Friday, November 22, 2024
Homeರಾಷ್ಟ್ರೀಯ | Nationalಮನೆಯಲ್ಲಿ ರಾಸಾಯನಿಕಗಳ ಪ್ರಯೋಗದ ವೇಳೆ ಸ್ಫೋಟ, ಬಾಲಕ ಸಾವು

ಮನೆಯಲ್ಲಿ ರಾಸಾಯನಿಕಗಳ ಪ್ರಯೋಗದ ವೇಳೆ ಸ್ಫೋಟ, ಬಾಲಕ ಸಾವು

ಚೆನ್ನೈ, ಮಾ.22 (ಪಿಟಿಐ) – ಮನೆಯಲ್ಲಿ ಕೆಲವು ರಾಸಾಯನಿಕಗಳ ಪ್ರಯೋಗ ನಡೆಸುತ್ತಿದ್ದಾಗ ಸಂಭವಿಸಿದ ಸ್ಪೋಟದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೊಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದೆ.ಸ್ಥಳೀಯ ಕಾಲೇಜಿನಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ತನ್ನಮನೆಯ ಕೊಠಡಿಯಲ್ಲಿ ಶೈಕ್ಷಣಿಕ ಕಾರ್ಯದಲ್ಲಿ ಈ ಪ್ರಯೋಗವನ್ನು ನಡೆಸಿದ್ದಾಗ ಈ ದುರಂತ ಸಂಭವಿಸಿದೆ.

ರಾಸಾಯನಿಕಗಳು ಸ್ಪೋಟಗೊಂಡಾಗ ಕೊಠಡಿಯ ಗೋಡೆ ಕುಸಿದಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ನಂತರ, ಮೃತರು ಬಳಸಿದ ರಾಸಾಯನಿಕ ಪದಾರ್ಥಗಳನ್ನು ತಜ್ಞರು ಪರೀಕ್ಷಿಸುತ್ತಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.

ರಾಸಾಯನಿಕ ಪದಾರ್ಥಗಳೊಂದಿಗೆ ತನ್ನ ನಿವಾಸದಲ್ಲಿ ನಿರ್ಲಕ್ಷ್ಯದ ರೀತಿಯಲ್ಲಿ ಕೆಲವು ಪ್ರಯೋಗಗಳನ್ನು ನಡೆಸಿದಂತೆ ತೋರುತ್ತಿದೆ, ಈ ಹಿನ್ನೆಲೆಯಲ್ಲಿ, ಅಸ್ವಾಭಾವಿಕ ಸಾವಿನ ಪ್ರಕರಣವನ್ನುದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ವಿಧಿವಿಜ್ಞಾನ ವಿಭಾಗದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ ಮತ್ತು ರಾಸಾಯನಿಕ ಪದಾರ್ಥಗಳನ್ನು ವಿಶ್ಲೇಷಿಸುತ್ತಿದ್ದಾರೆ. ಪ್ರಕರಣವು ತನಿಖೆ ನಂತರ ಹೆಚ್ಚನ ಮಾಹಿತಿ ಸಿಗಲಿದೆ.

RELATED ARTICLES

Latest News