ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ “ಸೀಸನ್ ಆಫ್ ಸ್ಮೈಲ್ಸ್” 11 ನೇ ಆವೃತ್ತಿಯು ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭಗೊಂಡಿದೆ.ಡಿಸೆಂಬರ್‌ಹಾಗೂ ಜನವರಿ ತಿಂಗಳಲ್ಲಿ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ಸೀಸನ್ ಆಫ್ ಸ್ಮೈಲ್ಸ್ ಸೀಸನ್‌ನಲ್ಲಿ ಅನೇಕ ಮನರಂಜನಾ ಚಟುವಟಿಕೆಗಳು, ಅತ್ಯಾಕರ್ಷಕ ಕೊಡುಗೆಗಳು, ಅನೇಕ ಬಹುಮಾನಗಳು ಸೇರಿದಂತೆ ನಿಮ್ಮನ್ನು ರೋಮಾಂಚನಗೊಳಿಸುವ ಹಲವು ಚಟುವಟಿಕೆಗಳು ನಡೆಯಲಿದೆ.
ಈ ನಿಮಿತ್ತ ಬಣ್ಣಬಣ್ಣದ ಲೈಟಿಂಗ್‌ನಿಂದ ಹಿಡಿದು ಬೃಹತ್‌ಕ್ರಿಸ್‌ಮಸ್‌ಟ್ರೀವರೆಗೆ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ರಜಾದಿನಗಳಲ್ಲಿ ವೈವಿಧ್ಯಮಯ ಖರೀದಿಗೆ ವೇದಿಕೆ ಕಲ್ಪಿಸಲಾಗಿದೆ. ಕ್ರಿಸ್‌ಮಸ್‌ಉಡುಗೊರೆಗಳ ಖರೀದಿಗಾಗಿ ಅನೇಕ ರೀತಿಯ ಉಡುಗೊರೆ ವಸ್ತುಗಳ ಮೇಲೆ ರಿಯಾಯಿತಿ ದೊರೆಯಲಿದೆ.
ಆನಂದ್ ಸ್ವೀಟ್ಸ್, ಮಿಥಾಸ್, ಕೊಕೊಕಾರ್ಟ್, ಫಾರೆಸ್ಟ್ ಎಸೆನ್ಷಿಯಲ್ಸ್, ಮಿನಿಸೊ, ರಿಲೇ ಮತ್ತು ಬಾನ್ ವಾಯೇಜ್‌ನಂತಹ ಉನ್ನತ ಬ್ರಾಂಡ್‌ಗಳವರೆಗೆ ಒಳಗೊಂಡ1,499 ರೂ.ನಿಂದ ಪ್ರಾರಂಭವಾಗುವ ಗಿಫ್ಟ್ ಹ್ಯಾಂಪರ್‌ಗಳ ಸಾಕಷ್ಟು ಕೊಡುಗೆಗಳು ನಿಮ್ಮನ್ನು ಆಕರ್ಷಿಸಲಿವೆ. ಇಲ್ಲಿನ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಶೇ.50ರಷ್ಟು ವಿಶೇಷ ರಿಯಾಯಿತಿಯನ್ನು ಸಹ ನೀವು ಆನಂದಿಸಬಹುದಾಗಿದೆ. ಈ ರಜಾದಿನಗಳಲ್ಲಿ ಶಾಪಿಂಗ್ ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೂಕ್ತ ಸ್ಥಳವಾಗಿ ಹೊರಹೊಮ್ಮಿದೆ.
ಇನ್ನು, ಈ ವರ್ಷದ ಸಂಭ್ರಮಾಚರಣೆಯ ಮತ್ತೊಂದು ಆಕರ್ಷಣೆಯೆಂದರೆ, ಖ್ಯಾತ ನೃತ್ಯ ಸಂಯೋಜಕ ಪ್ರಸಾದ್ ಬಿಡಪಾ ಅವರ “ರನ್‌ವೇ ರಿಟೇಲ್ ಫ್ಯಾಷನ್ ಶೋ. ಈ ಶೋ, ವಿಮಾನ ನಿಲ್ದಾಣದಲ್ಲಿ ಲಭ್ಯವಾಗುವ ಬ್ರಾಂಡ್‌ಗಳನ್ನು ಪ್ರದರ್ಶಿಸಲಿದ್ದು, ರನ್‌ವೇಯಲ್ಲೂ ಅನಾವರಣವಾಗಲಿದೆ. ವಿಮಾನ ನಿಲ್ದಾಣದಲ್ಲಿ ನೂತನ ಫ್ಯಾಶನ್‌ನ ಅನುಭವ ಪಡೆಯಲು ಹಾಗೂ ಅನಾವರಣಗೊಳಿಸಲು ಇದೊಂದು ಸದಾವಕಾಶವಾಗಿದೆ.
