Sunday, June 1, 2025
Homeಬೆಂಗಳೂರುಆಫ್ರಿಕಾದ ಸೆನಗಲ್‌ ದೇಶದ ಪ್ರಜೆ ಬಂಧನ, 3 ಕೋಟಿ ಮೌಲ್ಯದ ಮಾದಕ ವಶ

ಆಫ್ರಿಕಾದ ಸೆನಗಲ್‌ ದೇಶದ ಪ್ರಜೆ ಬಂಧನ, 3 ಕೋಟಿ ಮೌಲ್ಯದ ಮಾದಕ ವಶ

Senegalese national arrested, drugs worth Rs 3 crore seized

ಬೆಂಗಳೂರು, ಮೇ 28- ಬಟ್ಟೆ ವ್ಯಾಪಾರದ ನೆಪದಲ್ಲಿ ಶಾಲೆಯೊಂದರ ಹಿಂಭಾಗದ ಖಾಲಿ ಜಾಗದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಫ್ರಿಕಾದ ಸೆನಗಲ್‌ ಪ್ರಜೆಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 3 ಕೋಟಿ ರೂ. ಮೌಲ್ಯದ 3ಕೆಜಿ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಂಡಿದ್ದಾರೆ.

ಉದ್ಯೋಗ ವಿಸಾ ಪಡೆದು 2023 ರಲ್ಲಿ ಕೆಲಸ ಹುಡಿಕಿಕೊಂಡು ಬೆಂಗಳೂರಿಗೆ ಬಂದಿದ್ದ ವಿದೇಶಿ ಪ್ರಜೆ ಬಂಧಿತ ಆರೋಪಿ. ದಾಸರಹಳ್ಳಿಯ ನಾರ್ಥ್‌ಹಿಲ್ಸ್ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ವಿದೇಶಿ ಪ್ರಜೆ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಯುವಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಈ ಮಾಹಿತಿ ಆಧರಿಸಿ ಠಾಣೆಯಲ್ಲಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸ್ಥಳಕ್ಕೆ ಧಾವಿಸಿ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುಧಿರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ,ಕೆಲಸ ಹುಡುಕಿಕೊಂಡು ವಿದೇಶದಿಂದ 2023 ರಲ್ಲಿ ಭಾರತಕ್ಕೆ ಬಂದು ವಿಸಾ ಅವ ಮುಗಿದಿದ್ದರೂ ನಗರದಲ್ಲಿ ನೆಲೆಸಿದ್ದನು. ನಂತರದ ದಿನಗಳಲ್ಲಿ ಬಾಣಸವಾಡಿಯ ಕಮನಹಳ್ಳಿಯಲ್ಲಿರುವ ಮತ್ತೊಬ್ಬ ವಿದೇಶಿ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್‌ನ್ನು ಖರೀದಿಸಿ, ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್‌ ಅಂಬರೀಶ್‌ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು.

RELATED ARTICLES

Latest News