Tuesday, December 3, 2024
Homeರಾಷ್ಟ್ರೀಯ | Nationalಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿದ ಪತಿರಾಯ

ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿದ ಪತಿರಾಯ

ಹೈದರಾಬಾದ್,ಡಿ.14- ಕುಡಿತ ಬಿಡದಿದ್ದಕ್ಕೆ ಬೇಸತ್ತು ಸಾಯಲು ಮುಂದಾಗಿದ್ದ ಪತ್ನಿಯನ್ನು ತಡೆಯದೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖುದ್ದು ಪತಿಯೇ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆರ್ಶಿಯಾ ಆತ್ಮಹತ್ಯೆ ಮಾಡಿಕೊಂಡಿರುವ ಪತ್ನಿ. ಪತಿ ರಸೂಲ್ ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ರೆಕಾರ್ಡ್ ಮಾಡಿಕೊಂಡಿರುವ ಭೂಪ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮುರಾದ್ನಗರ ಸೈಯದ್ ಅಲಿಗುಡದಲ್ಲಿ ವಾಸಿಸುತ್ತಿದ್ದ ರಸೂಲ್ ಮತ್ತು ಅರ್ಷಿಯಾ ಬೇಗಂ ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ರಸೂಲ್ ಆಗಲೇ ಮದುವೆಯಾಗಿದ್ದರಿಂದ ಅದನ್ನು ಮುಚ್ಚಿಟ್ಟು ಅರ್ಷಿಯಾಳನ್ನು 2ನೇ ಮದುವೆಯಾಗಿದ್ದ.

ಕುಡಿತಕ್ಕೆ ದಾಸನಾಗಿದ್ದ ಪತಿಗೆ ಕುಡಿತ ಬಿಡುವಂತೆ ಆರ್ಶಿಯಾ ಸಾಕಷ್ಟು ಮನವಿ ಮಾಡಿದ್ದಳು. ಕುಡಿತದ ಚಟವಿದ್ದ ಕಾರಣ ಇಬ್ಬರ ನಡುವೆ ಬಹುತೇಕ ದಿನವೂ ಜಗಳ ನಡೆಯುತ್ತಿದ್ದು, ಗಂಡನ ಚಟದಿಂದ ಮಾನಸಿಕವಾಗಿ ಬೇಸತ್ತು ಕುಡಿತ ಬಿಡದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಹೆದರಿಸಿದ್ದಾಳೆ.

ಮತ್ತೊಬ್ಬ ಮಹಿಳೆಯನ್ನು ಬಲಿಪಡೆದ ಕಿಲ್ಲರ್ ಬಿಎಂಟಿಸಿ

ಮಧ್ಯರಾತ್ರಿ ಇಬ್ಬರ ನಡುವೆ ಜಗಳ ಮತ್ತೆ ನಡೆದಿದ್ದು, ಆಕೆ ನೇಣು ಹಾಕಿಕೊಳ್ಳಲು ಮುಂದಾಗಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ರಸೂಲ್ ತನ್ನ ಸೆಲ್ ಫೋನ್ ನಲ್ಲಿ ವಿಡಿಯೋ ತೆಗೆಯಲು ಆರಂಭಿಸಿದ್ದಾನೆ. ಇದು ಆಕೆಯನ್ನು ಮತ್ತಷ್ಟು ಕೆರಳಿಸಿದೆ. ಕೊನೆಗೂ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅರ್ಶಿಯಾ ತನಗೆ ಹೆದರಿಸಲು ಈ ರೀತಿ ಮಾಡುತ್ತಿದ್ದಾನೆ ಎಂದು ರಸೂಲ್ ವೀಡಿಯೋ ಮಾಡಿದ್ದು, ಆದರೆ ಆಕೆ ನಿಜವಾಗಲು ಸಾಯುತ್ತಾಳೆ ಅಂದುಕೊಂಡಿರಲಿಲ್ಲ ಎಂದು ರಸೂಲ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪತ್ನಿ ಸಾವಿಕೆ ಕಾರಣ ಎಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

RELATED ARTICLES

Latest News