ಕ್ರಿಸ್‌ಮಸ್‌ರಜೆಯನ್ನು ಇನ್ನಷ್ಟು ಅವಿಸ್ಮರಣೀಯಗೊಳಿಸಲು ವಿಮಾನ ನಿಲ್ಸಾಣದಲ್ಲಿ “ಫ್ಲೀ ಮಾರುಕಟ್ಟೆ”ಯನ್ನು ತೆರೆಯಲಾಗಿದೆ. ಕ್ರಿಸ್‌ಮಸ್‌ಗೆ ಸಂಬಂಧಿಸಿದ ನಿಮಗೆ ಬೇಕಾದ ಎಲ್ಲಾ ಬಗೆಯ ವಸ್ತುಗಳು ಈ ಫ್ಲೀ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಲಭ್ಯವಿದ್ದು, ಪ್ರಯಾಣಿಕರಿಗೆ ಸ್ನೇಹಮಯ ವಾತಾವರಣ ನಿರ್ಮಿಸಲಾಗಿದೆ. ಇದಷ್ಟೇ ಅಲ್ಲದೆ,
ಏರ್‌ಪೋರ್ಟ್ ಸಿನಿಮಾ ಕ್ಲಬ್ ಕ್ವಾಡ್ ಅನ್ನು ಸ್ಟಾರ್‌ಲಿಟ್ ಥಿಯೇಟರ್ ಆಗಿ ಮಾರ್ಪಡಿಸಲಾಗಿದ್ದು, ‘ಕ್ಲಾಸಿಕ್ ಹೋಮ್ ಅಲೋನ್’ನೊಂದಿಗೆ ಮೊದಲ ಪ್ರದರ್ಶನ ಏರ್ಪಾಟುಗೊಳಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಚಿಲ್ಲರೆ ಮಾರಾಟಗಾರರು ಅಂಗಡಿಗಳಿಗೆ ವಿಶೇಷವಾದ ಅಲಂಕಾರಗಳನ್ನು ಮಾಡಿದ್ದಾರೆ. ಇದರ ಜೊತೆಗೆ, “ರೀಟೇಲ್‌ಎಂಪ್ಲಾಯೀಸ್‌ಡೇ (ಚಿಲ್ಲರೆ ವ್ಯಾಪಾರ ನೌಕರರ ದಿನ)” ಆಚರಣೆಯ ಭಾಗವಾಗಿ ಹಲವು ಪ್ರದರ್ಶನ ಆಯೋಜಿಸಲಾಗಿದೆ. ಅಷ್ಟೆ ಅಲ್ಲದೆ, ಡಿಜೆ ಸಂಗೀತ ಮತ್ತು ಅಲ್ಲಿಯೇ ಕೆಲಸ ಮಾಡುವ ಸಿಬ್ಬಂದಿಗಳನ್ನು ಗೌರವಿಸುವ ಕಾರ್ಯಕ್ರಮಗಳು ಸಹ ಜರುಗಲಿವೆ.
ಡಿಸೆಂಬರ್‌ಹಾಗೂ ಜನವರಿ ತಿಂಗಳಾದ್ಯಂತ ಹಲವು ರೀತಿಯ ಸಂಗೀತ ಕಾರ್ಯಕ್ರಮಗಳು ಜರುಗುತ್ತಲೇ ಇರಲಿವೆ.
ಸೆಹರ್‌ನ ಹೈ-ಎನರ್ಜಿ ರಾಕ್, ಬಾಲಿವುಡ್ ಸಮ್ಮಿಲನದಿಂದ ದಿ ಸೋಫಿಯಾ ಕೋರಲ್‌ನ ಸಾಮರಸ್ಯದ ಮಧುರ ಗೀತೆಗಳು, ಜೊತೆಗೆ, ಸ್ಟ್ರೇಂಜರ್ಸ್ ಮತ್ತು 13AD, ಜಾಝ್ ಮತ್ತು ರಾಕ್ ಪ್ರದರ್ಶನಗಳು ಸಂಗೀತ ಪ್ರೇಮಿಗಳನ್ನು ಮೋಡಿ ಮಾಡುತ್ತವೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2 ನಾದ್ಯಂತ ಪ್ರತಿಯೊಬ್ಬರೂ ಆನಂದಿಸಬಹುದಾದ ಸಂಗೀತವನ್ನು ಪ್ರಸ್ತುತಪಡಿಸಲಾಗುತ್ತಿದೆ.
