Tuesday, December 3, 2024
Homeಬೆಂಗಳೂರುಮತ್ತೊಬ್ಬ ಮಹಿಳೆಯನ್ನು ಬಲಿಪಡೆದ ಕಿಲ್ಲರ್ ಬಿಎಂಟಿಸಿ

ಮತ್ತೊಬ್ಬ ಮಹಿಳೆಯನ್ನು ಬಲಿಪಡೆದ ಕಿಲ್ಲರ್ ಬಿಎಂಟಿಸಿ

ಬೆಂಗಳೂರು, ಡಿ.14- ಅತಿ ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ವೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಚಕ್ರಕ್ಕೆ ಸಿಲುಕಿ ಗೃಹಿಣಿ ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸಿಂಗಸಂದ್ರದ ನಿವಾಸಿ ಸೀಮಾ(22) ಮೃತಪಟ್ಟ ಗೃಹಿಣಿ. ಇವರ ಪತಿ ಗುರುಮೂರ್ತಿ ಹಾಗೂ ಒಂದೂವರೆ ವರ್ಷದ ಮಗು ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಸಂಜೆ 6.45ರ ಸುಮಾರಿನಲ್ಲಿ ಸಿಂಗಸಂದ್ರದಿಂದ ಗುರುಮೂರ್ತಿ ಅವರು ಪತ್ನಿ ಸೀಮಾ ಹಾಗೂ ಮಗುವನ್ನು ಕರೆದುಕೊಂಡು ಸ್ಕೂಟರ್ನಲ್ಲಿ ಪೊ್ರೀ ಕಬ್ಬಡಿ ನೋಡಲು ಹೋಗುತ್ತಿದ್ದರು.ಸಿಲ್ಕ್ಬೋರ್ಡ್ ಜಂಕ್ಷನ್ ಅಪ್ಪರ್ರ್ಯಾಂಪ್ ಬಳಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಿಎಂಟಿಸಿ ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.

ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ಡಿಕ್ಕಿ ಹೊಡೆದ ರಭಸಕ್ಕೆ ಸೀಮಾ ಅವರು ಒಂದು ಕಡೆ ಬಿದ್ದಾಗ ಅವರ ಮೇಲೆಯೇ ಬಸ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.ಮತ್ತೊಂದು ಬದಿ ಮಗು ಹಾಗೂ ಗುರುಮೂರ್ತಿ ಬಿದ್ದಿದ್ದರಿಂದ ಇವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಬಸ್ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಮಡಿವಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಸೆಂಟ್ಜಾನ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

RELATED ARTICLES

Latest News