Sunday, October 6, 2024
Homeಕ್ರೀಡಾ ಸುದ್ದಿ | Sportsಕೊಹ್ಲಿ, ರೋಹಿತ್‌ ಪರಂಪರೆ ಮುಂದುವರಿಸುತ್ತೇವೆ : ರವಿ ಬಿಸ್ನೋಯ್

ಕೊಹ್ಲಿ, ರೋಹಿತ್‌ ಪರಂಪರೆ ಮುಂದುವರಿಸುತ್ತೇವೆ : ರವಿ ಬಿಸ್ನೋಯ್

ಹರಾರೆ, ಜು. 7- ಆಧುನಿಕ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ, ರೋಹಿತ್‌ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಭಾರತ ತಂಡದ ಯುವ ಸ್ಪಿನ್ನರ್‌ ರವಿಬಿಸ್ನೋಯ್‌ ತಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ನಡೆದ ಐದು ಪಂದ್ಯಗಳ ಚುಟುಕು ಸರಣಿಯ ಮೊದಲ ಪಂದ್ಯದ ನಂತರ ಮಾತನಾಡಿದ ಅವರು, ಭಾರತ ತಂಡದಲ್ಲಿರುವ ಯುವ ಆಟಗಾರರು ಮೂವರು ದಿಗ್ಗಜರ ಹಾದಿಯಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸುತ್ತಾರೆ ಎಂದು ಬಿಸ್ನೋಯ್‌ ಹೇಳಿದ್ದಾರೆ.

ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಸಂಯೋಜನೆ ತೋರಿದ ರವಿಬಿಸ್ನೋಯ್‌ ತಮ 4 ಓವರ್‌ಗಳ ಖೋಟಾದಲ್ಲಿ13 ರನ್‌ ನೀಡಿ 4 ವಿಕೆಟ್‌ ಪಡೆಯುವ ಮೂಲಕ ಜಿಂಬಾಬ್ವೆ ತಂಡವನ್ನು 115 ರನ್‌ಗಳಿಗೆ ನಿಯಂತ್ರಿಸಲು ಬಲ ತುಂಬಿದರು. ಈ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಬ್ಯಾಟರ್ಸ್‌ಗಳ ವೈಫಲ್ಯದ ನಡುವೆ 19.5 ಓವರ್‌ಗಳಲ್ಲಿ 102 ರನ್‌ಗಳಿಗೆ ಅಲ್‌ಔಟ್‌ ಆಗುವ ಮೂಲಕ 13 ರನ್‌ಗಳ ಸೋಲು ಕಂಡಿತು.

ಜೊತೆಯಾಟದ ಕೊರತೆ:
`ನಾವು ಹಲವು ಜೊತೆಯಾಟ ಗಳನ್ನು ಕಳೆದುಕೊಂಡೆವು. ಅದು ತಂಡದ ಸೋಲಿನಲ್ಲಿ ಸಾಕಷ್ಟು ಪರಿಣಾಮ ಬೀರಿದವು. ನಾವು ಒಂದು ವೇಳೆ ಯಾವುದೇ ವಿಕೆಟ್‌ನಿಂದ 20 ರಿಂದ 30 ರನ್‌ಗಳ ಜೊತೆಯಾಟ ಕಂಡಿದ್ದರೆ ಆಗ ಪಂದ್ಯದ ಪರಿಸ್ಥಿತಿಯೇ ಬೇರೆ ಆಗಿರುತ್ತಿತ್ತು’ ಎಂದು ಟೀಮ್‌ ಇಂಡಿಯಾದ ಯುವ ಸ್ಪಿನ್ನರ್‌ ಹೇಳಿದ್ದಾರೆ.

`ನಮ ಹಿರಿಯ ಆಟಗಾರರು ನಮಗೆ ಜವಾಬ್ದಾರಿ ನೀಡಿದ್ದಾರೆ. ತಂಡವನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ಯುವುದು ನಮ ಜವಾಬ್ದಾರಿಯಾಗಿದೆ. ನಾವು ನಮ ಉತ್ತಮ ಪ್ರದರ್ಶನವನ್ನು ಹೊರತರಲು ಪ್ರಯತ್ನಿಸುತ್ತೇವೆ’ ಎಂದು ರವಿಬಿಸ್ನೋಯ್‌ ಹೇಳಿದ್ದಾರೆ.

ಬ್ಯಾಟಿಂಗ್‌ನಲ್ಲಿ ಎಡವಿದ್ದೇವೆ:
` ಪಂದ್ಯದಲ್ಲಿ ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನವನ್ನು ತೋರಿದ್ದರು. ಆದರೆ ನಾವು ಬ್ಯಾಟಿಂಗ್ ಮಾಡುವಾಗ ಸ್ವಲ್ಪ ಎಡವಿದ್ದೇವೆ. ಪಂದ್ಯದ ಅರ್ಧ ದಾರಿಯಲ್ಲೇ ನಾವು 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೆವು ಒಂದು ವೇಳೆ ನಾವು ಪಂದ್ಯದ ಅಂತಿಮವರೆಗೂ ಕ್ರೀಸ್ನಲ್ಲಿ ಉಳಿದುಕೊಂಡಿದ್ದರೆ, ಗೆಲ್ಲುವ ಸಾಧ್ಯತೆ ಇತ್ತು. ಆದರೆ 115 ಅಲ್ಪ ಮೊತ್ತ ಬೆನ್ನಟ್ಟಿದಾಗ ತಂಡದ ಎಲ್ಲ 10 ಬ್ಯಾಟರ್ಗಳು ಔಟಾದರೆ ನಮ್ಮಿಂದ ಏನೋ ತಪ್ಪಾಗಿದೆ ಎಂದೆನಿಸುತ್ತದೆ’ ಎಂದು ನಾಯಕ ಶುಭಮನ್ ಗಿಲ್ ಹೇಳಿದ್ದಾರೆ.

RELATED ARTICLES

Latest News