Friday, November 22, 2024
Homeರಾಷ್ಟ್ರೀಯ | Nationalಬಿಜೆಪಿಯ ಖಾಯಂ ಭಿನ್ನಮತೀಯ ಯತ್ನಾಳ್‌ ವಿರುದ್ಧ ಶಿಸ್ತು ಕ್ರಮಕ್ಕೆ ವರಿಷ್ಟರ ಚಿಂತನೆ

ಬಿಜೆಪಿಯ ಖಾಯಂ ಭಿನ್ನಮತೀಯ ಯತ್ನಾಳ್‌ ವಿರುದ್ಧ ಶಿಸ್ತು ಕ್ರಮಕ್ಕೆ ವರಿಷ್ಟರ ಚಿಂತನೆ

ಬೆಂಗಳೂರು,ಆ.5- ಸ್ವಪಕ್ಷೀಯರ ವಿರುದ್ದವೇ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಸಾಕಷ್ಟು ಮುಜುಗರ ಸೃಷ್ಟಿಸುತ್ತಿರುವ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕ ಹಾಗೂ ಬಿಜಾಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಇಲ್ಲವೇ ಶಿಸ್ತುಕ್ರಮ ಜರುಗಿಸಲು ಕೇಂದ್ರ ವರಿಷ್ಟರು ಗಂಭೀರ ಚಿಂತನೆ ನಡೆಸಿದ್ದಾರೆ.

ತಮ ವಿಭಿನ್ನ ಮಾತು, ನಡೆ-ನುಡಿ, ಹಾರ್ಡ್‌ಕೋರ್‌ ಹಿಂದುತ್ವದ ಚಿಂತನೆಗಳ ನೆಲೆಯಲ್ಲಿ ಗುರುತಿಸಿಕೊಂಡ ಯತ್ನಾಳ್‌ ಹೆಸರು ಮೂರು ದಶಕದ ರಾಜ್ಯ ರಾಜಕಾರಣದಲ್ಲಿ ಜನಜನಿತ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಮೇಲಂತೂ ಯತ್ನಾಳ್‌ ನಾಲಿಗೆ ಬಿಎಸ್‌‍ವೈ ಕುಟುಂಬದ ವಿರುದ್ಧ ಮತ್ತಷ್ಟು ಹರಿತಗೊಂಡಿದೆ. ಯಾವ ಮುಲಾಜು ಇಲ್ಲದೇ ಮನಬಂದಂತೆ ಬಿಎಸ್‌‍ವೈ ಕುಟುಂಬ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ.

ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್‌‍ ಜಂಟಿಯಾಗಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲೇ ಯತ್ನಾಳ್‌ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಬಹಿರಂಗವಾಗಿಯೇ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿರುವುದು ಸ್ವತಃ ಕಾರ್ಯಕರ್ತರಿಗೆ ಸಾಕಷ್ಟು ಇರುಸು ಮುರಿಸು ಉಂಟು ಮಾಡಿದೆ.

ಯತ್ನಾಳ್‌ ಅವರ ಹೇಳಿಕೆಗಳನ್ನು ಕಾಂಗ್ರೆಸ್‌‍ ಅಸ್ತ್ರ ಮಾಡಿಕೊಳ್ಳುತ್ತಿದ್ದು, ನಮ ವಿರುದ್ದ ಆರೋಪ ಮಾಡುತ್ತಿರುವ ನೀವು ( ಬಿಜೆಪಿಯವರು) ಮೊದಲು ನಿಮ ಪಕ್ಷದ ಹಿರಿಯ ನಾಯಕ ಯತ್ನಾಳ್‌ ಹೇಳಿಕೆಗೆ ಉತ್ತರ ಕೊಡಿ ಎಂದು ಕೈ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಇದರಿಂದಾಗಿ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದು, ಅವರ ಮೇಲೆ ಏಕೆ ಶಿಸ್ತು ಕ್ರಮ ಜರಗಿಸಬಾರದು ಎಂದು ಪಕ್ಷದವರನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

ಇದೀಗ ಯತ್ನಾಳ್‌ ಹೇಳೀಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ದೆಹಲಿ ಬಿಜೆಪಿ ನಾಯಕರು ಅವರ ಮೇಲೆ ಶಿಸ್ತು ಕ್ರಮ ಇಲ್ಲವೇ ಪಕ್ಷದಿಂದಲೇ ಉಚ್ಛಾಟನೆ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಡಾ ಹಗರಣ ಇಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿನವರೆಗೂ ಸಿದ್ದರಾಮಯ್ಯ ಅವರ ರಾಜೀನಾಮಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವಾಗ ವಿಜಯೇಂದ್ರ ನಡೆ ಬಗ್ಗೆ ಯತ್ನಾಳ್‌ ಅನುಮಾನ ವ್ಯಕ್ತಪಡಿಸಿ, ಸ್ಫೋಟಕ ಹೇಳಿಕೆ ನೀಡಿದ್ದರು.

