ಬೆಳಗಾವಿ, ಡಿ.14- ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಯನ್ನು ತಡೆಗಟ್ಟಲು ಐಪಿಸಿ ಸೆಕ್ಷನ್ಗೆ ತಿದ್ದುಪಡಿ ತರಲಾಗುವುದು, ಜೊತೆಗೆ ವಿಶೇಷ ಕಾಯ್ದೆ ಹಾಗೂ ಪ್ರತ್ಯೇಕ ನೀತಿ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, ಸಾಮಾಜಿಕವಾದ ಈ ಪಿಡುಗನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಆಧುನಿಕ ತಂತ್ರಜಾ್ಞನದಿಂದ ಭ್ರೂಣ ಲಿಂಗ ಪತ್ತೆ ಮಾಡುವುದು ಸುಲಭವಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಮಗು ಜನಿಸಿದ ಬಳಿಕ ಹೆಣ್ಣು ಮಗುವಾಗಿದ್ದರೆ ಅದರ ಬಾಯಿಗೆ ಕಾಳು ಹಾಕಿ ಉಸಿರುಗಟ್ಟುವಂತೆ ಮಾಡಿ ಕೊಲೆ ಮಾಡುವ ಉದಾಹರಣೆಗಳಿವೆ. ಇದು ಸಮಾಜದ ಕೆಟ್ಟ ಮನಸ್ಥಿತಿ ಎಂದು ಹೇಳಿದರು.
2002ರಿಂದ 2023ರವರೆಗೆ 21 ವರ್ಷದಲ್ಲಿ 100 ಭ್ರೂಣ ಲಿಂಗ ಪತ್ತೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಧಿಕಾರಿಗಳು ಕಾಳಜಿ ಹಾಗೂ ಪ್ರಾಣಿಕತೆಯಿಂದ ತಪಾಸಣೆ ನಡೆಸಿಲ್ಲ. ಇನ್ನೂ ಮುಂದೆ ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದರು.ಹೆಣ್ಣು ಭ್ರೂಣ ಹತ್ಯೆ ಮೊದಲಿನಿಂದಲೂ ನಡೆಯುತ್ತಿದೆ. ಆದರೆ ನಾವು ಅದನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತೇವೆ.
ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿದ ಪತಿರಾಯ
ಭ್ರೂಣ ಹತ್ಯೆಯಿಂದ ದೇಶದಲ್ಲಿ ಲಿಂಗಾನುಪಾತ 979ರಿಂದ 947ಕ್ಕೆ ಕುಸಿದಿದೆ. ಜನರೂ ಭ್ರೂಣ ಹತ್ಯೆಯನ್ನು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅಕ್ರಮ ಸೆಂಟರ್ಗಳು, ಕೃತ್ಯಗಳು ಹೆಚ್ಚಾಗುತ್ತಿವೆ. ಈ ಕುರಿತು ಜನಜಾಗೃತಿ ಹೆಚ್ಚಾಗಬೇಕು, ಜೊತೆಗೆ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭ್ರೂಣ ಹತ್ಯೆ ಮಾಡಿಸಿದವರು ಹಾಗೂ ಮಾಡಿದವರು ಸೇರಿ ಎರಡು ಕಡೆಯವರನ್ನು ಹೊಣೆ ಮಾಡಬೇಕು. ಭ್ರೂಣ ಹತ್ಯೆ ಎಂದರೆ ಅದು ಕೊಲೆಯೇ ಆಗಿದೆ ಎಂದರು.
ಇಂತಹ ವೇಳೆಯಲ್ಲಿ ತಾಯಿ ಹೊಣೆಗಾರಿಕೆಯಿಂದ ನುಣಚಿಕೊಳ್ಳುವಂತಿಲ್ಲ. ಗರ್ಭಪಾತ ಮಾಡಿಸುವುದು ನನಗೆ ಗೋತ್ತಿಲ್ಲ, ಒತ್ತಡ ಹೇರಿ ಭ್ರೂಣ ಹತ್ಯೆ ಮಾಡಿಸಿದ್ದಾರೆ ಎಂದು ಹೇಳುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು. ಮಂಡ್ಯದಲ್ಲಿ ನಡೆದ ಪ್ರಕರಣವನ್ನು ಗಮನಿಸುವಲ್ಲಿ ಅಧಿಕಾರಿಗಳು ಲೋಪವೆಸಗಿದ್ದಾರೆ. ಬೆಂಗಳೂರಿನ ಬಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ಪತ್ತೆ ಹಚ್ಚಿದ್ದಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪೊಲೀಸರ ತನಿಖೆಯಲ್ಲಿ ಹೆಚ್ಚು ಪ್ರಕರಣಗಳು ನಡೆದಿರುವುದು ಸಮಾಜದ ಕಣ್ಣು ತೆರೆಸಿದೆ ಎಂದರು.
