Monday, December 2, 2024
Homeಬೆಂಗಳೂರುಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಚಿ.ದತ್ತರಾಜ್ ನಿಧನ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಚಿ.ದತ್ತರಾಜ್ ನಿಧನ

Senior director of Sandalwood Ch. Dattaraj passed away

ಬೆಂಗಳೂರು, ಅ. 14- ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಹಾಗೂ ಖ್ಯಾತ ಸಾಹಿತಿ ಚಿ.ಉದಯ್‌ಶಂಕರ್ ಅವರ ಸಹೋದರ ಚಿ.ದತ್ತರಾಜ್ (87) ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ.ಚಿ.ಉದಯ್‌ ಶಂಕರ್‌ರಂತೆ ಅವರ ಸಹೋದರ ಚಿ.ದತ್ತರಾಜ್ ಅವರು ಕೂಡ ಡಾ.ರಾಜ್‌ಕುಮಾರ್ ಕುಟುಂಬದೊಂದಿಗೆ ಗುರುತಿಸಿಕೊಂಡಿದ್ದ ಅವರು, ಡಾ.ರಾಜ್ ನಟಿಸಿದ್ದ ಹಲವು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಚಂದನವನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.

ಡಾ.ರಾಜ್‌ಕುಮಾರ್ ಅವರು ನಟಿಸಿದ್ದ ಮಹೋನ್ನತ ಸಿನಿಮಾಗಳಾದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜ್‌ಕುಮಾರ್ ನಟನೆಯ ಅರಳಿದ ಹೂವುಗಳು, ಮೃತ್ಯುಂಜಯ ಹಾಗೂ ಆನಂದಜ್ಯೋತಿ, ಮಂಜುಳಾ ಮತ್ತು ಜೈಜಗದೀಶ್ ಅಭಿನಯದ ರುದ್ರಿ ಸಿನಿಮಾಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು.

ಹಿರಿಯ ನಿರ್ದೇಶಕ ಚಿ.ದತ್ತರಾಜ್ ಅವರ ನಿಧನಕ್ಕೆ ನಟರಾದ ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಚಿ.ಗುರುದತ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದು, ದತ್ತರಾಜ್ ಅವರ ಅಂತ್ಯಕ್ರಿಯೆಯನ್ನು ಹರಿಶ್ಚಂದ್ರಘಾಟ್‌ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES

Latest News