಲ್ 370 ಜಾರಿ ಅನುಷ್ಠಾನದ ನಾಲ್ಕು ವರ್ಷಗಳ ನಂತರ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಯನ್ನು ರದ್ದುಗೊಳಿಸುವುದನ್ನು ಪ್ರಶ್ನಿಸುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ 370 ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ರ ರದ್ದತಿಯನ್ನು ಪ್ರಶ್ನಿಸುವ ಹಲವಾರು ಅರ್ಜಿಗಳನ್ನು 2019 ರಲ್ಲಿ ಸಂವಿಧಾನ ಪೀಠಕ್ಕೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿದೆ.

1947 ರಲ್ಲಿ ಭಾರತದ ಒಕ್ಕೂಟಕ್ಕೆ ಸೇರಿದ ನಂತರ ಕಾಶ್ಮೀರ ಸ್ವತಂತ್ರ ಸಾರ್ವಭೌಮತ್ವವನ್ನು ಉಳಿಸಿಕೊಂಡಿಲ್ಲ ಎಂದು ಸಿಜೆಐ ಹೇಳಿದರು. ಕಾಶ್ಮೀರ ವಿಲೀನದೊಂದಿಗೆ ತನ್ನ ಸಂಪೂರ್ಣ ಸಾರ್ವಭೌಮತ್ವಕ್ಕೆ ಶರಣಾಯಿತು. ಸಂವಿಧಾನವು ಭಾರತದೊಂದಿಗಿನ ತನ್ನ ಸಂಬಂಧವನ್ನು ಮತ್ತಷ್ಟು ವ್ಯಾಖ್ಯಾನಿಸಲು ಮಾತ್ರ ಎಂದು ಅವರು ಹೇಳಿದರು. ಕಾಶ್ಮೀರ ಯಾವುದೇ ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ಅದರ ಸಂವಿಧಾನವು ಭಾರತದ ಸಂವಿಧಾನಕ್ಕೆ ಅೀನವಾಗಿತ್ತು.

ಲೋಕಸಭೆ ಚುನಾವಣೆಗೆ ಅಣ್ಣಾವ್ರ ಕುಟುಂಬದ ವರ್ಚಸ್ಸು ಬಳಕೆಗೆ ಡಿಕೆಶಿ ಗೇಮ್ ಪ್ಲಾನ್

ಆರ್ಟಿಕಲ್ 370 ರದ್ದತಿಗೆ ಮೊದಲು ಸಂವಿಧಾನ ಸಭೆಯ ಶಿಫಾರಸು ಅಗತ್ಯವಿಲ್ಲ ಎಂದು ಚಂದ್ರಚೂಡ್ ಹೇಳಿದರು. 370 ರ ಅಡಿಯಲ್ಲಿ ರದ್ದತಿಯ ಅಕಾರವು ಕಾಶ್ಮೀರದ ಏಕೀಕರಣಕ್ಕಾಗಿ. ಅಸಾಧಾರಣ ಸಂದರ್ಭಗಳಲ್ಲಿ ಹೊರತುಪಡಿಸಿ 370 ನೇ ವಿಯನ್ನು ರದ್ದುಗೊಳಿಸುವ ಅಧ್ಯಕ್ಷರ ನಿರ್ಧಾರದ ಮೇಲೆ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಕೇಂದ್ರದ ಒಪ್ಪಿಗೆಯೊಂದಿಗೆ ಅನ್ವಯಿಸಬಹುದು ಮತ್ತು ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದ್ದಾರೆ.

ಐವರು ನ್ಯಾಯಮೂರ್ತಿಗಳಾದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲï, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರು 16 ದಿನಗಳ ಕಾಲ ಅರ್ಜಿದಾರರು ಮತ್ತು ಕೇಂದ್ರದ ವಾದವನ್ನು ಆಲಿಸಿದ್ದರು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ರಂದು ಈ ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

RELATED ARTICLES

Latest News