ಇದನ್ನು ತಡೆಯಲು ಕಾನೂನು ಜಾರಿಗೆ ತರಬೇಕು. ಭ್ರೂಣ ಲಿಂಗ ಪತ್ತೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಿ, ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಭ್ರೂಣ ಪತ್ತೆ ಪ್ರತ್ಯೇಕ ಕಾನೂನು ಇದೆ. ಭ್ರೂಣ ಹತ್ಯೆ ತಡೆಯಲು ಚಾಲ್ತಿಯಲ್ಲಿರುವ ಕಾನೂನು ಸಮರ್ಥವಾಗಿಲ್ಲ. ಪ್ರಸ್ತುತ ಐಪಿಸಿ ಸೆಕ್ಷನ್ ಸೆಕ್ಷನ್ 315, 316, ಬಳಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಐಪಿಸಿಗೂ ತಿದ್ದುಪಡಿ ತರಲಾಗುವುದು. ಬಯ್ಯಪ್ಪನಹಳ್ಳಿ ಪ್ರಕರಣದಲ್ಲಿ ದಾಖಲಿಸಲಾಗಿದ್ದ ಸೆಕ್ಷನ್ಗಳನ್ನೇ ಆಧಾರವಾಗಿಟ್ಟುಕೊಂಡು ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ ಎಂದರು.
ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆಯ ಮೇಲೆ ನಿಗಾವಹಿಸಲಾಗುತ್ತಿದೆ. ಇದು ಮಂಡ್ಯ ಅಥವಾ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜಾ್ಯದ್ಯಂತ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಅಧಿಕಾರಿಗಳು ಗಂಭೀರ ಸ್ವರೂಪದ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ ಎಂದರು.
ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆ ನಡೆಸಲಾಗುವುದು. ಈ ಕಾರ್ಯಚರಣೆಗಾಗಿಯೇ ಎಸಿಪಿ ದರ್ಜೆಯ ಅಧಿಕಾರಿಯನ್ನು ವಿಶೇಷವಾಗಿ ನಿಯೋಜಿಸುವಂತೆ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.
ಹೊಸಕೋಟೆಯಲ್ಲಿ ಅಧಿಕಾರಿಗಳು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಹತ್ಯೆಗೆ ಒಳಗಾದ ಭ್ರೂಣ ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಭ್ರೂಣ ಹತ್ಯೆ ತಡೆಯಲು ಸೂಕ್ತ ಕಾನೂನು ತರುವುದು ಅನಿವಾರ್ಯ. ಮುಂದಿನ ಅವೇಶನದ ವೇಳೆಗೆ ಕಾನೂನು ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾನೂನು ರೂಪಿಸುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಚರ್ಚೆಯಲ್ಲಿ ಭಾಗವಹಿಸಿದ್ದ ಆರ್.ಅಶೋಕ್, ಚಾಲ್ತಿಯಲ್ಲಿರುವ ಕಾನೂನನ್ನು ಭ್ರೂಣ ಹತ್ಯೆ ಮಾಡಿದ ಕುಟುಂಬದವರನ್ನು ಮಾತ್ರ ಹೊಣೆ ಮಾಡಲು ಬಳಕೆಯಾಗುತ್ತದೆ. ಆಸ್ಪತ್ರೆಗಳು ಹಾಗೂ ಇತರ ಸಂಸ್ಥೆಗಳನ್ನು ಜವಾಬ್ದಾರಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಕಾನೂನು ತಿದ್ದುಪಡಿ ತನ್ನಿ ಎಂದರು.
ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿದ ಪತಿರಾಯ
ರಾಜಾ್ಯದ್ಯಂತ ಭ್ರೂಣ ಹತ್ಯೆ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್ಐಟಿ ತಂಡ ರಚಿಸಬೇಕು. ಕಳೆದ 27 ವರ್ಷದಲ್ಲಿ ಆರೋಗ್ಯ ಇಲಾಖೆ ಕೇವಲ 87 ಭ್ರೂಣಹತ್ಯೆ ಪ್ರಕರಣವನ್ನು ವರದಿ ಮಾಡಿದೆ. ಮಂಡ್ಯ, ಮೈಸೂರು, ರಾಮನಗರ ಬೆಂಗಳೂರು ಸೇರಿದಂತೆ ರಾಜಾ್ಯದ್ಯಂತ ಭ್ರೂಣಹತ್ಯೆ ಪ್ರಕರಣಗಳು ವ್ಯಾಪಿಸಿದೆ. ಇಂತಹ ದುಷ್ಕೃತ್ಯದಲ್ಲಿ ತೊಡಗಿರುವ ವರಿಗೆ ಮರಣದಂಡನೆ ಯಂತಹ ಕಠಿಣ ಶಿಕ್ಷೆಯನ್ನು ವಿಸಬೇಕು ಎಂದು ಒತ್ತಾಯಿಸಿದರು.