ವಿಜಯೇಂದ್ರ ಪಕ್ಷದ ಹಿತಾಸಕ್ತಿಗಾಗಿ ಪಾದಯಾತ್ರೆ ಮಾಡುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅಣತಿ ಮೇರೆಗೆ ಸಿದ್ದರಾಮಯ್ಯ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಲು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆೞೞ ಎಂದು ನೇರವಾಗಿ ಆರೋಪಿಸಿದ್ದರು.

ವಿಧಾನಸಭೆಯ ಅಽವೇಶನದಲ್ಲಿ ಕೂಡ ಸ್ವಪಕ್ಷದ ನಾಯಕರಿಗೆ ಯತ್ನಾಳ್‌ ಮುಜುಗರ ಸೃಷ್ಟಿಸಿ ಮಾತನಾಡಿದ್ದರು. ವಾಲೀಕಿ, ಮುಡಾ ಹಗರಣದಲ್ಲಿ ಬಿಜೆಪಿ ಪ್ರತಿಭಟನೆ ಏನೋ ಮಾಡುತ್ತಿದೆ. ಆದರೆ ಪ್ರತಿಭಟನೆ ನಂತರ ರಾತ್ರಿ ಅಶೋಕ್‌ ಸಿದ್ದರಾಮಯ್ಯಗೆ ಕರೆ ಮಾಡಿ, ತಪ್ಪು ತಿಳ್ಕೋಬೇಡಿ ಸರ್‌, ಮೇಲಿನವರ ಒತ್ತಡ ಇತ್ತು ಅಂತಾರೆ.

ಯಾವ ಅಪ್ಪ ಮಕ್ಕಳಿಗೂ ಯಾರೂ ಅಂಜಬಾರದು, ಯಾರಿಗೂ ಅಪ್ಪಾಜಿ ಅನ್ನಬಾರದು, ನಮ ಅಪ್ಪನಿಗೆ ಮಾತ್ರ ಅಪ್ಪ ಅನ್ನಬೇಕು. ಈ ಅಪ್ಪಾಜಿ ಸಂಸ್ಕೃತಿ ನಮ ರಾಜ್ಯದಿಂದ ಹೋಗಬೇಕು ಎಂದು ಯಡಿಯೂರಪ್ಪ ಹೆಸರು ಹೇಳದೇ ಕುಟುಕಿದ್ದರು. ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ, 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಬಸವರಾಜ ಬೊಮಾಯಿ ಅವರು ಮುಖ್ಯಮಂತ್ರಿಯಾದ ವೇಳೆ ಸಿಎಂ ಸ್ಥಾನಕ್ಕೆ 2,500 ಕೋಟಿ ರೂಪಾಯಿ, ಮಂತ್ರಿಸ್ಥಾನಕ್ಕೆ 100 ಕೋಟಿ ರೂಪಾಯಿ ಎಂದು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರು. ಇವರ ವಿವಾದದ ಮಾತುಗಳು ಪಟ್ಟಿ ಮಾಡುತ್ತ ಹೋದರೆ ಹನುಮಂತನ ಬಾಲದಷ್ಟು ಬೆಳೆಯುತ್ತೆ. ಆದರೆ, ಯತ್ನಾಳ್‌ ಮಾಡಿರುವ ಆರೋಪಗಳಿಗೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಕಳೆದ ವಿಧಾನಸಭಾ ಚುನಾವಣೆ ನಂತರ ಪ್ರತಿಪಕ್ಷ ನಾಯಕ ಇಲ್ಲವೇ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಆಕಾಂಕ್ಷೆಯನ್ನು ಯತ್ನಾಳ್‌ ವ್ಯಕ್ತಪಡಿಸಿದ್ದರು. ಅಲ್ಲೂ ಅವರಿಗೆ ನಿರಾಸೆಯಾಯಿತು. ಆರ್‌.ಅಶೋಕ್‌ ಪ್ರತಿಪಕ್ಷ ನಾಯಕರಾದರು. ಬಿಎಸ್‌‍ವೈ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾದರು. ಬಿಎಸ್‌‍ವೈ ಕುಟುಂದ ಹಿಡಿತ ಇರೋವರೆಗೂ ತಮಗೆ ಪಕ್ಷದಲ್ಲಿ ಸ್ಥಾನಗಳು ಸಿಗುವುದಿಲ್ಲ ಎಂಬುದು ಯತ್ನಾಳ್‌ಗೆ ಮನವರಿಕೆಯಾದಂತಿದೆ. ಹೀಗಾಗಿ ಬಿಎಸ್‌‍ವೈ ಹಿಡಿತವನ್ನು ಸಡಿಲಗೊಳಿಸಲು ಅವಿರತ ಪ್ರಯತ್ನಕ್ಕೆ ಅವರು ಮುಂದಾದಂತೆ ಕಾಣುತ್ತಿದೆ.

