Friday, September 20, 2024
Homeರಾಷ್ಟ್ರೀಯ | Nationalಆಟೋ ಕಾಂಪೋನೆಂಟ್‌ ಕ್ಷೇತ್ರದಲ್ಲಿ ಸ್ವಾವಲಂಬನೆ ಬೆಳವಣಿಗೆ ಶ್ಲಾಘನೀಯ : ಕೇಂದ್ರ ಸಚಿವ ಹೆಚ್ಡಿಕೆ

ಆಟೋ ಕಾಂಪೋನೆಂಟ್‌ ಕ್ಷೇತ್ರದಲ್ಲಿ ಸ್ವಾವಲಂಬನೆ ಬೆಳವಣಿಗೆ ಶ್ಲಾಘನೀಯ : ಕೇಂದ್ರ ಸಚಿವ ಹೆಚ್ಡಿಕೆ

Self reliance growth in Auto Component sector is commendable: Union Minister HDK

ನವದೆಹಲಿ,ಸೆ.9- ಆತ್ಮನಿರ್ಭರ್‌ ಭಾರತ ಅಭಿಯಾನದ ಮೂಲಕ ಆಟೋ ಕಾಂಪೋನೆಂಟ್‌ ಕ್ಷೇತ್ರದಲ್ಲಿ ಸ್ವಾವಲಂಬಿಯ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಹೆಚ್‌ ಡಿ. ಕುಮಾರಸ್ವಾಮಿ ಹೇಳಿದರು.

ವಿಕಸಿತ್‌ ಭಾರತ್‌ ಚಲನಶೀಲ ಘಟಕಗಳಲ್ಲಿ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತಕತೆಯನ್ನು ಪೋಷಿಸುವುದು ಎಂಬ ಶಿರ್ಷಿಕೆಯುಳ್ಳ 64ನೇ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು, ಇದು ಈಗ ಭಾರತದ ಶೇ.2.7ರಷ್ಟು ಜಿಡಿಪಿ ಮತ್ತು 5 ಮಿಲಿಯನ್‌ ಉದ್ಯೋಗಗಳನ್ನು ಒದಗಿಸುತ್ತವೆ. ಈ ಕ್ಷೇತ್ರವು ಈ ವರ್ಷ 300 ದಶಲಕ್ಷ ಡಾಲರ್‌ ವಾಣಿಜ್ಯ ಲಾಭ ಸಾಧಿಸಿದೆ ಎಂದು ಪ್ರಶಂಸಿಸಿದರು.

ಆಟೋ ಕ್ಷೇತ್ರದ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್‌ ಯೋಜನೆಯ ಯಶಸ್ಸನ್ನು, 74,850 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಮೂಲಕ ವಾಹನ ವಲಯಕ್ಕೆ 30,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದರು.

ಸುಧಾರಿತ ಬ್ಯಾಟರಿ ಕೋಶಗಳಿಗಾಗಿ ತಂತ್ರಜ್ಞಾನ ಶ್ರೇಣಿಯ ಮಾದರಿಯ ಬಿಎಲ್‌ಐ ಯೋಜನೆಯ ಕುರಿತು ವಿವರಣೆ ನೀಡಿದ ಅವರು, ಮತ್ತು ಫೇಮ್‌-2 ಯೋಜನೆಯು ಮತ್ತು ಇತ್ತೀಚೆಗೆ ಪ್ರಾರಂಭಿತ ವಿದ್ಯುತ್‌ ವಾಹನ ಇಲೆಕ್ಟ್ರಿಕ್‌ ಮೊಬಿಲಿಟಿ ಪ್ರೋಮೋಷನ್‌ ಸ್ಕೀಮ್‌ (ಇಒ) ಯು ಇಲೆಕ್ಟ್ರಿಕ್‌ ವಾಹನದ ಅಂಗೀಕಾರವನ್ನು ಉತ್ತೇಜಿಸುತ್ತವೆ ಎಂದು ಪ್ರಶಂಸಿಸಿದರು.ಇದಲ್ಲದೆ, ವರ್ಧಿತ ನಾವೀನ್ಯತೆ ಮತ್ತು ಸಹಯೋಗದ ಮೂಲಕ ಆತನಿರ್ಭರ್‌ ಭಾರತದ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

ಫೇಮ್‌-3 ಯೋಜನೆಯು ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ ಅದರ ಚೌಕಟ್ಟಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫೇಮ್‌-2ನಲ್ಲಿ ಗುರುತಿಸಲಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಇಎಂಪಿಎಸ್‌‍ ಯೋಜನೆಯನ್ನು ಎರಡು ತಿಂಗಳವರೆಗೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸಿಎಂಎ ಅಧ್ಯಕ್ಷೆ ಶ್ರದ್ಧಾ ಸೂರಿ ಮರ್ವಾಹ್‌, ಎಸ್‌‍ಐಎಎಂ ಅಧ್ಯಕ್ಷ ವಿನೋದ ಅಗರ್ವಾಲ್‌, ಸಿಐಐ ಅಧ್ಯಕ್ಷ ಮತ್ತು ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಪೂರಿ, ಮಾರುತಿ ಸುಜುಕಿ ಇಂಡಿಯಾ ಎಂಡಿ ಮತ್ತು ಸಿಇಒ ಹಿಸಾಶಿ ತಕೇಚಿ ಮತ್ತು ಎಸ್‌‍ಸಿಎಎಲ್‌ಇ ಅಧ್ಯಕ್ಷ ಡಾ. ಪವನ್‌ ಗೋಯಂಕ್‌ ಸೇರಿದಂತೆ ಪ್ರಮುಖ ಉದ್ಯಮದ ಗಣ್ಯರು ಹಾಜರಾಗಿದ್ದರು.

RELATED ARTICLES

Latest News