ಕೆಲ ವರದಿಗಳನ್ನು ನೋಡುತ್ತಿದ್ದರೆ ಒಬ್ಬೊಬ್ಬ 200, 300, 400 ಭ್ರೂಣ ಹತ್ಯೆ ಮಾಡಿದ್ದಾರೆ. ಇದು ಮಾನವಕುಲಕ್ಕೆ ಕಳಂಕ ತರುವ ವಿಷಯ. ಈ ಹತ್ಯೆಗೆ ಮೂಢನಂಬಿಕೆಗಳು ಕಾರಣ, ನಾನು ಅವನ್ನು ನಂಬುವುದಿಲ್ಲ, ನಮ್ಮಲಿ ಯಾರಾದರೂ ಸತ್ತರೆ ಅವರಿಗೆ ಕೊನೆ ಕಾರ್ಯಗಳನ್ನು ಮಾಡಲು ಗಂಡು ಮಗು ಬೇಕು ಎನ್ನುತ್ತಾರೆ. ಮತ್ತು ವರದಕ್ಷಿಣೆ ಕಾರಣದಿಂದಲೂ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತಿದ್ದೆ. ಗರ್ಭಿಣಿ ಹೆಣ್ಣಿನ ಮೇಲೆ ಗಂಡ ಸೇರಿದಂತೆ ಕುಟುಂಬದವರು ಒತ್ತಡ ಹೇರಿದಾಗ ಈ ರೀತಿಯ ಕೃತ್ಯಗಳು ನಡೆಯುತ್ತವೆ ಎಂದರು.
ಇವತ್ತಿನ ಜಗತ್ತಿನಲ್ಲಿ ಹೆಣ್ಣು ಅಂತರಿಕ್ಷಕ್ಕೆ ಹಾರಿದ್ದಾರೆ, ಭಾರತ ಪಾಕ್ ಗಡಿಯಲ್ಲಿ ಎ ಕೆ 47 ಬಂದೂಕು ಹಿಡಿದು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಮಹಿಳೆಯರು ಪಾಕಿಸ್ತಾನದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂದರೆ ಅದು ಮನುಕುಲ ತಲೆ ತಗ್ಗಿಸುವ ವಿಚಾರ ಎಂದರು. ಇದು ಕೇವಲ 4-5 ತಂಡದಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿಗೆ ಸೀಮಿತವಾಗಿಲ್ಲ ರಾಜ್ಯ ಬೇರೆ ಬೇರೆ ಕಡೆ ಸುಮಾರು 20 ರಿಂದ 30 ತಂಡ ಇರಬಹುದು ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಆರೋಪಿಗಳು 200-300 ಕೋಟಿಯಷ್ಟು ಆಸ್ತಿ ಮಾಡಿದ್ದಾರೆ. ವೈದ್ಯರು ಸೇರಿಕೊಂಡಿದ್ದಾರೆ. ಇದಕ್ಕಾಗಿಯೇ ಆಸ್ಪತ್ರೆಗಳನ್ನು ನಿರ್ಮಿಸಿದರೆ ಆ ಆಸ್ಪತ್ರೆಯ ಹೆಸರನ್ನು ನಮ್ಮ ಮನೆ ಎಂದು ಇಟ್ಟಿದ್ದಾರೆ. ನಾನು ಸಚಿವನಾಗಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಮಾಡಿದಾಗ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಅನೇಕ ಪ್ರಭಾವಿಗಳು ನನ್ನ ಮೇಲೆ ಒತ್ತಡವೇರಿ ಅವರನ್ನು ಬಿಡಿ ಎನ್ನುತ್ತಿದ್ದರು. ಸುಮಾರು 4 ಸಾವಿರದಿಂದ 5 ಸಾವಿರ ನಕಲಿ ವೈದ್ಯರು ಇದ್ದಾರೆ. ನನ್ನ ಜೊತೆ ಪೊಲೀಸರನ್ನು ಕರೆದುಕೊಂಡು ಹೋಗಿ ಅವರನ್ನು ಬಂದಿಸಿದ್ದೆ ಎಂದರು. ಇಂತಹ ಪ್ರಕರಣಗಳಿಗೆ ಪ್ರಭಾವಿಗಳ ಒತ್ತಡ ಬರುತ್ತೆ, ಕೆಲ ಪ್ರಕರಣಗಲ್ಲಿ ಆಸ್ಪತ್ರೆಯಾಗಲಿ, ವೈದ್ಯರಿಗೆ ಶಿಕ್ಷೆ ಯಾಗಲ್ಲ ಬೇರೆ ಯಾರ ಮೇಲೆ ಪ್ರಕರಣ ದಾಖಲಾಗಿರುತ್ತದೆ ಎಂದರು.