ಇದಕ್ಕಾಗಿ ಬಿಎಸ್‌‍ವೈ ಕುಟುಂಬದ ವಿರುದ್ಧ ಒಂದಲ್ಲಾ ಒಂದು ಕಾರಣವಿಟ್ಟುಕೊಂಡು ಯತ್ನಾಳ್‌ ಯುದ್ಧ ಸಾರುತ್ತಾರೆ.
ತಮ ಹೇಳಿಕೆಗಳ ಪರಿಣಾಮ ಏನಾಗಬಹುದೆಂದು ಅರಿತಿರುವ ಯತ್ನಾಳ್‌ ಪಕ್ಷದಿಂದ ಉಚ್ಛಾಟನೆ ಮಾಡಿದರೆ ಮಾಡಲಿ ಎಂಬ ನಿರ್ಧಾರಕ್ಕೆ ಬಂದಂತಿದೆ. ಶಾಸನಾತಕವಾಗಿ ಈ ಪ್ರಕ್ರಿಯೆಗೆ ಯಾವುದೇ ಮಾನ್ಯತೆಗಳಿಲ್ಲ, ಶಾಸಕತ್ವಕ್ಕೂ ಧಕ್ಕೆ ಆಗುವುದಿಲ್ಲ.

ಯಡಿಯೂರಪ್ಪ ವಿರುದ್ಧ ಮತ್ತಷ್ಟು ದಾಳಿಗೆ ಪರವಾನಗಿ ಸಿಕ್ಕಂತಾಗುತ್ತದೆ. ಈ ಹೋರಾಟವನ್ನು ಜೀವಂತವಾಗಿಟ್ಟುಕೊಂಡು ತಮದೇ ಸಮುದಾಯವಾದ ಪಂಚಮಸಾಲಿ ಲಿಂಗಾಯಿತರ ಪ್ರಶ್ನಾತೀತ ನಾಯಕನಾಗಿ ಹೊರ ಹೊಮುವುದು ಆ ಮೂಲಕ ಯಡಿಯೂರಪ್ಪ ಲಿಂಗಾಯಿತರ ಪ್ರಶ್ನಾತೀತ ನಾಯಕರಲ್ಲ ಎಂಬುದನ್ನು ಬಿಜೆಪಿ ನಾಯಕತ್ವಕ್ಕೆ ಮನದಟ್ಟು ಮಾಡಿಕೊಡುವುದು ಅವರ ಸದ್ಯದ ತಂತ್ರ.

ಇದನ್ನು ಅರಿತಿರುವ ಯಡಿಯೂರಪ್ಪ, ಇದೇ ಸಮುದಾಯಕ್ಕೆ ಸೇರಿದ ಅರವಿಂದ ಬೆಲ್ಲದ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕನ ಸ್ಥಾನಕ್ಕೆ ನೇಮಕವಾಗುವಂತೆ ನೋಡಿಕೊಳ್ಳುವ ಮೂಲಕ ಇಡೀ ಸಮುದಾಯದ ಬೆಂಬಲ ಯತ್ನಾಳ್‌ಗೆ ಇಲ್ಲ ಎಂಬುದನ್ನು ಸಾಬೀತು ಪಡಿಸುವ ತಂತ್ರಕ್ಕೆ ಶರಣಾಗಿದ್ದಾರೆ. ಕೋವಿಡ್‌ ಹಗರಣದ ಕುರಿತು ಮಾಡಿರುವ ಆರೋಪಗಳ ಮೂಲಕ ಕಾಂಗ್ರೆಸ್‌‍ ನಾಯಕರ ಕೈಗೆ ಯತ್ನಾಳ್‌ ತಾವಾಗೇ ಅಸ ಕೊಟ್ಟಿದ್ದಾರೆ.

ಪಕ್ಷೀಯ ನಾಯಕರ ವಿರುದ್ಧವೇ ಬಂಡಾಯ ಸಾರಿರುವ ಅವರಿಗೆ ದಿಲ್ಲಿ ಬಿಜೆಪಿ ಅಂಗಳದಲ್ಲಿರುವ ರಾಜ್ಯದ ಕೆಲವು ಬಿಜೆಪಿ ನಾಯಕರ ಬೆಂಬಲ ಇದೆ. ಅವರಿಗೂ ರಾಜ್ಯದಲ್ಲಿ ತಮ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಸದ್ಯಕ್ಕೆ ಈ ಗೊಂದಲಗಳು ಬಗೆಹರಿಯುವ ಸೂಚನೆಗಳು ಇಲ್ಲ.

RELATED ARTICLES

Latest News