Sunday, July 21, 2024
Homeಕ್ರೀಡಾ ಸುದ್ದಿಸಲ್ಲು ಜೊತೆ 43ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

ಸಲ್ಲು ಜೊತೆ 43ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

ನವದೆಹಲಿ ಜು. 7- ಬಾಲಿವುಡ್‌ಸ್ಟಾರ್‌ ನಟ ಸಲಾನ್‌ಖಾನ್‌ ಅವರು ಖ್ಯಾತ ಕ್ರಿಕೆಟಿಗ ಹಾಗೂ ತಮ ಸ್ನೇಹಿತ ಮಹೇಂದ್ರ ಸಿಂಗ್‌ ಧೋನಿ ಅವರ 43ನೇ ಹುಟ್ಟುಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ತಮ ಸಾಮಾಜಿಕ ಜಾಲತಾಣದೊಂದಿಗೆ ಹಂಚಿಕೊಂಡಿದ್ದಾರೆ.

ಕಳೆದ ತಡರಾತ್ರಿ ಮಹೇಂದ್ರ ಸಿಂಗ್‌ ಧೋನಿ ಅವರ ನಿವಾಸಕ್ಕೆ ತೆರಳಿದ ಸಲಾನ್‌ಖಾನ್‌ ಅವರು ತಾವು ತಂದಿದ್ದ ವಿಶೇಷ ಕೇಕ್‌ ಅನ್ನು ಎಂಎಸ್‌‍ಡಿಯಿಂದ ಕತ್ತರಿಸುವ ಮೂಲಕ ಜನದಿನವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಧೋನಿ ಪತ್ನಿ ಸಾಕ್ಷಿ ಕೂಡ ಹಾಜರಿದ್ದರು.
ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು ಕೇಕ್‌ ಮಾಡುತ್ತಿರುವ ದೃಶ್ಯವನ್ನು ಸಲ್ಲು ಮಿಯಾ ತಮ ಇನ್ಸಾಟಾಗ್ರಾಮ್‌ ಪೋಸ್ಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಅದಕ್ಕೆ `ಹ್ಯಾಪಿ ಬರ್ತ್‌ಡೇ ಕ್ಯಾಪ್ಟನ್‌ ಸಾಹೇಬ್‌ ಮಹಿ 7781′ ಎಂದು ಬರೆಯುವ ಮೂಲಕ ತಮ ಸಂತಸ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಸಮಾರಂಭದಲ್ಲಿ ಸಲಾನ್‌ಖಾನ್‌ , ಮಹೇಂದ್ರ ಸಿಂಗ್‌ಧೋನಿ ಸೇರಿದಂತೆ ಹಲವಾರು ಬಾಲಿವುಡ್‌ ನಟರು ಹಾಗೂ ಕ್ರಿಕೆಟ್‌ ಕಲಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಲ್ಲು ಮಿಯಾ ಹಾಗೂ ಎಂಎಸ್‌‍ಡಿ ನಡುವಿನ ಬಾಂಧವ್ಯ ಹೆಚ್ಚಾಗಿತ್ತು. ಈಗ ಸಲಾನ್‌ ಖಾನ್‌ ಅವರು ಮಹೇಂದ್ರ ಸಿಂಗ್‌ ಧೋನಿ ಅವರ ನಿವಾಸಕ್ಕೆ ತೆರಳಿ ವಿಶ್ವಕಪ್‌ ವಿಜೇತ ನಾಯಕನ ಹುಟ್ಟುಹಬ್ಬವನ್ನು ಆಚರಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಸಲಾನ್‌ಖಾನ್‌ ನಟನೆಯ ಟೈಗರ್‌ 3' ಚಿತ್ರವು ಇತ್ತೀಚೆಗೆ ಬಿಡುಗಡೆಯಾಗಿದ್ದು ಅಭಿಮಾನಿ ಗಳ ಮನ ರಂಜಿಸಿದೆ. ಖ್ಯಾತ ನಿರ್ದೇಶಕ ಎ.ಆರ್‌.ಮುರುಗದಾಸ್‌‍ ರೊಂದಿಗೆಸಿಕಂದರ್‌’ ಚಿತ್ರದಲ್ಲಿ ಸಲಾನ್‌ಖಾನ್‌ ನಟಿಸುತ್ತಿದ್ದು, ಈ ಚಿತ್ರವು 2025ರ ಈದ್‌ ವೇಳೆಗೆ ಬಿಡುಗಡೆಯಾಗುವ ಸಂಭವವಿದ್ದು, ಈ ಚಿತ್ರದಲ್ಲಿ ಕನ್ನಡತಿ ರಶಿಕಾ ಮಂದಣ್ಣ ನಟಿಸಿದ್ದಾರೆ.

RELATED ARTICLES

Latest News