2025 ಹೊಸ ವರ್ಷವನ್ನು ಉತ್ಸಾಹಕದಾಯವಾಗಿ ಬರಮಾಡಿಕೊಳ್ಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಚರಿಸಲು ಡೈನಾಮಿಕ್ ಇಂಡೋ ಆಫ್ರೋ ಬ್ಯಾಂಡ್ ಝೇನ್, ಜೋಶುವಾ ಮತ್ತು ತಾಲಸಮುದ್ರದ ಎಲೆಕ್ಟ್ರಿಫೈಯಿಂಗ್ ಸೆಟ್‌ಗಳ ಡಿಜೆ ಸಂಗೀತದ ವ್ಯವಸ್ಥೆ ಮಾಡಲಾಗಿದೆ. ದಿ ಸೀಸನ್ ಆಫ್ ಸ್ಮೈಲ್ಸ್ ನ ಮತ್ತೊಂದು ಆಕರ್ಷಣೆ ಎಂದರೆ ಲಕ್ಕಿ ಡ್ರಾ. ಇಲ್ಲಿ ಆಯೋಜಿಸಿರುವ ಲಕ್ಕಿ ಡ್ರಾನಲ್ಲಿ ಪ್ರಯಾಣಿಕರು ಪಾಲ್ಗೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಬಹುದಾಗಿದೆ. ಭಾಗವಹಿಸುವ ಅದೃಷ್ಟಶಾಲಿಗಳು ಲೇಟೆಸ್ಟ್‌ಐಫೋನ್, ಸೆಂಚುರಿ ರಿಯಲ್‌ಎಸ್ಟೇಟ್‌ಅವರಿಂದ 65 ಲಕ್ಷ ರೂ. ಮೌಲ್ಯದ ಸೈಟ್‌ಸೇರಿದಂತೆ ಇನ್ನೂ ಅನೇಕ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲಬಹುದು.
ಇನ್ನು, ಆಹಾರ ಪ್ರಿಯರಿಗಾಗಿ ಡಿಸೆಂಬರ್ 20 ರಿಂದ 30 ರವರೆಗೆ ಆಯ್ದ ಎಫ್&ಬಿ ಔಟ್‌ಲೆಟ್‌ಗಳಲ್ಲಿ ತಿಂಡಿ ತಿನಿಸುಗಳ ಭಾರಿ ಮೆನು ಲಭ್ಯವಿರಲಿದೆ.
ನಿಮ್ಮ ಈ ಸೀಸನ್ ಆಫ್ ಸ್ಮೈಲ್ಸ್ ಅನುಭವವನ್ನು ಪಡೆಯಲು, ‘BLR ಪಲ್ಸ್’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಈ ಆಲ್-ಇನ್-ಒನ್ ಅಪ್ಲಿಕೇಶನ್ ನಿಮಗೆ ರಿವಾರ್ಡ್ ಪಾಯಿಂಟ್, ವಿಶೇಷ ಕೊಡುಗೆಗಳು, ಲಕ್ಕಿ ಡ್ರಾಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹ್ಯಾಂಪರ್‌ಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಸಹಾಯ ಮಾಡಲಿದೆ.
ನೀವು ಆಗಾಗ ವಿಮಾನ ಪ್ರಯಾಣ ಮಾಡುವವರಾಗಿರಲಿ ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭೇಟಿ ನೀಡುವವರಾಗಿರಲಿ, ಬೆಂಗಳೂರು ವಿಮಾನ ನಿಲ್ದಾಣದ ಈ ಸ್ಮೈಲ್ಸ್ ಸೀಸನ್ ಅಚ್ಚುಮೆಚ್ಚಿನ ರಜಾ ತಾಣವಾಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಲೇ ನೋಂದಾಯಿಸಿ Kempegowda International Airport Bengaluru | Bangalore Airport | BLR Airport