Wednesday, October 16, 2024
Homeಮನರಂಜನೆ15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ ಕಾಲಿವುಡ್‌ನ ಸ್ಟಾರ್‌ ನಟ

15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ ಕಾಲಿವುಡ್‌ನ ಸ್ಟಾರ್‌ ನಟ

Tamil Actor Jayam Ravi announces separation with wife Aarti

ಚೆನ್ನೈ, ಸೆ. 9- ಕಳೆದ ಕೆಲವು ತಿಂಗಳಿನಿಂದ ಕಾಲಿವುಡ್‌ನ ಸ್ಟಾರ್‌ ನಟ ಜಯಂರವಿ ಅವರು ವಿಚ್ಛೇದನ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಂದು ನಟ ತಮ ಪತ್ನಿ ಆರತಿಗೆ ವಿಚ್ಛೇದನ ನೀಡುವ ಮೂಲಕ 15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ.ಇಂದು ತಮ ಎಕ್‌್ಸ ಖಾತೆಯಲ್ಲಿ ತಮಿಳು ಹಾಗೂ ಇಂಗ್ಲೀಷ್‌ ಸಂದೇಶದ ಮೂಲಕ ಜಯಂರವಿ ತಮ ನಿರ್ಧಾರವನ್ನು ಪ್ರಕಟಿಸಿದ್ದು, `ನನ್ನ ಪತ್ನಿ ಆರತಿಗೆ ವಿಚ್ಛೇದನ ನೀಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಜಯಂ ರವಿ ಅವರು ಈಗ ಸಂಕಷ್ಟದ ಜೀವನ ಎದುರಿಸುತ್ತಿದ್ದು, ಅಲ್ಲದೆ ಏಕಾಂಗಿ ಜೀವನ ನಡೆಸಲು ನಿರ್ಧರಿಸಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಆರತಿ ಅವರು ತಮ ಇನ್ಸಾಟಾಗ್ರಾಮ್‌ನಲ್ಲಿ ಜಯಂ ರವಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತ್ತು.

ಪತ್ನಿಗೆ ಧನ್ಯವಾದ ತಿಳಿಸಿದ ಜಯಂರವಿ:
ಇಷ್ಟು ವರ್ಷಗಳ ಕಾಲ ನೀನು ತೋರಿದ ಪ್ರೀತಿ ಹಾಗೂ ಸಹಕಾರಕ್ಕೆ ನನ್ನ ತುಂಬು ಹೃದಯದ ಕೃತಜ್ಞತೆಗಳು' ಎಂದು ನಟ ತಮ ಎಕ್‌್ಸ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ನಾನು ಭಾರವಾದ ಹೃದಯ ದಿಂದ ನಿಮಗೆ (ಅಭಿಮಾನಿಗಳಿಗೆ) ನನ್ನ ವೈಯಕ್ತಿಕ ಜೀವನದ ಒಂದು ಕಠಿಣ ವಿಷಯವನ್ನು ತಿಳಿಸಲು ಬಯಸು ತ್ತಿದ್ದೇನೆ’ ಎಂದು ಬರೆದಿದ್ದಾರೆ.

`ಬಹಳ ಚಿಂತನೆ ಹಾಗೂ ಚರ್ಚೆಗಳ ನಂತರ ನಾನು ನನ್ನ ಪತ್ನಿ ಆರತಿಗೆ ವಿವಾಹ ವಿಚ್ಛೇದನ ನೀಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ನಿರ್ಧಾರ ಆತುರದಿಂದ ಮಾಡಿರುವುದಲ್ಲ, ಬದಲಿಗೆ ನಮೆಲ್ಲರ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಧಾ ವಾಗಿದೆ’ ಎಂದು ಜಯಂರವಿ ಹೇಳಿದ್ದಾರೆ.

2009ರಲ್ಲಿ ಜಯಂ ರವಿ ಹಾಗೂ ಆರತಿ ಅವರ ವಿವಾಹವಾಗಿದ್ದು, ಇವರಿಗೆ ಆರವ್‌ ಮತ್ತು ಆಯಾನ್‌ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ರವಿ, ಜಯಂ ತಮಿಳು ಚಿತ್ರದ ನಂತರ ಜಯಂ ರವಿ ಎಂದೇ ಹೆಸರಾದರು. ದೀಪಾವಳಿ, ಧಾಮ್‌ಧೂಮ್‌, ಪೊನ್ನಿಯನ್‌ ಸೆಲ್ವಂ-2 ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂ ರವಿ ನಟಿಸಿದ್ದಾರೆ.

RELATED ARTICLES

Latest News